ನಿಸರ್ಗ, ಪ್ರವಾಸೋದ್ಯಮ ಫೋಟೋಗಳಿಗೆ ಪ್ರತ್ಯೇಕ ಗ್ಯಾಲರಿ: ಸಿದ್ದರಾಮಯ್ಯ ಭರವಸೆ

ರಾಜ್ಯದ ಪ್ರವಾಸೋದ್ಯಮ ಮತ್ತು ನಿಸರ್ಗಕ್ಕೆ ಸಂಬಧಿಸಿದ ಛಾಯಾಚಿತ್ರಗಳ ಪ್ರದರ್ಶನಕ್ಕೆ ನಗರದಲ್ಲಿ ಪ್ರತ್ಯೇಕ ಚಿತ್ರಕಲಾಗ್ಯಾಲರಿ ನಿರ್ಮಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು...
ಮುಖ್ಯಮಂತ್ರಿ ಸಿದ್ದರಾಮಯ್ಯ
ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು: ರಾಜ್ಯದ ಪ್ರವಾಸೋದ್ಯಮ ಮತ್ತು ನಿಸರ್ಗಕ್ಕೆ ಸಂಬಧಿಸಿದ ಛಾಯಾಚಿತ್ರಗಳ ಪ್ರದರ್ಶನಕ್ಕೆ ನಗರದಲ್ಲಿ ಪ್ರತ್ಯೇಕ ಚಿತ್ರಕಲಾಗ್ಯಾಲರಿ ನಿರ್ಮಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.

ನಿಸರ್ಗ ಮತ್ತು ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ ಪತ್ರಿಕಾ ಛಾಯಾಗ್ರಾಹಕ ಕೇಶವ ವಿಟ್ಲ ಹೊರತಂದ ಫೇಸೆಟ್ಸ್ ಆಫ್ ಕರ್ನಾಟಕ ಕೃತಿಯನ್ನು ಗುರುವಾರ ಲೋಕಾರ್ಪಣೆಗೊಳ್ಸಿ ಮಾತನಾಡಿ, ಬೆಂಗಳೂರು ನಗರದಲ್ಲಿ ಚಿತ್ರಕಲಾ ಗ್ಯಾಲರಿಗಳಿಗೇನೂ ಕೊರತೆ ಇಲ್ಲ. ಆದರೆ, ರಾಜ್ಯದ ಪ್ರವಾಸೋದ್ಯಮ ಮತ್ತು ನಿಸರ್ಗದ ಛಾಯಾಚಿತ್ರಗಳ ಪ್ರದರ್ಶನಕ್ಕೆ ಪೂರಕವಾಗುವಂತೆ ಕಲಾ ಗ್ಯಾಲರಿ ಬೇಕೆನ್ನುವ ಕಲಾ ರಸಿಕರ ಒತ್ತಡಕ್ಕೆ ತಾವು ನಿರಾಸೆ ತರುವುದಿಲ್ಲ. ಅದಕ್ಕಾಗಿಯೇ ಪ್ರತ್ಯೇಕವಾದ ಕಲಾ ಗ್ಯಾಲರಿ ನಿರ್ಮಾಣಕ್ಕೆ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.

ರಾಜ್ಯದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಸಾಕಷ್ಟು ಅವಕಾಶಗಳಿವೆ. ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟಕ್ಕೆ ರಾಜ್ಯದ ಪ್ರವಾಸಿತಾಣಗಳನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಸರ್ಕಾರ ಹೆಚ್ಚಿನ ಆದ್ಯತೆ ನೀಡಿದೆ. ಇದಕ್ಕೆ ಅನುಗುಣವಾಗಿ ಪ್ರವಾಸೋದ್ಯಮ ನೀತಿ ಜಾರಿಗೆ ತರುವ ಪ್ರಯತ್ನ ನಡೆದಿದೆ ಎಂದರು. ಫೇಸೆಟ್ಸ್ ಆಫ್ ಕರ್ನಾಟಕ ಕೃತಿ ಅತ್ಯಂತ ಉಪಯುಕ್ತವಾಗಿದೆ. ರಾಜ್ಯದಲ್ಲಿನ ನಿಸರ್ಗ ಸಂಪತ್ತನ್ನು ಅದು ಅದ್ಭುತವಾಗಿ ಬಿಂಬಿಸಿದೆ ಎಂದು ಬಣ್ಣಿಸಿದರು.

ಪ್ರವಾಸಿ ಮಿತ್ರ ಯೋಜನೆ:
ಅನ್ಯ ದೇಶಗಳಿಗೆ ಹೋಲಿಕೆ ಮಾಡಿದರೆ, ಭಾರತದ ಪ್ರವಾಸೋದ್ಯಮ ಈಗಷ್ಟೇ ಸುಧಾರಣೆ ಕಾಣುತ್ತಿದೆ. ಕರ್ನಾಟಕ ಕೂಡ ಈಗ ಪ್ರಗತಿಯ ದಾಪುಗಾಲು ಇಟ್ಟಿದೆ. ರಾಜ್ಯದಲ್ಲಿರುವ ಒಟ್ಟು 316 ಪ್ರವಾಸಿ ತಾಣಗಳ ಪೈಕಿ ಇನ್ನು ಸಾಕಷ್ಟು ಪ್ರವಾಸಿ ಕೇಂದ್ರಗಳಿಗೆ ಮೂಲಭೂತ ಸೌಲಭ್ಯದ ಕೊರತೆ ಇದ್ದು, ಅಭಿವೃದ್ಧಿ ಪಡಿಸುವ ಕೆಲಸ ಆಗಬೇಕಿದೆ. ಇದಕ್ಕೆ ಪೂರಕವಾಗಿ ಸರ್ಕಾರ ಆದಷ್ಟು ಬೇಗ ಪ್ರವಾಸೋದ್ಯಮ ನೀತಿಯನ್ನು ಜಾರಿಗೆ ತರಲು ನಿರ್ಧರಿಸಿದೆ ಎಂದು ಮುಖ್ಯ ಅತಿಥಿಯಾಗಿದ್ದ ಉನ್ನತ ಶಿಕ್ಷಣ ಹಾಗೂ ಪ್ರವಾಸೋದ್ಯಮ ಶಿಕ್ಷಣ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು. ಅರಣ್ಯ ಸಚಿವ ಬಿ.ರಮಾನಾಥ ರೈ, ಹೆಸರಾಂತ ಕಲಾವಿದ ಎಸ್.ಜಿ. ವಾಸುದೇವ್ ಹಾಗೂ ಕೃತಿ ಲೇಖಕ ಕೇಶವ ವಿಟ್ಲ ವೇದಿಕೆಯಲ್ಲಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com