ಶ್ರವಣ ನ್ಯೂನ್ಯತೆಯುಳ್ಳ ಮಕ್ಕಳ ಶಿಕ್ಷಣ ಕುರಿತು ಸಮ್ಮೇಳನ

ದಿ ಅಸೋಸಿಯೇಷನ್ ಆಫ್ ಪೀಪಲ್ ವಿತ್ ಡಿಸೆಬಿಲಿಟಿ(ಎ.ಪಿ.ಡಿ) ಸರ್ಕಾರೇತರ ಸಂಸ್ಥೆ, ಶ್ರವಣ ನ್ಯೂನ್ಯತೆಯುಳ್ಳ ಮಕ್ಕಳ...
ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದ ಎಪಿಡಿ ಸಂಸ್ಥೆಯ ಗೋಪಿನಾಥ್ ಮತ್ತು ಸಹದ್ಯೋಗಿಗಳು
ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದ ಎಪಿಡಿ ಸಂಸ್ಥೆಯ ಗೋಪಿನಾಥ್ ಮತ್ತು ಸಹದ್ಯೋಗಿಗಳು

ಬೆಂಗಳೂರು: ದಿ ಅಸೋಸಿಯೇಷನ್ ಆಫ್ ಪೀಪಲ್ ವಿತ್ ಡಿಸೆಬಿಲಿಟಿ(ಎ.ಪಿ.ಡಿ) ಸರ್ಕಾರೇತರ ಸಂಸ್ಥೆ, ಶ್ರವಣ ನ್ಯೂನ್ಯತೆಯುಳ್ಳ ಮಕ್ಕಳ ಪ್ರಾಥಮಿಕ ಶಿಕ್ಷಣದ ಅಭಿವೃದ್ಧಿ ಎಂಬ ವಿಚಾರದ ಮೇಲೆ ಎರಡು ದಿನಗಳ ಸಮ್ಮೇಳನವನ್ನು ಮೇ 6 ಮತ್ತು 7ರಂದು ಹಮ್ಮಿಕೊಂಡಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎಪಿಡಿ ಸಂಸ್ಥೆಯ ಕಾರ್ಯನಿರ್ಹಾವಕ ಗೋಪಿನಾಥ್ ಕೆ.ಎನ್ ಅವರು ಮಾತನಾಡಿ, ರಾಜ್ಯದಲ್ಲಿ ಶ್ರವಣ ನ್ಯೂನ್ಯತೆಯುಳ್ಳ ಮಕ್ಕಳು 80 ಸಾವಿರಕ್ಕೂ ಹೆಚ್ಚಿದ್ದಾರೆ. ಸಮಾಜದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಮುಂದುವರೆದಿದ್ರೂ ಕೂಡ ಶ್ರವಣ ನ್ಯೂನ್ಯತೆಯುಳ್ಳ ಮಕ್ಕಳು ಶಿಕ್ಷಣದಲ್ಲಿ ಹಿಂದುಳಿದಿದ್ದಾರೆ.

ವಾಕ್ ಮತ್ತು ಶ್ರವಣ ನ್ಯೂನ್ಯತೆಯುಳ್ಳ ಮಕ್ಕಳು ಕೂಡ ಉತ್ತಮ ಶಿಕ್ಷಣ ಪಡೆಯಬೇಕು ಹಾಗೂ ಅವರಿಗೆ ಉದ್ಯೋಗವಕಾಶ ಕಲ್ಪಿಸಬೇಕಾಗಿರುವುದು ಬಹಳ ಅಗತ್ಯವಾಗಿದೆ. ಈ ಹಿನ್ನಲೆಯಲ್ಲಿ ಇದರ ಬಗ್ಗೆ ಅರಿವು ಮೂಡಿಸಲೆಂದು ಎಪಿಡಿ ಸಂಸ್ಥೆ ಈ ಸಮ್ಮೇಳನವನ್ನು ಹಮ್ಮಿಕೊಂಡಿದೆ.

ಈ ಸಮ್ಮೇಳನದ ಮುಖ್ಯ ಉದ್ದೇಶವೆಂದರೆ ಶ್ರವಣ ನ್ಯೂನ್ಯತೆಯುಳ್ಳ ಮಕ್ಕಳ ಪ್ರಾಥಮಿಕಿ ಶಿಕ್ಷಣದ ಅಭಿವೃದ್ಧಿಗಾಗಿ ಒಂದು ಗುಂಪನ್ನು ಸಂಘಟಿಸಿವುದು, ಮಕ್ಕಳ ಪ್ರಾಥಮಿಕ ಶಿಕ್ಷಣದಲ್ಲಿ ಪ್ರಸಕ್ತವಿರು ಕಾರ್ಯವೈಖರಿ, ಬೋಧನಾ ವಿಧಾನಗಳು ಮತ್ತು ಅದರ ಕ್ರಮಗಳ ಬಗ್ಗೆ ಪರಸ್ಪರ ಹಂಚಿಕೊಳ್ಳುವುದು ಸೇರಿದಂತೆ ನ್ಯೂನ್ಯತೆಯುಳ್ಳ ಮಕ್ಕಳ ಅಭಿವೃದ್ಧಿ ಕುರಿತು ಚರ್ಚಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಮೇ 6 ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದ್ದು ಸಚಿವ ಕಿಮ್ಮನೆ ರತ್ನಾಕರ ಪಾಲ್ಗೊಳ್ಳಲಿದ್ದಾರೆ ಹಾಗೂ ಎರಡನೇ ದಿನವಾದ ಮೇ 7ರಂದು ಸಚಿವ ಉಮಾಶ್ರೀ ಸಮ್ಮೇಳನದಲ್ಲಿ ಭಾಗವಹಿಸಲಿದ್ದು, ಶ್ರವಣ ನ್ಯೂನ್ಯತೆಯುಳ್ಳ ಮಕ್ಕಳ ಸಮಸ್ಯೆ ಬಗ್ಗೆ ಮಾತನಾಡಲಿದ್ದಾರೆ. ಇದಕ್ಕೆ ಸಂಬಂಧ ಪಟ್ಟ ಅಧಿಕಾರಿಗಳು, ಸ್ವಯಂ ಸೇವಾ ಸಂಸ್ಥೆಗಳು, ಶ್ರವಣ ನ್ಯೂನ್ಯತೆಯುಳ್ಳ ಮಕ್ಕಳ ಪೋಷಕರು ಭಾಗವಹಿಸಲಿದ್ದಾರೆ. ಕಾರ್ಯಕ್ರಮವು ಬೆಂಗಳೂರಿನ ಎಸ್.ಏ.ಐ.ಏ.ಸಿ ಸೆಂಟರ್, ಗುಬ್ಬಿ ಅಡ್ಡರಸ್ತೆ, ಕೊತ್ತನೂರು ಅಂಚೆ ಇಲ್ಲಿ ನಡೆಯಲಿದೆ ಎಂದು ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com