ಸಮಾಜ ಸುಧಾರಣೆ ಮನೋಸ್ಥಿತಿ ಬೆಳೆಸಿಕೊಳ್ಳಿ: ಶಾಲಿನಿ ರಜನೀಶ್

ವಿದ್ಯಾರ್ಥಿಗಳು ಭವಿಷ್ಯದಲ್ಲಿ ಸಮಾಜ ಸುಧಾರಣೆ ಹಾಗೂ ಸಮಾಜ ಸೇವೆ ಮಾಡುವ ಮನಸ್ಥಿತಿ ಬೆಳೆಸಿಕೊಳ್ಳಬೇಕು ಎಂದು ಸಮಾಜ ಕಲ್ಯಾಣ ಮತ್ತು ಹಿಂದುಳಿಗ ವರ್ಗಗಳ ಆಯೋಗದ ಅಧ್ಯಕ್ಷೆ ಶಾಲಿನಿ ರಜನೀಶ್ ಹೇಳಿದರು...
ಸಮಾಜ ಕಲ್ಯಾಣ ಮತ್ತು ಹಿಂದುಳಿಗ ವರ್ಗಗಳ ಆಯೋಗದ ಅಧ್ಯಕ್ಷೆ ಶಾಲಿನಿ ರಜನೀಶ್
ಸಮಾಜ ಕಲ್ಯಾಣ ಮತ್ತು ಹಿಂದುಳಿಗ ವರ್ಗಗಳ ಆಯೋಗದ ಅಧ್ಯಕ್ಷೆ ಶಾಲಿನಿ ರಜನೀಶ್
Updated on

ಬೆಂಗಳೂರು: ವಿದ್ಯಾರ್ಥಿಗಳು ಭವಿಷ್ಯದಲ್ಲಿ ಸಮಾಜ ಸುಧಾರಣೆ ಹಾಗೂ ಸಮಾಜ ಸೇವೆ ಮಾಡುವ ಮನಸ್ಥಿತಿ ಬೆಳೆಸಿಕೊಳ್ಳಬೇಕು ಎಂದು ಸಮಾಜ ಕಲ್ಯಾಣ ಮತ್ತು ಹಿಂದುಳಿಗ ವರ್ಗಗಳ ಆಯೋಗದ ಅಧ್ಯಕ್ಷೆ ಶಾಲಿನಿ ರಜನೀಶ್ ಹೇಳಿದರು.

ಜಯನಗರದಲ್ಲಿರುವ ವಿಜಯ ಕಾನೂನು ಕಾಲೇಜಿನಲ್ಲಿ ಶನಿವಾರ ಏರ್ಪಡಿಸಿದ್ದ 22ನೇ ಕಾಲೇಜು ವಾರ್ಷಿಕೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು. ಉತ್ತಮ ವ್ಯಾಸಂಗ ಮಾಡಿ,
ಉನ್ನತ ಹುದ್ದೆಗೆ ಹೋಗಿ ಹಣ ಮಾಡಬೇಕು ಎಂಬುದು ಪ್ರತಿಯೊಬ್ಬರ ಕನಸು. ಅದನ್ನು ಬಿಟ್ಟು ಜನಸೇವೆಗೆ ಮುಂದಾಗಬೇಕು. ಆ ನಿಟ್ಟಿನಲ್ಲಿ ನಮ್ಮ ಮನಸ್ಥಿತಿಯನ್ನು ಬದಲಿಸಿಕೊಳ್ಳಬೇಕು. ಆಗ ಮಾಡಿದ ಕೆಲಸಕ್ಕೆ ಸಾರ್ಥಕತೆ ಹಾಗೂ ಈ ಮೂಲಕ ಮನಸ್ಸಿಗೆ ನೆಮ್ಮದಿ ಕಂಡುಕೊಳ್ಳಬೇಕಿದೆ.

ಬೇರೆಯವರನ್ನು ಆದರ್ಶವಾಗಿರಿಸಿಕೊಳ್ಳುವ ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ನಿಮ್ಮನ್ನು ಯಾರಾದರೂ ಆದರ್ಶ ವ್ಯಕ್ತಿಯನ್ನಾಗಿ ಕಾಣುವಂತೆ ನಮ್ಮ ಕೊಡುಗೆಯನ್ನು ಜನರಿಗೆ ನೀಡಬೇಕು. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕನಸು ಕಾಣಬೇಕು. ವಿದ್ಯಾರ್ಥಿಗಳಿಗೆ ಇದು ಸೂಕ್ತ ಸಮಯ. ಈಗ ಒಂದು ನಿರ್ಣಯ ಕೈಗೊಂಡರೆ ಜೀವನ ಸುಖಕರವಾಗಿರುತ್ತದೆ ಎಂದರು. ಕಾನೂನು ಕಾಲೇಜು ಪ್ರಾಂಶುಪಾಲರಾದ ಡಾ.ಎಸ್.ಸ್ವಪ್ನಾ, ಕಾಲೇಜಿನ ಪ್ರೊ.ಎನ್.ಎಸ್.ಸುಂದರ ರಾಜನ್, ಪ್ರೊ.ಆರ್.ವಿ.ಪ್ರಶಾಂತ್, ಅನುರಾಧ ಭಟ್ ಮತ್ತಿತರರು ಉಪಸ್ಥಿತರಿದ್ದರು

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com