ಲೈಂಗಿಕ ಶಿಕ್ಷಣಕ್ಕೆ ಕಾವಿಧಾರಿಗಳೇ ಅಡ್ಡಿ

ಪ್ರೌಢಶಾಲಾ ಹಂತದಲ್ಲಿ ಮಕ್ಕಳಿಗೆ ಲೈಂಗಿಕ ಶಿಕ್ಷಣ ನೀಡುವುದಕ್ಕೆ ಕಾವಿಧಾರಿಗಳೇ ಅಡ್ಡಗಾಲಾಗಿ ದ್ದಾರೆ ಎಂದು ರಾಜ್ಯ ಮಾನಸಿಕ ಆರೋಗ್ಯ ಕಾರ್ಯ...
ಡಾ. ಅಶೋಕ ಪೈ
ಡಾ. ಅಶೋಕ ಪೈ

ಹಾವೇರಿ: ಪ್ರೌಢಶಾಲಾ ಹಂತದಲ್ಲಿ ಮಕ್ಕಳಿಗೆ ಲೈಂಗಿಕ ಶಿಕ್ಷಣ ನೀಡುವುದಕ್ಕೆ ಕಾವಿಧಾರಿಗಳೇ ಅಡ್ಡಗಾಲಾಗಿದ್ದಾರೆ ಎಂದು ರಾಜ್ಯ ಮಾನಸಿಕ ಆರೋಗ್ಯ ಕಾರ್ಯ ಪಡೆ ಅಧ್ಯಕ್ಷ ಡಾ. ಅಶೋಕ ಪೈ ಆರೋಪಿಸಿದ್ದಾರೆ. ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಕ್ಕಳಿಗೆ ಲೈಂಗಿಕ ಶಿಕ್ಷಣ ನೀಡುವುದು ಎಂದರೆ ಕತ್ತಲೆ ಕೋಣೆಯಲ್ಲಿ ಗಂಡು, ಹೆಣ್ಣು ಏನು ಮಾಡುತ್ತಾರೆ ಎಂಬುದನ್ನು ತಿಳಿಸುವುದಲ್ಲ. ಹದಿಹರೆಯದವರ ದೈಹಿಕ ಬದಲಾವಣೆ, ಅವರ ಸಮಸ್ಯೆಗಳನ್ನು ವೈಜ್ಞಾನಿಕ ರೀತಿಯಲ್ಲಿ ತಿಳಿಸುವುದಾಗಿದೆ. ಲೈಂಗಿಕ ಶಿಕ್ಷಣವನ್ನು ಎಷ್ಟು ಹೇಳಬೇಕು, ಹೇಗೆ ಹೇಳಬೇಕು. ಹೇಳುವವರಿಗೆ ಆ ವಿಷಯ ಎಷ್ಟು ಗೊತ್ತಿದೆ ಎಂಬುದೂ ಮುಖ್ಯವಾಗುತ್ತದೆ. ಲೈಂಗಿಕ ಶಿಕ್ಷಣ ನೀಡಿದರೆ ಅತ್ಯಾಚಾರ ಹಾಗೂ ಆತ್ಮಹತ್ಯೆ ಪ್ರಕರಣಗಳು ಕಡಿಮೆಯಾಗುತ್ತವೆ. ಆದರೆ, ಲೈಂಗಿಕ ಶಿಕ್ಷಣ ಎಂದಾಕ್ಷಣ ಸಮಾಜದ ಒಂದು ವರ್ಗ ವಿರೋಧ ವ್ಯಕ್ತಪಡಿಸುತ್ತದೆ. ಮುಖ್ಯವಾಗಿ ಕಾವಿಧಾರಿಗಳು ಅಡ್ಡಿಯಾಗುತ್ತಿದ್ದಾರೆ. ಲೈಂಗಿಕತೆಯ ಅರಿವು ಕಾವಿಧಾರಿಗಳಿಗೆ ಹೇಗೆ ಬಂತು ಎಂಬುದು ಪ್ರಶ್ನೆಯಾಗಿದೆ ಎಂದರು. ವೇಶ್ಯಾವಾಟಿಕೆಯನ್ನು ರಾಷ್ಟ್ರೀಕರಣಮಾಡಿದರೆ ಉತ್ತಮ. ಲೈಂಗಿಕ ಕಾರ್ಯಕರ್ತೆಯರಿಗೆ ಆರೋಗ್ಯದ ಅರಿವು, ಸೂಕ್ತ ರಕ್ಷಣೆ ನೀಡಬಹುದು. ಇಲ್ಲದಿದ್ದರೆ ಸೂಕ್ತ ತಿಳಿವಳಿಕೆ ಇಲ್ಲದೇ ಏಡ್ಸ್ ನಂಥ ಕಾಯಿಲೆಗೆ ತುತ್ತಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಕೆಲ ಐರೋಪ್ಯ ರಾಷ್ಟ್ರಗಳಲ್ಲಿ ವೇಶ್ಯಾವಾಟಿಕೆ ಕಾನೂನುಬದ್ಧವಾಗಿಯೇ ನಡೆಯುತ್ತದೆ. ಅಲ್ಲಿ ಸುರಕ್ಷಿತ ಲೈಂಗಿಕತೆ ಇರುತ್ತದೆ. ಈ ವಿಷಯ ಕಾರ್ಯಪಡೆ ವ್ಯಾಪ್ತಿಗೆ ಬರುವುದಿಲ್ಲ, ಇದು ತಮ್ಮ ವೈಯಕ್ತಿಕ ಅಭಿಪ್ರಾಯ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com