ದಯಾಮರಣ ಕಾಯ್ದೆ ಜಾರಿಗೆ ಆಗ್ರಹಿಸಿ ಧರಣಿ

ದಯಾಮರಣ ಕಾಯ್ದೆ ಜಾರಿಗೆ ಹಾಗೂ ಐಪಿಸಿಯು 309ನೇ ಕಾಲಂನ್ನು ರದ್ದುಗೊಳಿಸುವಂತೆ ಆಗ್ರಹಿಸಿ ದಯಾಮರಣ ಇಚ್ಛಾಮರಣದ ಹೋರಾಟಗಾರ್ತಿ...
ಪತ್ರಿಕಾಗೋಷ್ಠಿ ನಡೆಸಿದ ದಯಾಮರಣ ಇಚ್ಛಾಮರಣದ ಹೋರಾಟಗಾರ್ತಿ ಹೆಚ್.ಬಿ.ಕರಿಬಸಮ್ಮ
ಪತ್ರಿಕಾಗೋಷ್ಠಿ ನಡೆಸಿದ ದಯಾಮರಣ ಇಚ್ಛಾಮರಣದ ಹೋರಾಟಗಾರ್ತಿ ಹೆಚ್.ಬಿ.ಕರಿಬಸಮ್ಮ

ಬೆಂಗಳೂರು: ದಯಾಮರಣ ಕಾಯ್ದೆ ಜಾರಿಗೆ ಹಾಗೂ ಐಪಿಸಿಯು 309ನೇ ಕಾಲಂನ್ನು ರದ್ದುಗೊಳಿಸುವಂತೆ ಆಗ್ರಹಿಸಿ ದಯಾಮರಣ ಇಚ್ಛಾಮರಣದ ಹೋರಾಟಗಾರ್ತಿ ಹೆಚ್.ಬಿ.ಕರಿಬಸಮ್ಮ ಅವರು ಮೇ.11ರಂದು ನಗರದ ಫ್ರೀಡಂ ಪಾರ್ಕ್ ನಲ್ಲಿ ಬೆಳಿಗ್ಗೆ 10 ಗಂಟೆಗೆ ಧರಣಿ ಕೈಗೊಂಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹೆಚ್.ಬಿ ಕರಿಸಬಸಮ್ಮ, ವಯೋವೃದ್ಧರು ಮಾರಾಣಾಂತಿಕ ರೋಗಗಳಿಂದ ನರಳುತ್ತ ದೈಹಿಕ ಮತ್ತು ಮಾನಸಿಕ ವೇದನೆ ಪಡುತ್ತಿದ್ದಾರೆ. ಈ ಹಿನ್ನಲೆಯಲ್ಲಿ ದಯಾಮರಣ ಕಾಯ್ದೆ ಜಾರಿ ಹಾಗೂ ಐಪಿಸಿಯು 309ನೇ ಕಾಲಂನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ನಮ್ಮ ಹೋರಾಟಕ್ಕೆ ಸಾರ್ವಜನಿಕರು ಬೆಂಬಲ ನೀಡಬೇಕೆಂದು ಅವರು ಮನವಿ ಮಾಡಿಕೊಂಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ- ಹೆಚ್.ಬಿ ಕರಿಸಬಸಮ್ಮ: 9449974078, 9591187557

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com