
ದಾವಣಗೆರೆ: ನನ್ನ ಹೆಸರಿನಲ್ಲಿರುವ ಆಸ್ತಿಪಾಸ್ತಿ ಎಲ್ಲವೂ ಪಿತ್ರಾರ್ಜಿತ ಆಸ್ತಿಯಾಗಿದ್ದು, ರಾಜಕಾರಣ ಮಾಡಿ ಶ್ರೀಮಂತನಾಗಿಲ್ಲ ಎಂದು ಮಾಜಿ ಸಚಿವ ರೇಣುಕಾಚಾರ್ಯ ಶುಕ್ರವಾರ ಹೇಳಿದ್ದಾರೆ.
ಲೋಕಾಯುಕ್ತ ದಾಳಿ ಹಿನ್ನೆಲೆಯಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ಲೋಕಾಯುಕ್ತ ದಾಳಿಯಿಂದ ನಾನು ಭಯಭೀತನಾಗಿಲ್ಲ. ಭಯ ಪಡುವುದಕ್ಕೆ ನಾನು ಯಾವುದೇ ಅಕ್ರಮ ಆಸ್ತಿಯನ್ನು ಮಾಡಿಲ್ಲ. ನನ್ನ ಹೆಸರಿನಲ್ಲಿರುವ ಭೂಮಿ, ತೋಟ, ಮನೆ ಎಲ್ಲವೂ ಪಿತ್ರಾರ್ಜಿತ ಆಸ್ತಿಯಾಗಿದ್ದು, ಲೋಕಾಯುಕ್ತ ತಂಡದವರಿಗೆ ಎಲ್ಲ ರೀತಿಯಲ್ಲೂ ಸಹಕಾರ ನೀಡಿದ್ದೇನೆ ಎಂದು ಹೇಳಿದ್ದಾರೆ.
ಕಾಲಕ್ಕೆ ತಕ್ಕಂತೆ ಆಸ್ತಿಯ ತೆರಿಗೆಯನ್ನು ಕಟ್ಟುತ್ತಿದ್ದು, ಎಲ್ಲಾ ರೀತಿಯ ದಾಖಲೆಗಳು ನನ್ನ ಬಳಿ ಇದೆ. ಅಬಕಾರಿ ಇಲಾಖೆಯ ಸಚಿವನಾಗಿದ್ದ ಸಂದರ್ಭದಲ್ಲಿ ಕಳ್ಳಬಟ್ಟಿ ದಂಧೆಯನ್ನು ನಿಯಂತ್ರಿಸುವ ಮೂಲಕ ಸರ್ಕಾರಕ್ಕೆ ಸಾಕಷ್ಟು ಆದಾಯವನ್ನು ತಂದುಕೊಟ್ಟಿದ್ದೇನೆ. ನನ್ನ ವಿರುದ್ಧ ದ್ವೇಷ ಇಟ್ಟುಕೊಂಡಿರುವ ಖಾಸಗಿ ವ್ಯಕ್ತಿಗಳು ನನ್ನ ವಿರುದ್ಧ ದೂರು ನೀಡಿದ್ದಾರೆ ಎಂದು ಹೇಳಿದ್ದಾರೆ.
Advertisement