ಅಕಾಲಿಕ ಮಳೆಗೆ ನಾಲ್ವರ ಬಲಿ

ರಾಜ್ಯದ ವಿವಿಧೆಡೆ ಅಕಾಲಿಕ ಮಳೆ ಅಬ್ಬರ ಮುಂದುವರಿದಿದ್ದು, ನಾಲ್ವರು ಮೃತಪಟ್ಟಿದ್ದಾರೆ. ಅಪಾರ ಪ್ರಮಾಣದ ಆಸ್ತಿ ಪಾಸ್ತಿಗೆ ಹಾನಿಯಾಗಿದೆ...
ಅಕಾಲಿಕ ಮಳೆ -ಬೆಳಗಾವಿಯಲ್ಲಿನ  ದೃಶ್ಯ  (ಕೃಪೆ : ಕೆಪಿಎನ್)
ಅಕಾಲಿಕ ಮಳೆ -ಬೆಳಗಾವಿಯಲ್ಲಿನ ದೃಶ್ಯ (ಕೃಪೆ : ಕೆಪಿಎನ್)

ಬೆಂಗಳೂರು: ರಾಜ್ಯದ ವಿವಿಧೆಡೆ ಅಕಾಲಿಕ ಮಳೆ ಅಬ್ಬರ ಮುಂದುವರಿದಿದ್ದು, ನಾಲ್ವರು ಮೃತಪಟ್ಟಿದ್ದಾರೆ. ಅಪಾರ ಪ್ರಮಾಣದ ಆಸ್ತಿ ಪಾಸ್ತಿಗೆ ಹಾನಿಯಾಗಿದೆ. ಮೈಸೂರಿನಲ್ಲಿ ಬಿರುಗಾಳಿ ಸಹಿತ ಸುರಿದ ಜೋರು ಮಳೆಯಿಂದಾಗಿ ಕೋಳಿಫಾರಂನ ಗೋಡೆ ಕುಸಿದು ಇಬ್ಬರು ಸ್ಥಳದಲ್ಲೇ ಮೃತಪಟ್ಟು, ಮತ್ತೊಬ್ಬ ತೀವ್ರವಾಗಿ ಗಾಯಗೊಂಡಿದ್ದಾರೆ. ಕೋಟೆಹುಂಡಿ ನಿವಾಸಿ ಸಿದ್ದರಾಜು (55) ಮತ್ತು ತುರುವೇಕೆರೆಯ ರವಿ (35) ಮೃತಪಟ್ಟವರು. ಮಹದೇವ ಎಂಬವರು ಗಾಯಗೊಂಡಿದ್ದಾರೆ. ದೇವಾಲಪುರದಲ್ಲಿರುವ ವೆಂಕಟೇಶ್ವರ ಪೌಲ್ಟ್ರಿ ಫಾರಂನಲ್ಲಿದ್ದ ಗೊಬ್ಬರ ಲೋಡ್ ಮಾಡಲು ಲಾರಿ ಚಾಲಕ ರವಿಯೊಂದಿಗೆ ಸಿದ್ದರಾಜು ಮತ್ತು ಮಹದೇವ ಹೋಗಿದ್ದರು. ಜೋರು ಮಳೆ ಸುರಿದ್ದರಿಂದ ಕೋಳಿ ಫಾರಂನ ತಡೆ ಗೋಡೆ ಬಳಿ ನಿಂತಾಗ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಬಾಳೆಹೊನ್ನೂರು ಹೋಬಳಿಯ ಸೀಗೋಡು ಪ್ಲಾಂಟೇಶನ್ ನಲ್ಲಿ ಕುಸುಮಾ(35)ಎಸ್ಟೇಟ್‍ನಲ್ಲಿ ಕೂಲಿ ಕೆಲಸ ಮಾಡುತ್ತಿದ್ದಾಗ ಬಿರುಗಾಳಿ ಸಹಿತ ಮಳೆಯಿಂದ ಮರದ ಕೆಳಗೆ ಆಶ್ರಯ ಪಡೆದಿದಾಗ  ಮರ ಉರುಳಿ ಮೃತಪ ಟ್ಟಿದ್ದಾರೆ. ಬಂಟ್ವಾಳ ತಾಲೂಕಿನ ಪಾಣೆ  ಮಂಗಳೂರಿನಲ್ಲಿ ಅಬೂಬಕರ್ ಸಿದ್ದೀಕ್ (16) ಸಿಡಿಲು ಬಡಿದು ಮೃತಪಟ್ಟಿದ್ದಾನೆ. ಬಿರುಗಾಳಿ ಅಬ್ಬರದೊಂದಿಗೆ ಭಾರಿ ವರ್ಷಧಾರೆ, 8 ಮನೆಗಳಿಗೆ ಹಾನಿಯಾಗಿವೆ.  ತಾಲೂಕಿನಾದ್ಯಂತ  ವಿದ್ಯುತ್ ಕಡಿತಗೊಂಡಿದೆ. ಹಾಗೆಯೇ  ಅನಂತಾಡಿ ಮತ್ತು ನೆಟ್ಲ ಮುಡ್ನೂರಿನ ಪರಿಸರದಲ್ಲೂ ಸಿಡಿಲಿನ ಅಬ್ಬರಕ್ಕೆ 8 ಮನೆಗಳಿಗೆ ಹಾನಿಯಾಗಿದ್ದು, ಅನಂತಾಡಿ ಮನೆಯೊಂದಕ್ಕೆ ಮರವೊಂದು ಬಿದ್ದು ಭಾಗಶಃ ಹಾನಿ ಸಂಭವಿಸಿದೆ. ಉಪ್ಪಿನಂಗಡಿಯಲ್ಲಿ ಸಿಡಿಲಿಗೆ ಪೆರ್ನೆ ಗ್ರಾಪಂ ಕಚೇರಿಯ ಒಂದು ಭಾಗ ಅಗ್ನಿಗಾಹುತಿಯಾಗಿದೆ. ಚಿಂಚೋಳಿಯಲ್ಲಿ ಮಳೆಯ ಅಬ್ಬರಕ್ಕೆ ಜನಜೀವನ ಅಸ್ತವ್ಯಸ್ತವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com