ಹುಬ್ಬಳ್ಳಿ: ಮದುವೆಯಾಗಲು ಒಪ್ಪದ ಅಪ್ರಾಪ್ತ ಬಾಲಕಿಯನ್ನು ಆಕೆಯ ಪ್ರಿಯಕರನೇ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಶುಕ್ರವಾರ ಹುಬ್ಬಳ್ಳಿಯ ಕೋರ್ಟ್ ಸರ್ಕಲ್‌ನಲ್ಲಿ ನಡೆದಿದೆ.
ಆರೋಪಿ ವಿನಯ್ ಮಂಜುನಾಥ್ ಶೆಟ್ಟಿ(19) ಎಂದು ಗುರುತಿಸಲಾಗಿದ್ದು, ಯುವಕ ತನ್ನನ್ನು ಮದವೆಯಾಗಲು ನಿರಾಕರಿಸಿದ 16 ವರ್ಷದ ಅಶ್ವಿನಿಯ ಹೊಟ್ಟೆಗೆ ಚಾಕು ಇರಿದು ಹತ್ಯೆ ಮಾಡಿದ್ದಾನೆ.
ಕಳೆದ ಆರು ತಿಂಗಳಿಂದ ಇಬ್ಬರೂ ಒಂದೇ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದರು. ಮೂರು ತಿಂಗಳಿಂದ ವಿನಯ್ ಹಾಗೂ ಅಶ್ವಿನಿ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ.
ವಿನಯ್ ಕೆಲವು ದಿನಗಳಿಂದ ತನ್ನನ್ನು ಮದುವೆಯಾಗುವಂತೆ ಅಶ್ವಿನಿಯನ್ನು ಪೀಡಿಸುತ್ತಿದ್ದ. ಆದರೆ ಮದುವೆಗೆ ಒಪ್ಪದ ಅಶ್ವಿನಿಗೆ ಬೇರೆ ಹುಡುಗನ ಜೊತೆ ಮದುವೆ ನಿಶ್ಚಯವಾಗಿತ್ತು. ಇದರಿಂದ ಕೋಪಗೊಂಡ ಯುವಕ ಅಪ್ರಾಪ್ತೆಯನ್ನು ಇಂದು ಬರ್ಬರವಾಗಿ ಕೊಲೆ ಮಾಡಿದ್ದಾನೆ. ಆರೋಪಿಯನ್ನು ವಶಕ್ಕೆ ಪಡೆದಿರುವ ಹುಬ್ಬಳ್ಳಿಯ ಉಪನಗರ ಠಾಣೆ ಪೊಲೀಸರು ಐಪಿಸಿ ಸೆಕ್ಷನ್ 302ರಡಿ ಪ್ರಕರಣ ದಾಖಲಿಸಿದ್ದಾರೆ.
ಆರೋಪಿ ವಿನಯ್ ಧಾರವಾಡ ತಾಲೂಕಿನ ಮಾಲಾಪುರ ನಿವಾಸಿಯಾಗಿದ್ದು, ಮೃತ ಅಶ್ವಿನಿ ಹುಬ್ಬಳಿಯ ನೇಕಾರ ನಗರದ ನಿವಾಸಿ ಎನ್ನಲಾಗಿದೆ.
Advertisement