1492 ಕೋಟಿ ರೂಪಾಯಿ ಮೌಲ್ಯದ ಭೂಮಿ ವಶ

ಪ್ರೆಸ್ಟೀಜ್ ಕಂಪೆನಿಗೆ ಸೇರಿದ 50 ಫ್ಲ್ಯಾಟ್ ಗಳ ಕಟ್ಟಡ ವಶ ಸೇರಿದಂತೆ 1,492.50 ಕೋಟಿ ಮೌಲ್ಯದ 117.29 ಎಕರೆ ಜಾಗವನ್ನು ಬೆಂಗಳೂರು ಜಿಲ್ಲಾಡಳಿತ ವಶಪಡಿಸಿಕೊಂಡಿದೆ...
ಪಟ್ಟಂದೂರು ಅಗ್ರಹಾರದ 3.23 ಎಕರೆಯಲ್ಲಿ ಪ್ರೆಸ್ಟೀಜ್ ಸಂಸ್ಥೆ ನಿಯಮ ಉಲ್ಲಂಘಿಸಿ ನಿರ್ಮಿಸುತ್ತಿರುವ ಕಟ್ಟಡ ಹಾಗೂ ಜಾಗವನ್ನು ಜಿಲ್ಲಾಧಿಕಾರಿ ವಿ.ಶಂಕರ್ ನೇತೃತ್ವದ ತಂಡ ಪರಿಶೀಲಿಸಿತು.
ಪಟ್ಟಂದೂರು ಅಗ್ರಹಾರದ 3.23 ಎಕರೆಯಲ್ಲಿ ಪ್ರೆಸ್ಟೀಜ್ ಸಂಸ್ಥೆ ನಿಯಮ ಉಲ್ಲಂಘಿಸಿ ನಿರ್ಮಿಸುತ್ತಿರುವ ಕಟ್ಟಡ ಹಾಗೂ ಜಾಗವನ್ನು ಜಿಲ್ಲಾಧಿಕಾರಿ ವಿ.ಶಂಕರ್ ನೇತೃತ್ವದ ತಂಡ ಪರಿಶೀಲಿಸಿತು.

ಬೆಂಗಳೂರು:ಪ್ರೆಸ್ಟೀಜ್ ಕಂಪೆನಿಗೆ ಸೇರಿದ 50 ಫ್ಲ್ಯಾಟ್ ಗಳ ಕಟ್ಟಡ ವಶ ಸೇರಿದಂತೆ 1,492.50 ಕೋಟಿ ಮೌಲ್ಯದ 117.29 ಎಕರೆ ಜಾಗವನ್ನು ಜಿಲ್ಲಾಡಳಿತ ವಶಪಡಿಸಿಕೊಂಡಿದೆ.

ಪೂರ್ವ ತಾಲ್ಲೂಕು,ಬಿದರಹಳ್ಳಿ ಹೋಬಳಿ,ಪಟ್ಟಂದೂರು ಅಗ್ರಹಾರ ಗ್ರಾಮದ ಸ.ನಂ.42ರಲ್ಲಿ 3.23 ಎಕರೆ ಜಾಗವನ್ನು ಜಾಯ್ ಐಸ್ ಕ್ರೀಮ್ ಪ್ರೈ.ಲಿ. ಕೈಗಾರಿಕೆ ಆರಂಭಿಸುವ ಉದ್ದೇಶದಿಂದ ಪಡೆದಿತ್ತು. 'ಕರ್ನಾಟಕ ಭೂ ಮಂಜೂರಾತಿ ನಿಯಮಾವಳಿ-1969ರ ನಿಯಮ 20(ಸಿ)ರಂತೆ ಜಾಗವನ್ನು 2005ರಲ್ಲಿ ಸಂಸ್ಥೆ ನೀಡಲಾಗಿತ್ತು. ಮಂಜೂರು ನಿಯಮಗಳನ್ನು ಉಲ್ಲಂಘಿಸಿದ ಜಾಯ್ ಸಂಸ್ಥೆ ಜಾಗವನ್ನು ಪ್ರೆಸ್ಟೀಜ್ ಸಂಸ್ಥೆಗೆ ಮಾರಾಟ ಮಾಡಿತ್ತು.

ಭೂ ಒತ್ತುವರಿ ತನಿಖೆಗೆ ಸಂಬಂಧಿಸಿದಂತೆ ರಚನೆಯಾಗಿದ್ದ ಎ.ಟಿ.ರಾಮಸ್ವಾಮಿ ಸಮಿತಿ ಹಾಗೂ ಸುಬ್ರಮಣಿಯನ್ ಸಮಿತಿಯ ವರದಿಯಲ್ಲಿ ಈ ಅಕ್ರಮವನ್ನೂ ಉಲ್ಲೇಖಿಸಲಾಗಿತ್ತು. ಸಾಮಾಜಿಕ ಕಾರ್ಯಕರ್ತ ಎಸ್.ಆರ್.ಹೀರೇಮಠ್ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಒತ್ತಾಯಿಸಿದ್ದರು.

ಪ್ರೆಜ್ಟೀಜ್ ಸಂಸ್ಥೆ ಬಿಡಿಎ ಮೂಲಕ ಅನುಮತಿ ಪಡೆದು ಇಲ್ಲಿ 50 ಫ್ಲ್ಯಾಟ್ ಗಳಿರುವ ಕಟ್ಟಡ ನಿರ್ಮಿಸುತ್ತಿದೆ. ನಿರ್ಮಾಣವಾಗುತ್ತಿರುವ ಎರಡು ಕಟ್ಟಡಗಳಲ್ಲಿ ಒಂದು ಕಟ್ಟಡದ ನಿರ್ಮಾಣದಲ್ಲಿ ನಿಯಮಗಳ ಉಲ್ಲಂಘನೆಯಾಗಿದೆ. ಪ್ರತಿ ಫ್ಸ್ಯಾಟ್ 6 ಸಾವಿರ ಚದರ ಅಡಿಗಳಿದ್ದು, ಈ ಕಟ್ಟಡ 44.50 ಲಕ್ಷ ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಾಣವಾಗುತ್ತಿದೆ. ಇದರ ಜೊತೆಗೆ 5 ಮನೆಗಳು ನಿರ್ಮಾಣವಾಗಿದ್ದು, ವಶಕ್ಕೆ ಪಡೆಯಲಾಗಿದೆ.

ಅಧಿಕಾರಿಗಳ ತಂಡ ಭೇಟಿ
 ಸೋಮವಾರ ಜಿಲ್ಲಾಧಿಕಾರಿ ವಿ.ಶಂಕರ್,ಅಪರ ಜಿಲ್ಲಾಧಿಕಾರಿ ವೆಂಕಟಾಚಲಪತಿ, ಉಪ ವಿಭಾಗಾಧಿಕಾರಿಗಳಾದ ಮಹೇಶ್ ಬಾಬು, ಎಲ್.ನಾಗರಾಜು ಹಾಗೂ ತಹಸೀಲ್ದಾರ್ ಹರೀಶ್ ನಾಯ್ಕ್ ಅವರ ತಂಡ ಭೇಟಿ ನೀಡಿ,ಮಂಜೂರು ರದ್ದುಪಡಿಸಿ ಕಟ್ಟಡ ಹಾಗೂ ಜಾಗವನ್ನು ವಶಪಡಿಸಿಕೊಂಡಿದೆ. ಮಂಜೂರಾದ ಜಾಗ 1 ಕೋಟಿ ಮೌಲ್ಯ ಹೊಂದಿದೆ. ಕೈಗಾರಿಕಾ ಉದ್ದೇಶಕ್ಕಾಗಿ ಖರೀದಿಯಾದ ಭೂಮಿಯಲ್ಲಿ ವಸತಿ ಸಂಕೀರ್ಣ ನಿರ್ಮಿಸುತ್ತಿರುವುದರಿಂದ ಕಟ್ಟಡವನ್ನು ಸರ್ಕಾರದ ವಶಕ್ಕೆ ನೀಡಲಾಗಿದೆ. ಕಟ್ಟಡ ತೆರವು ಮಾಡುವ ನಿರ್ಧಾರವನ್ನು ಸರ್ಕಾರವೇ ಕೈಗೊಳ್ಳಲಿದೆ. ಕಟ್ಟಡ ನಿರ್ಮಾಣವಾಗುವಾಗ ನಿಯಮ ಉಲ್ಲಂಘನೆಯಾಗಿದೆ ಎಂದು ಸ್ಥಳೀಯರು ಜಿಲ್ಲಾಡಳಿತಕ್ಕೆ ದೂರು ನೀಡಿದ್ದರು ಎಂದು ತಹಸೀಲ್ದಾರ್ ಹರೀಶ್ ನಾಯ್ಕ್ ತಿಳಿಸಿದರು.

ಕುಮಾರನ್ ಶಾಲೆ ಒತ್ತುವರಿ ತೆರವು
ದಕ್ಷಿಣ ತಾಲ್ಲೂಕು,ಉತ್ತರಹಳ್ಳಿಯ ನಟಿಗೇರಿ ಗ್ರಾಮದಲ್ಲಿ ಒಟ್ಟು 9.39 ಎಕರೆಯಲ್ಲಿ ಕುಮಾರನ್ ಶಾಲೆ ಮಾಡಿದ್ದ ಒತ್ತುವರಿಯನ್ನು ತೆರವುಗೊಳಿಸಲಾಗಿದೆ. 42.50 ಕೋಟಿ ರೂಪಾಯಿ ಮೌಲ್ಯದ ಜಾಗವನ್ನು ತಹಸೀಲ್ದಾರ್ ಡಾ.ಬಿಯ.ಆರ್.ದಯಾನಂದ್ ತಂಡ ವಶಪಡಿಸಿಕೊಂಡಿದ್ದು, ಕುಮಾರನ್ ಸಂಸ್ಥೆ ಕಟ್ಟಡಗಳನ್ನು ನಿರ್ಮಿಸಲು ಯೋಜನೆ ಹಾಕಿಕೊಂಡಿತ್ತು. ಇದೇ ವೇಳೆ,ಉತ್ತರ ತಾಲ್ಲೂಕು,ದಾಸನಪುರ ಹೋಬಳಿ,ಮಾಚೇನಹಳ್ಳಿಯ ಸಂ.ನಂ.81ರಲ್ಲಿ 300 ಕೋಟಿ ರೂಪಾಯಿ ಮೌಲ್ಯದ 96.12 ಎಕರೆ ಸರ್ಕಾರಿ ಗೋಮಾಳದಲ್ಲಾದ ಒತ್ತುವರಿಯನ್ನು ತಹಸೀಲ್ದಾರ್  ಶಿವಪ್ಪ ಎಚ್.ಲಮಾಣಿ ತಂಡ ತೆರವುಗೊಳಿಸಿತು.

ಪಟ್ಟಂದೂರು ಅಗ್ರಹಾರದ 3.23 ಎಕರೆಯಲ್ಲಿ ಪ್ರೆಸ್ಟೀಜ್ ಸಂಸ್ಥೆ ನಿಯಮ ಉಲ್ಲಂಘಿಸಿ ನಿರ್ಮಿಸುತ್ತಿರುವ ಕಟ್ಟಡ ಹಾಗೂ ಜಾಗವನ್ನು ಜಿಲ್ಲಾಧಿಕಾರಿ ವಿ.ಶಂಕರ್ ನೇತೃತ್ವದ ತಂಡ ಪರಿಶೀಲಿಸಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com