ಡಿಸೆಂಬರ್ 15ರಿಂದ ಮತ್ತೆ ಘಾಟಿ ಬಂದ್

ಶಿರಾಡಿ ಘಾಟಿಯ ಎರಡನೇ ಹಂತದ ಕಾಮಗಾರಿ ಕೈಗೆತ್ತಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಬಹುತೇಕ ಡಿಸೆಂಬರ್ 15ರಿಂದ ಆರು ತಿಂಗಳ...
ಶಿರಾಡಿ ಘಾಟ್ ನ ರಸ್ತೆ
ಶಿರಾಡಿ ಘಾಟ್ ನ ರಸ್ತೆ

ಬೆಂಗಳೂರು: ಶಿರಾಡಿ ಘಾಟಿಯ ಎರಡನೇ ಹಂತದ ಕಾಮಗಾರಿ ಕೈಗೆತ್ತಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಬಹುತೇಕ ಡಿಸೆಂಬರ್ 15ರಿಂದ ಆರು ತಿಂಗಳ ಅವಧಿಗೆ ಘಾಟಿ ರಸ್ತೆಯಲ್ಲಿ ಸಂಚಾರ ಬಂದ್ ಮಾಡಲು ಉದ್ದೇಶಿಸಲಾಗಿದೆ. 2015ರ ಆಗಸ್ಟ್ ಮೊದಲ ವಾರದಲ್ಲಿ ಶಿರಾಡಿ ಘಾಟಿ ರಸ್ತೆಯ ಒಂದನೇ ಹಂತದ ಕಾಮಗಾರಿ ಪೂರ್ಣಗೊಂಡು ಸಂಚಾರಕ್ಕೆ ಮುಕ್ತಗೊಂಡಿತ್ತು.

ಪದೇ ಪದೇ ಶಿರಾಡಿ ಘಾಟಿ ರಸ್ತೆ ಹಾಳಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಘಾಟಿ ರಸ್ತೆಗೆ ಕಾಯಕಲ್ಪ ನೀಡಲು ಘಾಟಿ ಮಾರ್ಗವನ್ನು ಸಂಪೂರ್ಣವಾಗಿ ಕಾಂಕ್ರಿಟ್ ರಸ್ತೆಯನ್ನಾಗಿ ಪರಿವರ್ತಿಸಲು ಸರ್ಕಾರ ಯೋಜನೆ ರೂಪಿಸಿತ್ತು. ಈ ನಿಟ್ಟಿನಲ್ಲಿ ಕಳೆದ ಜನವರಿಯಿಂದ ಆಗಸ್ಟ್ ವರೆಗೆ ಮೊದಲ ಹಂತದಲ್ಲಿ ಹೆಗ್ಗದ್ದೆಯಿಂದ ಅಡ್ಡ ಹೊಳೆವರೆಗಿನ 13 ಕಿ.ಮೀ ಮಾರ್ಗವನ್ನು ಸಂಪೂರ್ಣ ಕಾಂಕ್ರಿಟ್ ಮಾಡಲಾಗಿದೆ. ಎರಡನೇ ಹಂತದ ಕಾಮಗಾರಿ ಈಗ ಕೈಗೆತ್ತಿಕೊಳ್ಳಲಾಗುತ್ತಿದೆ.

ಪೂರ್ವ ತಯಾರಿ ಆರಂಭ: ಕರಾವಳಿ ಮತ್ತು ರಾಜಧಾನಿ ಸಂಪರ್ಕಿಸುವ ಪ್ರಮುಖ ಮಾರ್ಗವಾಗಿರುವ ಈ ಘಾಟಿ ರಸ್ತೆಯು 4ರಿಂದ 6 ತಿಂಗಳ ಕಾಲ ಸಂಚಾರ ಮುಕ್ತವಾದರೆ ವಾಹನ ಸಂಚಾರ ವ್ಯವಸ್ಥೆ ಮೇಲೆ ಗಂಭೀರ ಪರಿಣಾಮ ಬೀರುವುದು ಸಹಜ. ಹೀಗಾಗಿ ವಾಹನ ಸವಾರರಿಗೆ ತೊಂದರೆಯಾಗದಂತೆ ಪರ್ಯಾಯ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಅಧಿಕಾರಿಗಳು ತಯಾರಿ ನಡೆಸಿದ್ದಾರೆ. ಪ್ರಮುಖವಾಗಿ ಡಿ.15ರೊಳಗೆ ಕಾಮಗಾರಿಗೆ ಅಗತ್ಯವಾದ ಸಾಮಗ್ರಿಗಳಲ್ಲಿ ಕನಿಷ್ಟ 40ರಷ್ಟಾದರೂ ಸ್ಥಳಕ್ಕೆ ಬಂದು ಬೀಳುವಂತೆ ನೋಡಿಕೊಳ್ಳುವುದು, ಪರ್ಯಾಯ ಮಾರ್ಗಗಳನ್ನು ಪುನಃ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಪ್ರಕ್ರಿಯೆ ಆರಂಭಿಸಿದ್ದಾರೆ.

ಡಿ.15ರೊಳಗೆ ಕಾಮಗಾರಿಗೆ ಅಗತ್ಯವಾದ ಶೇ.40-50ರಷ್ಟು ಸಾಮಗ್ರಿ ಬಂದು ಬೀಳುವ ನಿರೀಕ್ಷೆ ಇದೆ. ಇಷ್ಟು ಪ್ರಮಾಣದಲ್ಲಿ ಅಗತ್ಯ ಸಾಮಗ್ರಿ ಬಂದ ನಂತರ ಸಂಚಾರ ಬಂದ್ ಮಾಡಲಾಗುತ್ತದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಹಿರಿಯ ಅಧಿಕಾರಿಗಳು  ತಿಳಿಸಿದ್ದಾರೆ. ಕಾಮಗಾರಿಯನ್ನು ನಾಲ್ಕು ತಿಂಗಳಲ್ಲಿ ಮುಗಿಸಿ ಸಂಚಾರ ಮುಕ್ತಗೊಳಿಸಬೇಕೆಂಬ ಆಶಯವಿದೆ. ಆದರೆ, ತಡೆಗೋಡೆ ಸೇರಿದಂತೆ ವಿವಿಧ ಕಾರ್ಯ ನಡೆಸಬೇಕಿದ್ದು, ಮುಂದಿನ ಜೂನ್‍ವರೆಗೆ ಸಮಯ ವಿಸ್ತರಣೆ ಸಾಧ್ಯತೆಯೂ ಇಲ್ಲದಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ.

ಎರಡನೇ ಹಂತದಲ್ಲಿ: ಎರಡನೇ ಹಂತದ ಕಾಮಗಾರಿಯಾಗಿ ಘಾಟಿ ರಸ್ತೆಯಲ್ಲಿ ಬರುವ ಅಡ್ಡಹೊಳೆಯಿಂದ ಗುಂಡ್ಯವರೆಗಿನ 13 ಕಿ.ಮೀ ಘಾಟಿ ರಸ್ತೆಗೆ ಕಾಂಕ್ರಿಟ್ ಹಾಕಲಾಗುತ್ತದೆ. ಜತೆಗೆ ಸಕಲೇಶಪುರ ಬಾನೆಯಿಂದ ದೋಣಿಗಲ್‍ವರೆಗಿನ ಮಾರ್ಗಕ್ಕೆ ಮರು ಡಾಂಬರೀಕರಣ
ಕ್ಕೆ ಕೇಂದ್ರ ಭೂ ಸಾರಿಗೆ ಸಚಿವಾಲಯ ಹಸಿರು ನಿಶಾನೆ ತೋರಿಸಿದೆ. ಒಟ್ಟಾರೆ 2ನೇ ಹಂತದ ಕಾಮಗಾರಿಗಾಗಿ ಕೇಂದ್ರ ಸರ್ಕಾರ 90 ಕೋಟಿ ರೂಪಾಯಿಯನ್ನು ವೆಚ್ಚ ಪೂರಕ ರಸ್ತೆ ಅಭಿವೃದ್ಧಿ ಶಿರಾಡಿಗೆ ಪರ್ಯಾಯ ರಸ್ತೆಗಳಾದ ಚಾರ್ಮಾಡಿ ಮತ್ತು ಮೈಸೂರು ಹೆದ್ದಾ ರಿಗಳನ್ನು ಈ ಕಾಮಗಾರಿ ಆರಂಭಿಸುವ ಮುನ್ನ ಅಭಿವೃದ್ಧಿಪಡಿಸಲಾಗುತ್ತದೆ.

ಗುಣಮಟ್ಟಕ್ಕೆ ಒತ್ತು
ಮೊದಲ ಹಂತದಲ್ಲಿ ನಡೆದಿರುವ ಕಾಮಗಾರಿ ಗುಣಮಟ್ಟದಿಂದ ಕೂಡಿದೆ.ಈವರೆಗೆ ಯಾವ ಲೋಪಗಳೂ ಕಂಡುಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆಗಸ್ಟ್ ನಿಂದ ಈತನಕ ನಡೆಸಿರುವ ಪರಿಶೀಲನೆಯಲ್ಲಿ ರಸ್ತೆ ಗುಣಮಟ್ಟದಿಂದ ಕೂಡಿರುವುದು ಸಾಬೀತಾಗಿದೆ. ಎರಡನೇ ಹಂತದ ಕಾಮಗಾರಿಯನ್ನೂ ಅಷ್ಟೇ ಕಾಳಜಿಯಿಂದ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.



ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com