ಜೂನ್ 1ರಿಂದ 'ಸ್ಟಾರ್ಸ್ ಆಫ್ ಕರ್ನಾಟಕ' ರಿಯಾಲಿಟಿ ಶೋ ಆಡಿಷನ್

ಸಮೃದ್ಧಿ ಎಜುಕೇಷನಲ್ ಅಂಡ್ ಕಲ್ಚರಲ್ ಟ್ರಸ್ಟ್ ಮತ್ತು ಕಸ್ತೂರಿ ಚಾನೆಲ್ ಸಹಯೋಗದಲ್ಲಿ ಕಲಾ-ಬೆಳಕು " ಸ್ಟಾರ್ಸ್ ಆಫ್ ಕರ್ನಾಟಕ' ರಿಯಾಲಿಟಿ ಶೋ ಕಾರ್ಯಕ್ರಮ...
ಪತ್ರಿಕಾಗೋಷ್ಠಿ ನಡೆಸಿದ ನಿರ್ಮಾಪಕ ಮದನ್ ಪಟೇಲ್, ಟ್ರಸ್ಟ್ ಖಜಾಂಚಿ ವಂದನಾ, ನಿರ್ದೇಶಕ ರೂಪೇಶ್, ಕ್ಯಾಮೆರಾಮನ್ ರೇಣುಕುಮಾರ್.
ಪತ್ರಿಕಾಗೋಷ್ಠಿ ನಡೆಸಿದ ನಿರ್ಮಾಪಕ ಮದನ್ ಪಟೇಲ್, ಟ್ರಸ್ಟ್ ಖಜಾಂಚಿ ವಂದನಾ, ನಿರ್ದೇಶಕ ರೂಪೇಶ್, ಕ್ಯಾಮೆರಾಮನ್ ರೇಣುಕುಮಾರ್.

ಬೆಂಗಳೂರು: ಸಮೃದ್ಧಿ ಎಜುಕೇಷನಲ್ ಅಂಡ್ ಕಲ್ಚರಲ್ ಟ್ರಸ್ಟ್ ಮತ್ತು ಕಸ್ತೂರಿ ಚಾನೆಲ್ ಸಹಯೋಗದಲ್ಲಿ ಕಲಾ-ಬೆಳಕು " ಸ್ಟಾರ್ಸ್ ಆಫ್ ಕರ್ನಾಟಕ' ರಿಯಾಲಿಟಿ ಶೋ ಕಾರ್ಯಕ್ರಮ ಆಯೋಜಿಸಲಾಗಿದ್ದು, ಜುಲೈ 18ರಿಂದ ಕಾರ್ಯಕ್ರಮ ಪ್ರಸಾರಗೊಳ್ಳಲಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಹಾಗೂ ನಿರ್ಮಾಪಕ ಮದನ್ ಪಟೇಲ್, ನಮ್ಮ ರಾಜ್ಯದಲ್ಲಿರುವ ಅದ್ಭುತ ಪ್ರತಿಭೆಗಳನ್ನು ಗುರುತಿಸುವ ನಿಟ್ಟಿನಲ್ಲಿ ಸ್ಟಾರ್ಸ್ ಆಫ್ ಕರ್ನಾಟಕ ರಿಯಾಲಿಟಿ ಶೋ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ರಿಯಾಲಿಟಿ ಶೋ ಆಡಿಷನ್ ಜೂನ್ 1 ರಿಂದ 15ರವರೆಗೆ ನಡೆಯಲಿದ್ದು, ಆಸಕ್ತರು ಉಚಿತವಾಗಿ ಭಾಗವಹಿಸಬಹುದು ಎಂದು ಹೇಳಿದ್ದಾರೆ.

ಕರ್ನಾಟಕದ 30 ಜಿಲ್ಲೆಗಳಿಂದ ಪ್ರತಿ ಜಿಲ್ಲೆಗೆ ಕನಿಷ್ಠ ಐವರು ಅವಕಾಶ ವಂಚಿತ ಕಲಾ ಪ್ರತಿಭೆಗಳನ್ನು ಆಯ್ಕೆ ಮಾಡಲಾಗುತ್ತದೆ. ಒಟ್ಟು 150 ಕಲಾ ಪ್ರತಿಭೆಗಳನ್ನು ಆಡಿಷನ್ ಗೆ ಆಯ್ಕೆ ಮಾಡಲಾಗುವುದು. ಅದರಲ್ಲಿ ಮೂರು ವಿಭಾಗಗಳಾದ ನೃತ್ಯ, ಗಾಯನ ಹಾಗೂ ವಿಭಿನ್ನ ಕಲಾಕ್ಷೇತ್ರದಿಂದ 50 ಅತ್ಯುತ್ತಮ ಪ್ರತಿಭೆಗಳನ್ನು ಸ್ಟಾರ್ಸ್ ಆಫ್ ಕರ್ನಾಟಕ ಪ್ರತಿಭಾ ಸ್ಪರ್ಧೆಗೆ ಆಯ್ಕೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಆಸಕ್ತರು ಗಾಯನ, ನೃತ್ಯ ಮತ್ತು ವಿಶೇಷ ಕಲೆಗಳನ್ನು ಉತ್ತಮವಾದ ಸಿ.ಡಿ. ಡಿವಿಡಿ. ಪೆನ್ ಡ್ರೈವ್ ಗಳಲ್ಲಿ ಸ್ಪುಟವಾಗಿ ಕಾಣುವಂತೆ ಮತ್ತು ಕೇಳುವಂತೆ ರೆಕಾರ್ಡ್ ಮಾಡಬೇಕು. ಮುಚ್ಚಿದ ಲಕೋಟೆಯಲ್ಲಿ ರಿಜಿಸ್ಟರ್ಡ್ ಕೊರೆಯರ್ ಮೂಲಕ ಕೆಳಕಂಡ ವಿಳಾಸಕ್ಕೆ ಕಳುಹಿಸಬಹುದು.
ವಿಳಾಸ: ಸೂತ್ರ ಸ್ಕೂಲ್ ಆಫ್ ಸ್ಪೋರ್ಟ್ಸ್ ಅಂಡ್ ಕಲ್ಚರ್, ನಂ.17/ಎ, 26ನೇ ಮೈನ್, ಸೆಕ್ಟರ್ 2, ಹೆಚ್.ಎಸ್.ಆರ್.ಲೇಔಟ್, ಬೆಂಗಳೂರು-560102.
ಹೆಚ್ಚಿನಮಾಹಿತಿಗಾಗಿ: samruddhitrust99@gmail.com ಸಂಪರ್ಕಿಸಿ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com