ನೇಪಾಳದಲ್ಲಿ ರಾಜ್ಯ ವೈದ್ಯರ ಆರೋಗ್ಯ ಸೇವೆ

ನೇಪಾಳದಲ್ಲಿ ನಿರಂತರವಾಗಿ ಸಂಭವಿಸುತ್ತಿರುವ ಭೂಕಂಪನದ ನಡುವೆಯೇ ಜಗ್ಗದೇ, ಕುಗ್ಗದೇ ರಾಜ್ಯದ ಸೂಪರ್ ಸ್ಪೆಷಾಲಿಟಿ ವೈದ್ಯರು ಸೇವೆಯಲ್ಲಿ ನಿರತರಾಗಿದ್ದಾರೆ...
ನೇಪಾಳದಲ್ಲಿ ಚಿಕಿತ್ಸೆ ನಿರತ ರಾಜ್ಯದ ಸೂಪರ್ ಸ್ಪೆಷಾಲಿಟಿ ವೈದ್ಯರು
ನೇಪಾಳದಲ್ಲಿ ಚಿಕಿತ್ಸೆ ನಿರತ ರಾಜ್ಯದ ಸೂಪರ್ ಸ್ಪೆಷಾಲಿಟಿ ವೈದ್ಯರು

ಬೆಂಗಳೂರು: ನೇಪಾಳದಲ್ಲಿ ನಿರಂತರವಾಗಿ  ಸಂಭವಿಸುತ್ತಿರುವ ಭೂಕಂಪನದ ನಡುವೆಯೇ  ಜಗ್ಗದೇ, ಕುಗ್ಗದೇ ರಾಜ್ಯದ ಸೂಪರ್ ಸ್ಪೆಷಾಲಿಟಿ ವೈದ್ಯರು ಸೇವೆಯಲ್ಲಿ ನಿರತರಾಗಿದ್ದಾರೆ.

ಭಾನುವಾರ ಕಠ್ಮಂಡು ಸಮೀಪದಲ್ಲಿ ರಾಜ್ಯದ ವೈದ್ಯರ ತಂಡ ವೈದ್ಯಕೀಯ ಸೇವೆ ನೀಡುತ್ತಿದ್ದಾಗಲೇ ಭೂಕಂಪಿಸಿದೆ. ಆದರೂ, ಛಲಬಿಡದ ತ್ರಿವಿಕ್ರಮರಂತೆ ನೇಪಾಳಕ್ಕೆ ಬೆನ್ನುಹಾಕಿ ಕಾಲ್ಕೀಳದೇ ತಮ್ಮ ಸೇವೆಯನ್ನು ಮುಂದುವರಿಸಿದ್ದಾರೆ. ಶನಿವಾರ ರಾತ್ರಿ ವೈದ್ಯರು ವಿಶ್ರಾಂತಿಯಲ್ಲಿದ್ದ ಸ್ಥಳದಲ್ಲೂ ಎರಡು ಬಾರಿ ಭೂಕಂಪಿಸಿದೆ.

ಆಗ ಅಲ್ಲಿಯ ಜನರು ಭೂಕಂಪವಾದಾಗ ಕಟ್ಟಡ ತೊರೆದು ಬೀದಿಗೆ ನಿಂತಿದ್ದರು. ಆದರೂ, ವೈದ್ಯರು  ಸೇವೆ ನಿರಂತರವಾಗಿದೆ. ಇಷ್ಟು ದಿನ ಗಳವರೆಗೆ ಪ್ರಮುಖ ಪಟ್ಟಣಗಳಿಗೆ ಸೀಮಿತ ವಾಗಿದ್ದ ಆರೋಗ್ಯ ಸೇವೆ ಈಗ ನಿಧಾನವಾಗಿ ಗ್ರಾಮೀಣ ಭಾಗಕ್ಕೂ ವಿಸ್ತರಣೆಗೊಂಡಿದೆ.
ತಮ್ಮ ಚಟುವಟಿಕೆ ಕುರಿತು ವಿವರಣೆ ನೀಡಿದ ಬಿಜೆಪಿ ಡಾಕ್ಟರ್ಸ್ ಸೆಲ್ ಸಂಚಾಲಕ, ವೈದ್ಯ ಡಾ. ಮಂಜುನಾಥ್, ನಮ್ಮ ತಂಡ ಕಠ್ಮಂಡುವಿನ ಚಿರಾಯು ಆಸ್ಪತ್ರೆಯನ್ನು ಕೇಂದ್ರೀಕರಿಸಿಕೊಂಡು ಸೇವೆ ನೀಡುತ್ತಿದೆ. ಭಾನುವಾರದಿಂದ ಎರಡು ಬೇರೆ ಬೇರೆ ತಂಡ ರಚಿಸಿಕೊಂಡು ಒಂದು ತಂಡ ಆಸ್ಪತ್ರೆಯಲ್ಲಿ, ಮತ್ತೊಂದು ಗ್ರಾಮೀಣ ಭಾಗಕ್ಕೆ ತೆರಳಿ ಸೇವೆ ನೀಡಲಾರಂಭಿಸಿದೆ ಎಂದರು.

50 ಮಂದಿ ತಪಾಸಣೆ:
ಭಾನುವಾರ ಕಠ್ಮಂಡು ಸಮೀಪದ ಮಿಲಿಟರಿ ಕ್ಯಾಂಪ್‍ಗೆ ಭೇಟಿ ನೀಡಿ ಕರ್ನಾಟಕ ಬಿಜೆಪಿ ಡಾಕ್ಟರ್ ಸೆಲ್ ವೈದ್ಯರ ತಂಡವು ಅಲ್ಲಿನ 50ಕ್ಕೂ ಹೆಚ್ಚು ಗ್ರಾಮೀಣ ಜನರ ಆರೋಗ್ಯ ತಪಾಸಣೆ ನಡೆಸಿ, ಅಗತ್ಯವಿರುವರಿಗೆ ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕಳುಹಿಸಿದೆ. ಮುಂದು ವರಿದ ವೈದ್ಯರ ತಂಡ ತಾರುಕ ಎಂಬ 3,200 ಜನ ಸಂಖ್ಯೆಯ ಊರಿಗೆ ಭೇಟಿಕೊಟ್ಟು ಪರಿಶೀಲಿಸಿತು.

ಭೂಕಂಪದಲ್ಲಿ ಈ ಗ್ರಾಮದ ಎಲ್ಲ ಮನೆಗಳೂ ಕುಸಿದು ಬಿದ್ದಿವೆ. ಈವರೆಗೆ ವೈದ್ಯಕೀಯ ಸೇವೆಯೇ ಆ ಗ್ರಾಮಕ್ಕೆ ಸಿಕ್ಕಿರಲಿಲ್ಲ. ಭಾನುವಾರ ವೈದ್ಯರು ಬರುತ್ತಾರೆಂದು ತಿಳಿದ ಗ್ರಾಮದ ನೂರಾರು ಜನ ಒಟ್ಟಾಗಿ ಜಮಾಯಿಸಿದ್ದರು. ಪ್ರತಿಯೊಬ್ಬರನ್ನೂ ತಪಾಸಣೆ ನಡೆಸಿದ ವೈದ್ಯರ ತಂಡವು ಅಲ್ಲಿಯೇ ಚಿಕಿತ್ಸೆ ನೀಡಿ, ಅಗತ್ಯವಿರುವವರಿಗೆ ಆಸ್ಪತ್ರೆಗೆ ಕಳುಹಿಸಿಕೊಟ್ಟಿತು. ಡಾ.ಮಂಜುನಾಥ್ ಅವರೊಂದಿಗೆ ವೈದ್ಯರಾದ ಶರಣ್, ನಾಗರಾಜ್, ಅಶೋಕ್, ದಿನೇಶ್, ಸುಷ್ಮಾ, ಶ್ಯಾಂ, ಅರುಣ್ ಕುಮಾರ್, ಮುರಳಿ, ಸಂತೋಷ್. ಪ್ರಶಾಂತ್, ಡಾ.ಸಂತೋಷ್, ಪವಿತ್ರಾ ತಂಡದಲ್ಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com