ಕಾಮೆಡ್-ಕೆ ಪರೀಕ್ಷೆ ಬರೆಯಲು ತೆಲಂಗಾಣ ವಿದ್ಯಾರ್ಥಿಗಳಿಗೆ ಅಸ್ತು

ವೃತ್ತಿಪರ ಪದವಿ ಕೋರ್ಸ್‍ಗಳಿಗೆ ಕಾಮೆಡ್-ಕೆ (ಯುಜಿಇಟಿ) ಮೇ 10ರಂದು ನಡೆಸಲಿರುವ ಪ್ರವೇಶ ಪರೀಕ್ಷೆ ಗೆ ಹಾಜರಾಗಲು ತೆಲಂಗಾಣ ರಾಜ್ಯದ ಶ್ರೀ ಚೈತನ್ಯ...
ಕಾಮೆಡ್-ಕೆ
ಕಾಮೆಡ್-ಕೆ

ಬೆಂಗಳೂರು: ವೃತ್ತಿಪರ ಪದವಿ ಕೋರ್ಸ್‍ಗಳಿಗೆ ಕಾಮೆಡ್-ಕೆ (ಯುಜಿಇಟಿ) ಮೇ 10ರಂದು ನಡೆಸಲಿರುವ ಪ್ರವೇಶ ಪರೀಕ್ಷೆ ಗೆ ಹಾಜರಾಗಲು ತೆಲಂಗಾಣ ರಾಜ್ಯದ ಶ್ರೀ ಚೈತನ್ಯ ಜೂನಿಯರ್ ಕಲಾಶಾಲಾ ವಸತಿ ಕಾಲೇಜಿನ 65 ವಿದ್ಯಾರ್ಥಿಗಳಿಗೆ ರಾಜ್ಯ ಹೈಕೋರ್ಟ್ ಅನುಮತಿ ಕಲ್ಪಿಸಿದೆ.
ಪ್ರವೇಶ ಪರೀಕ್ಷೆಗೆ ಹಾಜರಾಗಲು ಅನುಮತಿ ನೀಡದ ಕಾಮೆಡ್-ಕೆ ಕ್ರಮ ಪ್ರಶ್ನಿಸಿ ಮಹಮ್ಮದ್ ಅಬ್ದುಲ್ ರಬ್ ಸೇರಿದಂತೆ ತೆಲಂಗಾಣದ ಶ್ರೀ ಚೈತನ್ಯ ಜೂನಿಯರ್ ಕಲಾಶಾಲಾ ಕಾಲೇಜಿನ 65 ವಿದ್ಯಾರ್ಥಿಗಳು ಹೈಕೋರ್ಟ್‍ನಲ್ಲಿ ತಕರಾರು ಅರ್ಜಿ ಸಲ್ಲಿಸಿದ್ದರು. ವಿಚಾರಣೆ ವೇಳೆ ಕಾಮೆಡ್-ಕೆ ಪರ ಹಿರಿಯ ವಕೀಲ ಶಶಿಕಿರಣ್ ಶೆಟ್ಟಿ ವಾದ ಮಂಡಿಸಿ, ವಿದ್ಯಾರ್ಥಿಗಳು ಏ.18ರೊಳಗೆ ತಮ್ಮ ಅರ್ಜಿಗಳ ಪ್ರತಿಯನ್ನು ಸ್ಪೀಡ್‍ ಪೋಸ್ಟ್ ಮೂಲಕ ರವಾನಿಸಬೇಕಿತ್ತು.  ಅರ್ಜಿಗಳ ಪ್ರತಿಯನ್ನು ಖಾಸಗಿ ಕೊರಿಯರ್ ಮೂಲಕ ರವಾನಿಸಿದ್ದಾರೆ. ಅಲ್ಲದೇ ವಿದ್ಯಾರ್ಥಿಗಳು ಅರ್ಜಿಯ ಪ್ರತಿಗಳನ್ನು ಏ.18ರೊಳಗೆ ಕಳುಹಿಸಿ ಕೊಡಲು ವಿಫಲವಾದ ಕಾಲೇಜು ಆಡಳಿತ ಮಂಡಳಿಗೆ ನ್ಯಾಯಪೀಠ  ರು. ೧೦ ಸಾವಿರ ದಂಡ ವಿಧಿಸಿದೆ.


ಏನಿದು ಪ್ರಕರಣ?

ವೈದ್ಯ, ದಂತವೈದ್ಯ ಮತ್ತು ಎಂಜಿನಿಯರ್ ವೃತ್ತಿಪರ ಪದವಿ ಕೋರ್ಸ್‍ಗಳಿಗೆ ಮೇ 10ರಂದು ಕಾಮೆಡ್-ಕೆ ಪ್ರವೇಶ ಪರೀಕ್ಷೆ ನಡೆಸುತ್ತಿದೆ. ತೆಲಂಗಾಣ ರಾಜ್ಯದ ಶ್ರೀ ಚೈತನ್ಯ ಜೂನಿಯರ್ ಕಲಾಶಾಲೆ ಎಂಬ ವಸತಿ ಕಾಲೇಜಿನ 65 ವಿದ್ಯಾರ್ಥಿಗಳು ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದರು. ಅರ್ಜಿಗಳ ಪ್ರತಿ ಹಾಗೂ ಇತರೆ ದಾಖಲೆಗಳನ್ನು ಏ.18ರೊಳಗೆ ಕಳುಹಿಸಲು ಕಾಮೆಡ್-ಕೆ ಷರತ್ತು ವಿಧಿಸಿತ್ತು. ಆದರೆ, ಶ್ರೀ ಚೈತನ್ಯ ಕಲಾಶಾಲಾ ಕಾಲೇಜು, ತನ್ನ 65 ವಿದ್ಯಾರ್ಥಿಗಳಅರ್ಜಿಗಳ ಪ್ರತಿಗಳನ್ನು ಏ.18ರೊಳಗೆ ತಲುಪಿಸಲು ವಿಫಲವಾಗಿತ್ತು. ಇದರಿಂದ ವಿದ್ಯಾರ್ಥಿಗಳಿಗೆ ಪ್ರವೇಶ ಪರೀಕ್ಷೆ ಗೆ ಹಾಜರಾಗಲು ಕಾಮೆಡ್-ಕೆ ಅನುಮತಿ ನೀಡಿರಲಿಲ್ಲ. ಹೀಗಾಗಿ, ವಿದ್ಯಾರ್ಥಿಗಳು ರಾಜ್ಯ ಹೈಕೋರ್ಟ್ ಮೆಟ್ಟಿಲೇರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com