ಬಿಡಿಎ ಅಧಿಕಾರಿ ಶ್ಯಾಂ ಭಟ್ ವಜಾಕ್ಕೆ ಹಿರೇಮಠ್ ಆಗ್ರಹ

ಬಿಡಿಎ ಭೂ ಹಗರಣಗಳಲ್ಲಿ ಭಾಗಿಯಾಗಿರುವ ಆಯುಕ್ತ ಶ್ಯಾಂ ಭಟ್ ಅವರನ್ನು ಕೂಡಲೇ ಕೆಲಸದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಜಾಗೊಳಿಸಬೇಕು...
ಎಸ್.ಆರ್. ಹಿರೇಮಠ್‌
ಎಸ್.ಆರ್. ಹಿರೇಮಠ್‌

ಬೆಂಗಳೂರು: ಬಿಡಿಎ ಭೂ ಹಗರಣಗಳಲ್ಲಿ ಭಾಗಿಯಾಗಿರುವ ಆಯುಕ್ತ ಶ್ಯಾಂ ಭಟ್ ಅವರನ್ನು ಕೂಡಲೇ ಕೆಲಸದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಜಾಗೊಳಿಸಬೇಕು ಎಂದು ರಾಷ್ಟ್ರೀಯ ನೈಸರ್ಗಿಕ ಸಂಪನ್ಮೂಲ ರಕ್ಷಣಾ ಸಮಿತಿ ಹಾಗೂ ಸಮಾಜ ಪರಿವರ್ತನಾ ಸಮುದಾಯ ಸಂಸ್ಥೆ ಮುಖ್ಯಸ್ಥರಾದ ಎಸ್.ಆರ್.ಹಿರೇಮಠ್ ಆಗ್ರಹಿಸಿದ್ದಾರೆ.

ಸೋಮವಾರ ಪ್ರೇಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿದ ಹಿರೇಮಠ್, ಬಿಡಿಎ ಕೆರೆಗಳಲ್ಲಿ ಒತ್ತುವರಿ ಮಾಡಿ ಅಕ್ರಮವಾಗಿ ಬಡಾವಣೆ ನಿರ್ಮಿಸಿರುವುದು ಬೆಳಕಿಗೆ ಬಂದಿದ್ದು, ಆಯುಕ್ತರಾಗಿರುವ ಶ್ಯಾಂ ಭಟ್ ಅವರು ಅಕ್ರಮವಾಗಿ 4 ಎಕರೆ 13 ಗುಂಟೆ ಭೂಮಿಯನ್ನು ಅಕ್ರಮವಾಗಿ ಜಿ. ನಾಗರಾಜ್ ಎಂಬುವವರಿಗೆ ನೀಡಿದ್ದು, ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಅಕ್ರಮ ಚಟುವಟಿಕೆ ಕೇಂದ್ರವಾಗಿದೆ. ಆಯುಕ್ತ ಶ್ಯಾಂ ಭಟ್ ಅವರ ನೇತೃತ್ವದಲ್ಲಿ ಅಕ್ರಮಗಳು ನಡೆಯುತ್ತಿದೆ. ಬಿಡೆಎ ಕೂಡ ಕೆರೆಗಳನ್ನು ಒತ್ತುವರಿ ಮಾಡಿ ನಿವೇಶನ ಹಂಚಿಕೆ ಮಾಡಿದೆ. ಅಲ್ಲದೇ, ಇದರಲ್ಲಿ ಭೂಮಾಫಿಯಾದವರು ಭಾಗಿಯಾಗಿದ್ದು, ಅನೇಕ ಜನರನ್ನು ವಂಚಿಸುತ್ತಿದೆ. ಈ ಹಿನ್ನಲೆಯಲ್ಲಿ ಸರ್ಕಾರ ಶ್ಯಾಂ ಭಟ್ ಅವರನ್ನು ಅಮಾನತುಗೊಳಿಸಿ, ಅವರು ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com