ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಸಜ್ಜು

ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಸರ್ಕಾರ ಎಲ್ಲಾ ರೀತಿಯಲ್ಲೂ ಸಜ್ಜಾಗಿದೆ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ...
ಆರೋಗ್ಯ ಸಚಿವ ಯು.ಟಿ.ಖಾದರ್
ಆರೋಗ್ಯ ಸಚಿವ ಯು.ಟಿ.ಖಾದರ್

ಬೆಂಗಳೂರು: ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಸರ್ಕಾರ ಎಲ್ಲಾ ರೀತಿಯಲ್ಲೂ ಸಜ್ಜಾಗಿದೆ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.

ಬುಧವಾರ ವಿಕಾಸಸೌಧದಲ್ಲಿ ವಿಡಿಯೋ ಕಾನ್ಫರೆನ್ಸ್ ಮುಖಾಂತರ ಆರೋಗ್ಯ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸಚಿವರು, `ರಾಜ್ಯ ದಲ್ಲಿ 2015ರ ಜನವರಿಯಿಂದ ಮೇ 12ರವರೆಗೆ ಒಟ್ಟಾರೆ 3635 ಡೆಂಘೀ ಶಂಕಿತ ಪ್ರಕರಣಗಳು ವರದಿಯಾಗಿದ್ದು, ಇದರಲ್ಲಿ 356 ಪ್ರಕರಣಗಳು ದೃಢಪಟ್ಟಿವೆ.

ಯಾವುದೇ ಮರಣ ಪ್ರಕರಣಗಳು ವರದಿಯಾಗಿಲ್ಲ. ಇದೇ ಅವಧಿಯಲ್ಲಿ 810 ಚಿಕೂನ್ ಗುನ್ಯಾ ಪ್ರಕರಣ ವರದಿಯಾಗಿದ್ದು, ಇದರಲ್ಲಿ 152 ಪ್ರಕರಣ ದೃಢಪಟ್ಟಿವೆ' ಎಂದರು. ಒಟ್ಟು ವರದಿಯಾದ ಡೆಂಘೀ ಪ್ರಕರಣಗಳಲ್ಲಿ ಶೇ.82ರಷ್ಟು ಪ್ರಕರಣಗಳು ಬಳ್ಳಾರಿ (69), ಬೆಂಗಳೂರು ನಗರ (62), ರಾಯಚೂರು (47), ಮೈಸೂರು (19), ಶಿವಮೊಗ್ಗ (19), ಚಿತ್ರದುರ್ಗ (18), ದಾವಣಗೆರೆ (15), ದಕ್ಷಿಣ ಕನ್ನಡ (15), ಚಿಕ್ಕಮಗಳೂರು (13) ರಾಮನಗರ (11), ಕೋಲಾರ(11)ದಲ್ಲಿ ದಾಖಲಾಗಿದೆ ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com