
ಬೆಂಗಳೂರು: ಜಾತಿ ಆಧಾರಿತ ಪ್ರವರ್ಗದ ವಿಂಗಡಣೆ ಮಾಡಿ ಫಲಿತಾಂಶ ಪ್ರಕಟಿಸುವ ಪ್ರಕ್ರಿಯೆಯನ್ನುಮುಂದುವರಿಸಿರುವುದಕ್ಕೆ ಶಿಕ್ಷಣ ಇಲಾಖೆ ಅಧಿಕಾರಿಗಳು ಸ್ಪಷ್ಟೀಕರಣ ನೀಡಿದ್ದರೂ ತಜ್ಞರು ಅದನ್ನು ವಿರೋಧಿಸುತ್ತಿದ್ದಾರೆ. ಪ.ಜಾ, ಪ.ಪಂಗಡ ಪ್ರವರ್ಗ, ಇತರೆ ಎಂಬ 8 ಪ್ರತ್ಯೇಕ ವಿಭಾಗದಡಿ ಫಲಿತಾಂಶ ವಿವರ ನೀಡುವ ರೂಡಿಯನ್ನು ಪ್ರೌಢ ಶಿಕ್ಷಣ ಮಂಡಳಿ, ಪಪೂ ಶಿಕ್ಷಣ ಇಲಾಖೆ ಮಾಡಿಕೊಂಡು ಬಂದಿವೆ. ವಿದ್ಯಾರ್ಥಿಗಳಿಗೆ ಸೌಲಭ್ಯಗಳನ್ನು ಮುಂದಿನ ವ್ಯಾಸಂಗಕ್ಕೆ ನೀಡುವ ಉದ್ದೇಶದಿಂದ ಇಂಥ ಮಾಹಿತಿ ಅನುಕೂಲವಾಗುತ್ತದೆ ಎನ್ನುವುದು ನಿಜ. ಆದರೆ ಭಿನ್ನ ಉದ್ದೇಶಕ್ಕಾಗಿ ಬಹಿರಂಗವಾಗಿ ಪ್ರಕಟಿಸುವುದು ಸರಿಯಲ್ಲ ಎಂಬ ಮಾತು ವ್ಯಕ್ತವಾಗಿದೆ. ಸಮಾಜ ಕಲ್ಯಾಣ ಇಲಾಖೆಯು ಹಿಂದುಳಿದವರಿಗೆ ಪ್ರೋತ್ಸಾಹ ಧನ ನೀಡುತ್ತದೆ. ಹಾಗೆಯೇ ಹಿಂದುಳಿದ ವಿದ್ಯಾರ್ಥಿಗಳು ಕೂಡ ಉತ್ತಮ ಸಾಧನೆಗೈಯ್ಯುತ್ತಿದ್ದಾರೆ. ಶಿಕ್ಷಣದಲ್ಲಿ ಅವರು ಹಿಂದೆ ಬಿದ್ದಿಲ್ಲ ಎನ್ನುವುದನ್ನು ಸಮಾಜಕ್ಕೆ ತಿಳಿಸಬೇಕು ಎನ್ನುವುದು ಇಲಾಖೆ ಉದ್ದೇಶ. ಮಾಹಿತಿ ಹಾಗೂ ಅವಲೋಕನಕ್ಕೆ ಇದು ಸೀಮಿತವಷ್ಟೆ ಎಂದು ಪ್ರೌಢ ಶಿಕ್ಷಣ ಮಂಡಳಿ ನಿರ್ದೇಶಕಿ ಯಶೋದಾ ಭೋಪಣ್ಣ ತಿಳಿಸಿದ್ದಾರೆ.
ಜಾತಿ | ಹಾಜರು | ಉತ್ತೀರ್ಣ | ಶೇ. |
ಪರಿಶಿಷ್ಟ ಜಾತಿ | 142427 | 113383 | 79.61 |
ಪರಿಶಿಷ್ಟ ಪಂಗಡ | 52958 | 43467 | 82.08 |
ಪ್ರವರ್ಗ -1 | 45087 | 38204 | 84.73 |
ಪ್ರವರ್ಗ- 2ಎ | 128750 | 111880 | 86.90 |
ಪ್ರವರ್ಗ- 2ಬಿ | 86290 | 69743 | 80.82 |
ಪ್ರವರ್ಗ- 3ಎ | 71555 | 65165 | 91.06 |
ಪ್ರವರ್ಗ- 3ಬಿ | 89148 | 79444 | 89.11 |
ಇತರೆ | 172227 | 147704 | 85.76 |
Advertisement