ರಾಯಚೂರು: ಅಕ್ಟೋಬರ್ 31ರಂದು ನಡೆದಿದ್ದಂತಹ ಯಾಗ ಪಾಕ್ಷಿಕೆ ಪತ್ರಿಕೆ ಸಂಪಾದಕ ಬಸವರಾಜು ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ 7 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಡಿವೈಎಸ್ ಎಂ ಪಾಷಾ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಆಂಧ್ರದ ಬಲಗೇರಾ ಗ್ರಾಮದಲ್ಲಿ ಅವಿತುಕೊಂಡಿದ್ದ 7 ಜನ ಆರೋಪಿಗಳನ್ನು ಬಂಧಿಸಲಾಗಿದೆ.
ಮಂಜುನಾಥ್, ಪ್ರಕಾಶ್, ರವಿ, ಆಂಜನೇಯ, ಶಂಕರ್, ನಾಗರಾಜ್, ಶಶಿಕುಮಾರ್ ಬಂಧಿತ ಆರೋಪಿಗಳು. ಆರೋಪಿಗಳೆಲ್ಲಾ ರಾಯಚೂರು ಮೂಲದವರಾಗಿದ್ದು ಪ್ರೇಮ ವಿವಾಹ ಹಿನ್ನಲೆಯಲ್ಲಿ 31 ಬಸವರಾಜು ಅವರನ್ನು ದುಷ್ಕರ್ಮಿಗಳು ಕೊಚ್ಚಿ ಹಾಕಿದ್ದರು.
ಹತ್ಯೆ ಸಂಬಂಧಪಟ್ಟಂತೆ ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 24 ಗಂಟೆಯೊಳಗೆ ಆರೋಪಿಗಳನ್ನು ಬಂಧಿಸಲಾಗಿದೆ.
ರಾಯಚೂರು ಮೂಲದ ಯುವತಿಯನ್ನು ಪ್ರೀತಿಸಿ ಬಸವರಾಜು ಮದುವೆಯಾಗಿದ್ದರು. ಇದಕ್ಕೆ ಯುವತಿ ಕುಟುಂಬದವರ ವಿರೋಧವಿತ್ತು. ಈ ಹಿನ್ನಲೆಯಲ್ಲಿ ಬಸವರಾಜ್ ನನ್ನು ಕಲ್ಲಿನಿಂದ ಚಚ್ಛಿ ಬರ್ಬರವಾಗಿ ಹತ್ಯೆಗೈದು ಪರಾರಿಯಾಗಿದ್ದರು.