ಫೋರಂ ವ್ಯಾಲ್ಯೂ ಮಾಲ್ ನಿಂದ ಮಕ್ಕಳಿಗೆ ಕಲಿಕಾ ಅನುಭವ, ಜೊತೆಗೆ ಮಾವು ಮೇಳ

ಈ ಬೇಸಿಗೆ ಮಾಸವನ್ನು ವಿಶಿಷ್ಟ ರೀತಿಯಲ್ಲಿ ಕಳೆಯಲು, ಫೋರಂ ವ್ಯಾಲ್ಯೂ ಮಾಲ್ ಮಕ್ಕಳಿಗಾಗಿ ವಿವಿಧ ರೋಚಕ ಚಟುವಟಿಕೆಗಳನ್ನು ತಂದಿದೆ...
ಫೋರಂ ವ್ಯಾಲ್ಯೂ ಮಾಲ್ ನಿಂದ ಮಕ್ಕಳಿಗೆ ಕಲಿಕಾ ಅನುಭವ, ಜೊತೆಗೆ ಮಾವು ಮೇಳ

ಬೆಂಗಳೂರು: ಈ ಬೇಸಿಗೆ ಮಾಸವನ್ನು ವಿಶಿಷ್ಟ ರೀತಿಯಲ್ಲಿ ಕಳೆಯಲು, ಫೋರಂ ವ್ಯಾಲ್ಯೂ ಮಾಲ್ ಮಕ್ಕಳಿಗಾಗಿ ವಿವಿಧ ರೋಚಕ ಚಟುವಟಿಕೆಗಳನ್ನು ತಂದಿದೆ. ‘ಫೋರಂನಲ್ಲಿ ಸಮ್ಮರ್’ ಎಂಬ ಶೀರ್ಷಿಕೆಯಡಿ ಆಯೋಜಿಸಲಾಗುತ್ತಿರುವ ಈ ಒಂದು ತಿಂಗಳ ಅವಧಿಯ ಕಾರ್ಯಕ್ರಮ, ಮಕ್ಕಳನ್ನು ವಿವಿಧ ಕಾರ್ಯಾಗಾರಗಳ ಮೂಲಕ ಚಟುವಟಿಕೆಗಳಲ್ಲಿ ನಿರತರಾಗುವಂತೆ ಮಾಡುತ್ತಿದೆ.

ಫೋರಂ ವ್ಯಾಲ್ಯೂ ಮಾಲ್ ಈ ಬೇಸಿಗೆಯಲ್ಲಿ, ಮಕ್ಕಳಿಗೆ ಕಲಿಕೆಯ ಜೊತೆ ವಿನೋದವನ್ನು ಒದಗಿಸುವಂತಹ ವಿಭಿನ್ನವಾದ ಚಟುವಟಿಕೆಗಳನ್ನು ರಚಿಸಿದೆ. ನಡೆಯಲಿರುವ ಕಾರ್ಯಾಗಾರಗಳ ಪೈಕಿ ಕಲೆ ಹಾಗೂ ಕರಕುಶಲತೆ, ಮಣ್ಣಿನ ಆಕೃತಿಗಳ ತಯಾರಿಕೆ, ಮಡಿಕೆ ತಯಾರಿಕೆ, ರೊಬೊಟಿಕ್ಸ್, ಅಡುಗೆ ತಯಾರಿಕೆ, ಕಿಡ್ಸ್ ರೇಡಿಯೊ ಸ್ಟೇಷನ್, ನಾಟಕಗಳು, ಹೂಪ್ಲಾ, ಜಗ್ಲಿಂಗ್, ಸ್ಕೇಟಿಂಗ್ ಹಾಗೂ ಏರೋ ಮಾಡೆಲ್ಲಿಂಗ್‍ಗಳು ಸೇರಿವೆ.

ಇವುಗಳೊಂದಿಗೆ ಮಕ್ಕಳು ಈ ಬೆಸಿಗೆಯಲ್ಲಿ ತಮ್ಮ ಬೇಸರವನ್ನು ಮರೆತು, ಆಟದೊಂದಿಗೆ, ಈ ವಿಶಿಷ್ಟವಾದ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಮೂಲಕ ವಿಶೇಷ ಅನುಭವನ್ನು ಹೊಂದಬಹುದು.

ಇದರ ಜೊತೆಗೆ ‘ಮ್ಯಾಂಗೊ ಫಿಯೆಸ್ಟಾ’ (ಮಾವು ಮೇಳ) ನಡೆಯಲಿದೆ. 2015ರ ಮೇ 8 ರಿಂದ 10ನೇ ತಾರೀಖಿನವರೆಗೂ ಮಧ್ಯಾಹ್ನ 2 ರಿಂದ ರಾತ್ರಿ 8 ಗಂಟೆಯವರೆಗೆ ಮಕ್ಕಳು ವಿವಿಧ ಜಾತಿಯ ತಾಜಾ ಮಾವಿನ ಹಣ್ಣುಗಳನ್ನು ಸವಿಯಬಹುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com