ಶುಲ್ಕ ಏರಿಕೆ ಸಾಧ್ಯವಿಲ್ಲ: ಆಡಳಿತ ಮಂಡಳಿಗಳಿಗೆ ಸರ್ಕಾರ ತಿರುಗೇಟು

ವೈದ್ಯ ಹಾಗೂ ದಂತ ವೈದ್ಯ ಕೋರ್ಸುಗಳ ಶುಲ್ಕವನ್ನು ಶೇ. 100ರಷ್ಟು ಏರಿಕೆ ಮಾಡುವಂತೆ ಖಾಸಗಿ ಕಾಲೇಜುಗಳ ಆಡಳಿತ ಮಂಡಳಿ ಹಿಡಿದಿರುವ ಪಟ್ಟಿಗೆ ಸರ್ಕಾರ ತಿರುಗೇಟು ನೀಡಲು ಮುಂದಾಗಿದೆ.
ಡಾ. ಶರಣ ಪ್ರಕಾಶ್ ಪಾಟೀಲ್
ಡಾ. ಶರಣ ಪ್ರಕಾಶ್ ಪಾಟೀಲ್

ಬೆಂಗಳೂರು:  ವೈದ್ಯ ಹಾಗೂ ದಂತ ವೈದ್ಯ ಕೋರ್ಸುಗಳ ಶುಲ್ಕವನ್ನು ಶೇ. 100ರಷ್ಟು ಏರಿಕೆ ಮಾಡುವಂತೆ ಖಾಸಗಿ ಕಾಲೇಜುಗಳ ಆಡಳಿತ ಮಂಡಳಿ ಹಿಡಿದಿರುವ ಪಟ್ಟಿಗೆ ಸರ್ಕಾರ ತಿರುಗೇಟು  ನೀಡಲು ಮುಂದಾಗಿದೆ.
ಕಳೆದ ಏಳೆಂಟು ವರ್ಷಗಳಿಂದ ವೈದ್ಯ, ದಂತ ವೈದ್ಯ, ಕೋರ್ಸುಗಳ ಪ್ರವೇಶ ಶುಲ್ಕ ಖಾಸಗಿಯವರು ನಿರೀಕ್ಷಿಸಿದ ಪ್ರಮಾಣದಲ್ಲಿ ಏರಿಕೆಯಾಗಿಲ್ಲ.
ಹಣದುಬ್ಬರಕ್ಕೆ ತಕ್ಕ ಪ್ರಮಾಣದಲ್ಲಿ ದರ ಏರಿಕೆ ಮಾಡದೇ ಇರುವುದರಿಂದ ನಮಗೆ ತೊಂದರೆಯಾಗಿದೆ ಎಂಬುದು ಖಾಸಗಿ ಆಡಳಿತ ಮಂಡಳಿಗಳ ಪಟ್ಟು.  ಆದರೆ ಇದಕ್ಕೆ ಪ್ರತಿಯಾಗಿ ತನ್ನ ಬಿಗಿ ನಿಲುವನ್ನು ಮುಂದುವರಿಸಿರುವ ಸರ್ಕಾರ ನೀವು ನಿರೀಕ್ಷಿಸಿದ ಮಟ್ಟದಲ್ಲಿ ವೈದ್ಯ, ದಂತ ವೈದ್ಯ ಕೋರ್ಸುಗಳ ಶುಲ್ಕ ಏರಿಕೆ ಮಾಡಲು ಸಾಧ್ಯವಿಲ್ಲ ಎಂದು ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್  ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು ಖಾಸಗಿ ಆಡಳಿತ ಮಂಡಳಿಗಳ ಜತೆ ಮಾತುಕತೆ ನಡೆಸಿ, ಈ ಭಾರಿ ಶುಲ್ಕ ಹೆಚ್ಚಳ ವಾದವನ್ನು ಪರಿಹರಿಸಿಕೊಳ್ಳಲಾಗುವುದು. ಏಕಕಾಲಕ್ಕೆ ಆಡಳಿತ ಮಂಡಳಿ ಹಾಗೂ ವಿದಾರ್ಥಿಗಳ ಹಿತ ಕಾಯಲಾಗುವುದು ಎಂದು ಹೇಳಿದರು.
ಸ್ನಾತಕೋತ್ತರ ವೈದ್ಯ ಕೋರ್ಸುಗಳ ಶುಲ್ಕವನ್ನು ಶೇ. 10ರಷ್ಟು  ಏರಿಕೆ ಮಾಡಲಾಗಿದೆ ಎಂದ ಅವರು, ಉಳಿದಂತೆ ಎಂಬಿಬಿಎಸ್  ಕೋರ್ಸುಗಳಿಗೆ ಸಂಬಂಧಿಸಿದಂತೆ ದರ ಏರಿಕೆ ಮಾಡಿ ಹೊರಡಿಸಲಾಗಿದ್ದ  ಆದೇಶ ತಪ್ಪು ಗ್ರಹಿಕೆಯಿಂದ ಪ್ರಕಟವಾಗಿತ್ತು. ಅದನ್ನು ಹಿಂಪಡೆಯಲಾಗಿದೆ ಎಂದರು.
ಸ್ನಾತಕೋತ್ತರ, ವೈದ್ಯ ಕೋರ್ಸುಗಳ ಶುಲ್ಕವನ್ನು ಶೇ.10 ರಷ್ಟು ಏರಿಕೆ ಮಾಡಲಾಗಿದೆ ಎಂದ ಅವರು, ಉಳಿದಂತೆ ಎಂಬಿಬಿಎಸ್ ಕೋರ್ಸುಗಳಿಗೆ ಸಂಬಂಧಿಸಿದಂತೆ ದರ ಏರಿಕೆ ಮಾಡಿ ಹೊರಡಿಸಲಾಗಿದ್ದ ಆದೇಶ ತಪ್ಪು ಗ್ರಹಿಕೆಯಿಂದ ಪ್ರಕಟವಾಗಿತ್ತು. ಅದನ್ನು ಹಿಂಪಡೆಯಲಾಗಿದೆ ಎಂದರು.
2006 ವೃತ್ತಿ ಶಿಕ್ಷಣ ಪ್ರವೇಶ, ಮತ್ತು ಶುಲ್ಕ ನಿಯಂತ್ರಣ ಜಾರಿಗೊಳಿಸುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ. ಅವರು, ಅಗತ್ಯ ಬಿದ್ದರೆ ಕಾಯ್ದೆಗೆ ತಿದ್ದುಪಡಿ ತಂದು ವಿಧಾನ ಮಂಡಲದ ಮುಂದಿನ ಅಧಿವೇಶನದಲ್ಲಿ ಮಂಡಿಸುತ್ತೇವೆ ಎಂದು ಹೇಳಿದರು.
ವೈದ್ಯ ಶಿಕ್ಷಣದಲ್ಲಿ ಖಾಸಗಿಯವರಿಗೆ ಶೇ. 60 ರಷ್ಟು  ಸೀಟುಗಳು, ಸರ್ಕಾರಕ್ಕೆ 40 ರಷ್ಟು ಸೀಟುಗಳು ಸಿಗುತ್ತಿವೆ. ಇದೇ ರೀತಿ, ಇಂಜಿನೀಯರಿಂಗ್ ಶಿಕ್ಷಣದಲ್ಲಿ 55: 45 ಅನುಪಾತದಲ್ಲಿ ಸೀಟುಗಳು ಲಭ್ಯವಾಗುತ್ತಿವೆ. ಕಾಯ್ದೆಯನ್ನು ಜಾರಿಗೆ ತಂದರೆ ಪರಿಸ್ಥಿತಿ ಇನ್ನಷ್ಟು ಬದಲಾಗಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ಇದುವರೆಗಿನ ಸಂಪ್ರದಾಯದಂತೆ ಖಾಸಗಿ ಆಡಳಿತ ಮಂಡಳಿಗಳ ಜೊತೆ ಮಾತುಕತೆ ನಡೆಸಿ, ಸೀಟು ಹಂಚಿಕೆ ಶುಲ್ಕ ನಿಗದಿ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದರು.
ಬೀದರ್ ನಲ್ಲಿ 550 ಹಾಸಿಗೆಗಳ ಆಸ್ಪತ್ರೆ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದ್ದು, ಒಂಬತ್ತು ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ರಾಯಚೂರಿನಲ್ಲು 550 ಹಾಸಿಗೆಗಳ ಸೌಲಭ್ಯ.ವಿರುವ ಹೊಸ ಆಸ್ಪತ್ರೆ ನಿರ್ಮಾಣ ಕಾರ್ಯ ಮುಗಿದಿದ್ದು ಮುಚ್ಚಿದ್ದ, ಒಪೆಕ್ ಆಸ್ಪತ್ರೆಯನ್ನು ಮೂರು ದಿನಗಳ ಹಿಂದೆ ಪ್ರಾರಂಭಿಸಲಾಗಿದೆ. ಹೊಸ ಘಟಕಗಳನ್ನು ತೆರೆಯಲಾಗಿದೆ. ಈ ಹಿಂದೆ ಒಪೆಕ್ ಅನ್ನು ಅಪೋಲೋ ಆಸ್ಪತ್ರೆ ನೋಡಿಕೊಳ್ತಿತ್ತು. ಈಗ ವೈದ್ಯ ಶಿಕ್ಷಣ ಇಲಾಖೆ ವತಿಯಿಂದಲೇ ನಡೆಸಲಾಗುವುದು ಎಂದರು.

 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com