
ಬೆಂಗಳೂರು: ರಾಜ್ಯದಲ್ಲಿ ಹೊಸ ಶಿಕ್ಷಣ ನೀತಿ ರೂಪಿಸಲು ಶಿಕ್ಷಣೋದ್ಯಮಿ ಮೋಹನ್‍ದಾಸ್ ಪೈ ಹಾಗೂ ವಿಶ್ರಾಂತ ಕುಲಪತಿ ಫ್ರೊ.ಎಂ.ಎಸ್.ತಿಮ್ಮಪ್ಪ ನೇತೃತ್ವದಲ್ಲಿ
ಕಾರ್ಯಪಡೆ ರಚಿಸಲಾಗಿದೆ. ಜ್ಞಾನ ಆಯೋಗದ ಶಿಫಾರಸಿನಂತೆ ಉದ್ಯೋಗ, ಶಿಕ್ಷಣದ ಗುಣಮಟ್ಟ ವೃದ್ಧಿ ಹಾಗೂ ಮೂಲಭೂತ ಸೌಕರ್ಯ ಅಬಿsವೃದಿಟಛಿಗೆ ಸಂಬಂ„ಸಿ ಸಮಗ್ರ ಶಿಕ್ಷಣ ನೀತಿ ರೂಪಿಸಲು ಜ್ಞಾನ ಆಯೋಗ ಶಿಫಾರಸು ಮಾಡಿತ್ತು. ಈ ಹಿನ್ನೆಲೆಯಲ್ಲಿ ಉದ್ಯಮಿ ಶಿಕ್ಷಣ ತಜ್ಞರನ್ನೊಳಗೊಂಡ ಕಾರ್ಯಪಡೆಗೆ ನೀತಿ ರೂಪಿಸುವ ಜವಾಬ್ದಾರಿ ನೀಡಲಾಗಿದೆ. ಉನ್ನತ ಶಿಕ್ಷಣ ಪರಿಷತ್‍ನಲ್ಲಿ ಸಚಿವ ಆರ್ .ವಿ.ದೇಶಪಾಂಡೆ ನೇತೃತ್ವದಲ್ಲಿ ನಡೆದ ಜ್ಞಾನ ಆಯೋಗದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ರಾಜ್ಯದ ಶೈಕ್ಷಣಿಕ ಸ್ಥಿತಿಗತಿ, ಭವಿಷ್ಯದ ಯೋಜನೆಗಳು ಹಾಗೂ ಶೈಕ್ಷಣಿಕ ಸಂಸ್ಥೆಗಳ ಸಂರಚನೆ ಕುರಿತಂತೆ ಸಂಪೂರ್ಣ ವಿಚಾರವನ್ನು ಈ ನೀತಿ ಒಳಗೊಂಡಿರುತ್ತದೆ. ಈ ಕಾರ್ಯಪಡೆಗೆ ಯಾವುದೇ ಕಾಲಾವಧಿ ನೀಡಿಲ್ಲ. ಆದರೆ ಶೀಘ್ರದಲ್ಲೇ ರಾಜ್ಯದಲ್ಲಿ ಹೊಸ ಶಿಕ್ಷಣ ನೀತಿ ಜಾರಿಗೆ ಬರಲಿದೆ ಎಂದು ಸಭೆಯಲ್ಲಿ ಸಚಿವ ದೇಶಪಾಂಡೆ ತಿಳಿಸಿದ್ದಾರೆ. ರಾಜ್ಯದಲ್ಲಿ ಶಿಕ್ಷಣ ಕಾಯಿದೆ ಹಾಗೂ ವಿವಿಗಳಿಗೆ ಪ್ರತ್ಯೇಕ ಕಾಯಿದೆಗಳಿದ್ದರೂ ಶಿಕ್ಷಣ ನೀತಿಯಿರಲಿಲ್ಲ. ಈ ವಿಚಾರವನ್ನು ಜ್ಞಾನ ಆಯೋಗದವರದಿಯಲ್ಲಿ ಹೇಳಲಾಗಿತ್ತು.
ವಿದ್ಯಾರ್ಥಿಗೆ ಅಭಿನಂದನಾ ಪತ್ರ: ಪಿಯುಸಿ ಮುಗಿದ ಬಳಿಕ ಪದವಿ ಶಿಕ್ಷಣಕ್ಕೆ ಪ್ರವೇಶ ಪಡೆಯದ ವಿದ್ಯಾರ್ಥಿ ಯನ್ನು ಪದವಿ ಕಾಲೇಜಿಗೆ ಸೇರಿಸದ ವಿದ್ಯಾರ್ಥಿಗಳಿಗೆ
ಸರ್ಕಾರದಿಂದ ಅಬಿsನಂದನಾ ಪತ್ರ ನೀಡಲು ತೀರ್ಮಾನಿಸಲಾಗಿದೆ. ಪದವಿಗೆ ದಾಖಲಾಗುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ. ಪಿಯುಸಿ
ಮುಗಿಸಿ ಪದವಿಗೆ ಬರುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇರುವ ಹಿನ್ನೆಲೆಯಲ್ಲಿ ಈ ಪ್ರೋತ್ಸಾಹಕರ ಯೋಜನೆ ಜಾರಿಗೆ ಬರುತ್ತಿದೆ. ಒಬ್ಬ ವಿದ್ಯಾರ್ಥಿಯು ಇನ್ನೊಬ್ಬ ವಿದ್ಯಾರ್ಥಿಯನ್ನು ಕರೆತಂದರೂ ಅಭಿನಂದನಾ ಪತ್ರ
ಪಡೆಯಲು ಅರ್ಹರಾಗಿರುತ್ತಾರೆ.
ವಿದ್ಯಾರ್ಥಿಗಳಿಗೆ ಕ್ಲೌಡ್ ತಂತ್ರಜ್ಞಾನದ ಲಾಭ
ಆಧುನಿಕ ತಂತ್ರಜ್ಞಾನದ ಲಾಭವನ್ನು ವಿದ್ಯಾರ್ಥಿ ಗಳಿಗೆ ದೊರಕಿಸಲು ಉನ್ನತ ಶಿಕ್ಷಣ ಪರಿಷತ್ ಹಾಗೂ ಕರ್ನಾಟಕ ಜ್ಞಾನ ಆಯೋಗ ಕ್ಲೌಡ್ ತಂತ್ರಜ್ಞಾನ ಆಧಾರಿತ ಯೋಜನೆ ಜಾರಿಗೆ ತರಲು ನಿರ್ಧರಿಸಿದೆ. ಕ್ಲೌಡ್‍ಗಳಲ್ಲಿ ಪಠ್ಯಗಳು, ಪಠ್ಯಕ್ಕೆ ಸಂಬಂಧಿಸಿದ ವಿಷಯ ಹಾಗೂ ಪಾಠಗಳನ್ನು ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ. ಪ್ರತಿ ವಿದ್ಯಾರ್ಥಿಗೂ ಪ್ರತ್ಯೇಕ ಅಕೌಂಟ್ ನೀಡಿ ಯೋಜನೆ ರೂಪಿಸುವಂತೆ ಸಲಹೆ ನೀಡಲಾಗಿದೆ. ಆದರ ಬಗ್ಗೆ ನಿರ್ದಿಷ್ಟ ಯೋಜನೆ ಹಾಗೂ ನೀಲ ನಕ್ಷೆ ಮೂಲಕ ಇಲಾಖೆಯನ್ನು ಸಂಪರ್ಕಿಸುವಂತೆ ಜ್ಞಾನ ಆಯೋಗಕ್ಕೆ ಸಚಿವರು ಸೂಚಿಸಿದ್ದಾರೆ. ಇದರ ಜವಾಬ್ದಾರಿಯನ್ನು ಮೋಹನ್‍ದಾಸ್ ಪೈಗೆ ವಹಿಸಲಾಗಿದೆ. ಬುಧವಾರ ನಡೆದ ಸಭೆಯಲ್ಲಿ ಪೈ ಕೂಡ ಹಾಜರಿದ್ದರು.
ಪರಿಷತ್ ಸಭೆಯ ನಿರ್ಣಯಗಳು
ಎಲ್ಲ ವಿವಿಗಳಲ್ಲಿ ಉದ್ಯೋಗ ನಿಯುಕ್ತಿ ಕೇಂದ್ರ ಸ್ಥಾಪಿಸಬೇಕು.
ಎಲ್ಲ ವಿವಿ ಹಾಗೂ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಪ್ರತಿಭೆ ಅನಾವರಣಗೊಳಿಸಲು ಪ್ರದರ್ಶನ ಮೇಳ ಆಯೋಜಿಸಬೇಕು.
ರಾಷ್ಟ್ರೀಯ ಸೇವಾ ಯೋಜನೆಯನ್ನು ವಿವಿಯ ಪರೀಕ್ಷಾ ಮೌಲ್ಯಮಾಪನ ವ್ಯವಸ್ಥೆಗೆ ಅಳವಡಿಸಬೇಕು.
ಎಲ್ಲ ವಿವಿಗಳಲ್ಲಿ ಮಾಜಿ ಪ್ರಧಾನಿ ಜವಾಹರ್ ಲಾಲ್ ನೆಹರು ಅವರ 125ನೇ ಹುಟ್ಟುಹಬ್ಬ ಆಚರಿಸಲು ಆದೇಶ.
ಜೂ.21ರಂದು ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಲು ತೀರ್ಮಾನ.
ವಿದ್ಯಾರ್ಥಿಗಳ ಪ್ರವೇಶ ಸಂಖ್ಯೆ ಹೆಚ್ಚಿಸಲು ಎಲ್ಲ ವಿವಿ ಹಾಗೂ ಕಾಲೇಜುಗಳ ಪ್ರವೇಶ ಮಿತಿಯನ್ನು ಶೇ.15ರಷ್ಟು ಹೆಚ್ಚಿಸಲು ಆದೇಶ.
Advertisement