
ಬೆಂಗಳೂರು: ಬೆಂಗಳೂರು ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರಿಗೆ ಬದಲು ಟಿಪ್ಪು ಸುಲ್ತಾನನ ಹೆಸರಿಡಬೇಕಿತ್ತು ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಡಾ.ಗಿರೀಶ್ ಕಾರ್ನಾಡ್ ಹೇಳಿದ್ದಾರೆ.
ವಿಧಾನಸೌಧದ ಬ್ಯಾಕ್ವೆಂಟ್ ಹಾಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಟಿಪ್ಪು ಒಬ್ಬ ದೇಶಭಕ್ತ. ಆತ ಕರ್ನಾಟಕಕ್ಕೆ, ಬೆಂಗಳೂರು ಹಾಗೂ ಮೈಸೂರಿಗೆ ನೀಡಿರುವ ಕೊಡುಗೆ ಅಪಾರ.ಟಿಪ್ಪುವಿಗೆ ಸರಿಸಾಟಿಯಾದ ಮತ್ತೊಬ್ಬ ಕನ್ನಡಿಗನಿಲ್ಲ. ಆದುದರಿಂದ ಟಿಪ್ಪುವಿನ ಹೆಸರನ್ನು ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇಡಬೇಕೆಂದು ಆಗ್ರಹಿಸಿದರು.
ಬೆಂಗಳೂರು ನಗರ ನಿರ್ಮಾಪಕ ಕೆಂಪೇಗೌಡ ನಿಜ.ಆದರೆ ಆತ ಸ್ವಾತಂತ್ರ್ಯ ಹೋರಾಟಗಾರನಲ್ಲ. ಟಿಪ್ಪು ಸುಲ್ತಾನ್ ಒಬ್ಬ ಸ್ವಾತಂತ್ರ್ಯ ಹೋರಾಟಗಾರ.ಆದುದರಿಂದ ಅವನಿಗೆ ಸಿಗುವ ಗೌರವವನ್ನು ನೀಡಲೇಬೇಕು ಎಂದು ಹೇಳಿದರು.ಕಾರ್ನಾಡರ ಈ ಹೇಳಿಕೆಗೆ ಸಮಾಜದ ವಿವಿಧ ವರ್ಗಗಳಿಂದ ವಿರೋಧ ವ್ಯಕ್ತವಾಗುತ್ತಿದೆ.
ತಿರುಚಿದ ಇತಿಹಾಸ ಆಧರಿಸಿ ಟಿಪ್ಪು ಅವಹೇಳನ:ಗೋವಿಂದರಾಜ ಭಾರತದಲ್ಲಿ ಆಳ್ವಿಕೆ ಮಾಡಿದ ರಾಜರಲ್ಲಿ ಬ್ರಿಟಿಷರಿಗೆ ಸಿಂಹಸ್ವಪ್ನವಾಗಿ ಕಾಡಿದವರಲ್ಲಿ ಹೈದರ್ ಅಲಿ, ಟಿಪ್ಪು ಪ್ರಮುಖರು. ಟಿಷರು ತಿರುಚಿ ಬರೆದ ಇತಿಹಾಸವನ್ನು ಓದಿ ಟಿಪ್ಪು ಒಬ್ಬ ದೇಶ ವಿರೋಧಿ, ಹಿಂದೂ ಧರ್ಮದ ವಿರೋಧಿ ಎಂದು ಕೆಲವರು ಹೇಳುತ್ತಿದ್ದಾರೆ. ಇವರ್ಯಾರೂ ಇತಿಹಾಸವನ್ನು ಸಮಗ್ರವಾಗಿ ಧ್ಯಯನ ಮಾಡಿದವರಲ್ಲ. ಎಂದು ಹಂಪಿ ವಿಶ್ವವಿದ್ಯಾಲಯದ ಪ್ರೊ. ಗೋವಿಂದರಾಜ ಹೇಳಿದರು.
ನಗರದಲ್ಲಿ ಆಯೋಜಿಸಿದ್ದ `ಟಿಪ್ಪು ಸುಲ್ತಾನ್‍ನ ಕರ್ನಾಟಕ ಅಭಿವೃದ್ಧಿಗೆ ನೀಡಿದ ಕೊಡುಗೆ' ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಜಗತ್ತಿನಲ್ಲೇ ಸ್ವಧರ್ಮ ಸೇರಿದಂತೆ ಅನ್ಯರಿಂದ ಅತಿ ಹೆಚ್ಚು ಟೀಕೆಗೆ ಒಳಗಾಗಿದ ವ್ಯಕ್ತಿ ಟಿಪ್ಪು. ಟಿಪ್ಪು ಮತ್ತು ಹೈದರ್ ಅಲಿ ತಮ್ಮ ಮುಂದೆ ಸೂರ್ಯ ಮುಳುಗದ ಸಾಮ್ರಾಜ್ಯ ಕಟ್ಟಿದ್ದ ಬ್ರಿಟಿಷರನ್ನೇ ಮಂಡಿಯೂರಿ ಕುಳಿತುಕೊಳ್ಳುವಂತೆ ಮಾಡಿದ್ದರು.
ಬ್ರಿಟಿಷರಿಗಿಂತ ಮುಂಚೆಯೇ ರಾಕೆಟ್ ತಂತ್ರಜ್ಞಾನ ಅಭಿವೃದ್ಧಿಪಡಿಸಿದ ಭಾರತದ ಪ್ರಥಮ ರಾಜ ಟಿಪ್ಪು ಎಂದು ಶ್ಲಾಘಿಸಿದರು.
ನಿವೃತ್ತ ಪ್ರೊಫೆಸರ್ ನರಸಿಂಹಯ್ಯ ಮಾತನಾಡಿ, ದೇಶಕ್ಕಾಗಿ ತನ್ನ ಮಕ್ಕಳನ್ನೂ ಒತ್ತೆಯಿಟ್ಟ ಜಗತ್ತಿನ ಏಕೈಕ ರಾಜ ಟಿಪ್ಪು. ಒಂದು ಕಡೆ ಬ್ರಿಟಿಷರ ಜೊತೆ ಯುದ್ಧ ಮಾಡುತ್ತ ಇನ್ನೊಂದು ಕಡೆ ರಾಜ್ಯದ ಅಭಿವೃದ್ಧಿಗೆ ಕೊಡ ಅದು ರಾಜಧರ್ಮ ರಾಜನ ಆಡಳಿತದ ವಿರುದ್ಧ ದಂಗೆ ಎದ್ದವರ ಹತ್ತಿಕ್ಕಲೇ ಬೇಕಿತ್ತು. ಕೊಡವರು ಟಿಪ್ಪು ವಿರುದ್ಧ ದಂಗೆ ಎದ್ದಿದಕ್ಕೆ ಅವರ ಮೇಲೆ 7 ಬಾರಿ ದಾಳಿಮಾಡಿ ಅಡಗಿಸಿದ್ದಾನೆಯೇ ಹೊರತು ಕೂರ್ಗಿಗಳ ಹತ್ಯೆ ಮಾಡಿಲ್ಲ. ಕೊಡುಗು-ಮೈಸೂರು ಕ್ಷೇತ್ರದ ಸಂಸದರಿಗೆ ತಿಳಿವಳಿಕೆ ಸಾಲದು ಎಂದು ಪ್ರೊ. ನರಸಿಂಹಯ್ಯ ಹೇಳಿದರು.
Advertisement