ಪಾಸ್ ಮಾಡದಿದ್ದರೆ ಮಾಟಮಂತ್ರ ಮಾಡಿಸ್ತೀನಿ: ಮೌಲ್ಯಮಾಪಕರಿಗೆ ವಿದ್ಯಾರ್ಥಿ ಬೆದರಿಕೆ

ಪರೀಕ್ಷೆಯಲ್ಲಿ ಪಾಸ್ ಮಾಡದಿದ್ದರೆ ನಿಮಗೆ ಹಾಗೂ ನಿಮ್ಮ ಕುಟುಂಬಸ್ಥರಿಗೆ ಮಾಟಮಂತ್ರ ಮಾಡಿಸಿ ಎಲ್ಲರನ್ನು ಸಾಯಿಸುತ್ತೇನೆ ಎಂದು ಎಸ್ಸೆಸ್ಸೆಲ್ಸಿ ಪರೀಕ್ಷೆಯ ಉತ್ತರ ಪತ್ರಿಕೆಯಲ್ಲಿ ವಿದ್ಯಾರ್ಥಿಯೊಬ್ಬ ಮೌಲ್ಯಮಾಪಕರಿಗೆ ಬೆದರಿಕೆ ಹಾಕಿದ್ದಾನೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಪರೀಕ್ಷೆಯಲ್ಲಿ ಪಾಸ್ ಮಾಡದಿದ್ದರೆ ನಿಮಗೆ ಹಾಗೂ ನಿಮ್ಮ ಕುಟುಂಬಸ್ಥರಿಗೆ ಮಾಟಮಂತ್ರ ಮಾಡಿಸಿ ಎಲ್ಲರನ್ನು ಸಾಯಿಸುತ್ತೇನೆ ಎಂದು ಎಸ್ಸೆಸ್ಸೆಲ್ಸಿ ಪರೀಕ್ಷೆಯ ಉತ್ತರ ಪತ್ರಿಕೆಯಲ್ಲಿ ವಿದ್ಯಾರ್ಥಿಯೊಬ್ಬ ಮೌಲ್ಯಮಾಪಕರಿಗೆ ಬೆದರಿಕೆ ಹಾಕಿದ್ದಾನೆ.

ಈ ವಿಷಯವನ್ನು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನಿರ್ದೇಶಕಿ ಯಶೋಧಾ ಬೋಪಣ್ಣ ಅವರೇ ಮಾಧ್ಯಮಗಳಿಗೆ ತಿಳಿಸಿದ್ದು, 16 ವರ್ಷದ ವಿರ್ದಾರ್ಥಿಯೊಬ್ಬ ಗಣಿತಶಾಸ್ತ್ರದ ಉತ್ತರ ಪತ್ರಿಕೆಯಲ್ಲಿ ಈ ರೀತಿಯ ಬೆದರಿಗೆ ಹಾಕಿದ್ದಾನೆ. ತನ್ನನ್ನು ಅನುತ್ತೀರ್ಣಗೊಳಿಸಿದರೆ ಮೌಲ್ಯಮಾಪಕರಿಗೆ ಮಾಟಮಂತ್ರ ಮಾಡಿಸಿ ಸಾಯಿಸುತ್ತೇನೆ ಮತ್ತು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದು ಬೆದರಿಕೆ ಹಾಕಿದ್ದಾನೆ. ಈ ಕುರಿತ ವಿದ್ಯಾರ್ಥಿಯ ಉತ್ತರ ಪತ್ರಿಕೆಯನ್ನು ಮೌಲ್ಯಮಾಪಕರು ವಾಟ್ಸ್ ಅಪ್ ಮೂಲಕ ನನಗೆ ಕಳುಹಿಸಿದ್ದರು ಎಂದು ಯಶೋಧಾ ಬೋಪಣ್ಣ ಹೇಳಿದ್ದಾರೆ.

ಇತ್ತೀಚಿನ ಕೆಲವು ವರ್ಷಗಳಿಂದ ವಿದ್ಯಾರ್ಥಿಗಳು ಪರೀಕ್ಷೆ ಸರಿಯಾಗಿ ಬರೆಯದಿದ್ದಾಗ, ಅನುತ್ತೀರ್ಣನಾಗುತ್ತೇನೆಂಬ ಕಾರಣಕ್ಕೆ ಉತ್ತರ ಪತ್ರಿಕೆಗಳಲ್ಲಿ ಮೌಲ್ಯಮಾಪಕರಿಗೆ ಬೆದರಿಕೆ ಹಾಕುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದೆ. ವಿದ್ಯಾರ್ಥಿಗಳ ಈ ಕ್ರಮವನ್ನು ನಾವು ಗಂಭೀರವಾಗಿ ಪರಿಗಣಿಸುತ್ತೇವೆ.

ಈ ಕುರಿತಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆದೇಶಿಸಲಾಗಿದ್ದು, ವಿದ್ಯಾರ್ಥಿಗಳ ಈ ಪದ್ಧತಿಗೆ ಅಂತ್ಯ ಹಾಡುತ್ತೇವೆಂದು ಯಶೋಧಾ ಬೋಪಣ್ಣ ಅವರು ಹೇಳಿದ್ದಾರೆ. ಅಲ್ಲದೆ,  ವಿದ್ಯಾರ್ಥಿಗಳು ಯಾವ ಶಾಲೆ, ಎಲ್ಲಿಯವನು, ಉತ್ತೀರ್ಣನಾಗಿದ್ದಾನೆಯೋ ಅಥವಾ ಇಲ್ಲವೋ ಎಂಬ ಯಾವುದೇ ಮಾಹಿತಿಯನ್ನು ಅವರು ಬಿಟ್ಟುಕೊಟ್ಟಿಲ್ಲ. ಇದೇ ವೇಳೆ, ಮೇ ಎರಡನೇ ವಾರದಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷಾ ಫಲಿತಾಂಶ ಪ್ರಕಟವಾಗಲಿದ್ದು, ಖಚಿತ ದಿನಾಂಕವನ್ನು ಶೀಘ್ರದಲ್ಲಿಯೇ ಪ್ರಕಟಿಸಲಾಗುವುದು ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com