ಸಿಟಿ ರೈಲ್ವೆ ನಿಲ್ದಾಣಕ್ಕೆ ರಾಯಣ್ಣ ಹೆಸರು

ಬೆಂಗಳೂರು ಸಿಟಿ ರೈಲ್ವೆ ನಿಲ್ದಾಣ ಇನ್ನು ಮುಂದೆ `ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಬೆಂಗಳೂರು ಸಿಟಿ)...
ಬೆಂಗಳೂರು ನಗರ ರೈಲ್ವೆ ನಿಲ್ದಾಣ
ಬೆಂಗಳೂರು ನಗರ ರೈಲ್ವೆ ನಿಲ್ದಾಣ

ಬೆಂಗಳೂರು: ಬೆಂಗಳೂರು ಸಿಟಿ ರೈಲ್ವೆ ನಿಲ್ದಾಣ ಇನ್ನು ಮುಂದೆ `ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಬೆಂಗಳೂರು ಸಿಟಿ) ಎಂದು ಮರುನಾಮಕರಣಗೊಳ್ಳಲಿದೆ.

ಮರು ನಾಮಕರಣ ಮಾಡಲು ರೈಲ್ವೆ ಮಂಡಳಿಯಿಂದ ಬುಧವಾರ ಆದೇಶ ಬಂದಿದ್ದು, ಶೀಘ್ರವೇ ಇದಕ್ಕೆ ಅಧಿಸೂಚನೆ ಹೊರಡಿಸಲಾಗುವುದು ಎಂದು ನೈಋತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಪಿ.ಕೆ. ಸಕ್ಸೇನಾ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ರಾಜ್ಯ ಸರ್ಕಾರ ಹಾಗೂ ಕೇಂದ್ರ ಗೃಹ ಸಚಿವಾಲಯ ಈ ಬಗ್ಗೆ ರೈಲ್ವೆ ಮಂಡಳಿಗೆ ಸಂಗೊಳ್ಳಿ ರಾಯಣ್ಣ ಅವರ ಹೆಸರು ಮರುನಾಮಕರಣ ಮಾಡುವಂತೆ ಪ್ರಸ್ತಾವನೆ ಸಲ್ಲಿಸಿತ್ತು. ಇದನ್ನು ರೈಲ್ವೆ ಮಂಡಳಿ ಅಂಗೀಕರಿಸಿದೆ.ಇಲ್ಲಿಗೆ ಬರುವ ರೈಲು ಬೋಗಿಗಳ ಮೇಲೆ, ನಿಲ್ದಾಣದಲ್ಲಿ, ಟಕೆಟ್‍ಗಳ ಮೇಲೆ, ಆನ್‍ಲೈನ್‍ನಲ್ಲಿ ರಾಯಣ್ಣರ ಹೆಸರು ಬರುವಂತೆ ನೋಡಿಕೊಳ್ಳಬೇಕು ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com