ರಂಗೇರುತ್ತಿದೆ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆ

ಒಂದು ಕಡೆ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯ ಘಟಕದ ಚುನಾವಣೆ ಕಣ ರಂಗೇರುತ್ತಿದೆ...
ಕನ್ನಡ ಸಾಹಿತ್ಯ ಪರಿಷತ್ತು
ಕನ್ನಡ ಸಾಹಿತ್ಯ ಪರಿಷತ್ತು
ಬೆಂಗಳೂರು: ಒಂದು ಕಡೆ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯ ಘಟಕದ ಚುನಾವಣೆ ಕಣ ರಂಗೇರುತ್ತಿದೆ. ಮತ್ತೊಂದೆಡೆ ಕಸಾಪ ಬೆಂಗಳೂರು ನಗರ ಜಿಲ್ಲಾ ಘಟಕದ ಚುನಾವಣೆಯೂ ಕಾವೇರುತ್ತಿದೆ. 
ಪರಿಷತ್‍ಗೆ 2008ರವರೆಗೂ ಅಷ್ಟಾಗಿ ಸಂಪನ್ಮೂಲ ಕ್ರೋಡೀಕರಣವಾಗಿರಲಿಲ್ಲ. ಈ ಸನ್ನಿವೇಶದಲ್ಲಿ ಡಾ.ನಲ್ಲೂರು ಪ್ರಸಾದ್ ಪರಿಷತ್ತಿನ ಅಧಿಕಾರ ವಹಿಸಿಕೊಂಡರು. ಇದೇ ವೇಳೆ, ಆಗಿನ ಯಡಿಯೂರಪ್ಪ ಸರ್ಕಾರ ಸರ್ಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಹೆಚ್ಚು ಅನುದಾನ ನೀಡಿತ್ತು. 
ಈಗಿನ ಸರ್ಕಾರವೂ ಕೋಟ್ಯಂತರ ಹಣ ನೀಡಿರುವುದರಿಂದ ಕಸಾಪ ಈಗ ಆರ್ಥಿಕವಾಗಿ ಸಂಪನ್ನವಾಗಿದೆ. ಹೀಗಾಗಿ ಸಾಹಿತ್ಯದ ಹಿನ್ನೆಲೆಯಿಂದ ಬಂದವರು ಪದಾಧಿಕಾರಿಗಳಾಗುತ್ತಿದ್ದ ಕಾಲ ಮಾಸಿ, ಈಗ ಸಾಹಿತ್ಯೇತರರು ಪರಿಷತ್ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. 
ಯಾರ್ಯಾರಿದ್ದಾರೆ ಕಣದಲ್ಲಿ?: ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೆ ನಾಲ್ಕು ಮಂದಿ ಹೆಸರು ಸದ್ಯಕ್ಕೆ ಹೆಚ್ಚು ಪ್ರಚಲಿತದಲ್ಲಿದೆ. ಮುಂದಿನ ದಿನಗಳಲ್ಲಿ ಆಕಾಂಕ್ಷಿಗಳ ಪಟ್ಟಿ ಇನ್ನಷ್ಟು ಬೆಳೆಯುವ ಸಾಧ್ಯತೆಗಳೂ ಇವೆ. 
ಕಳೆದ ಬಾರಿ ಟಿ.ತಿಮ್ಮೇಶ್ ವಿರುದ್ಧ ಕೇವಲ 62 ಮತಗಳಿಂದ ಸೋತಿದ್ದ ಸದ್ಭಾವನಾ ಪ್ರತಿಷ್ಠಾನದ ಅಧ್ಯಕ್ಷ ಎಂ.ಪ್ರಕಾಶ್‍ಮೂರ್ತಿ, ಪತ್ರಕರ್ತ ಪಿನಾಕ್ ಪಾಣಿ, ನೇ.ಭ. ರಾಮಲಿಂಗ ಶೆಟ್ಟಿ, ಅನಿಕೇತನ ಕನ್ನಡ ಬಳಗದ ಅಧ್ಯಕ್ಷ, ಬಿಬಿಎಂಪಿ ಉದ್ಯೋಗಿ ಮಾಯಣ್ಣ ಕಣದಲ್ಲಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿಗೆ ಆರ್ಥಿಕ ಸ್ವಾವಲಂಬನೆ, ಪುಸ್ತಕ ಮಾರಾಟಕ್ಕಾಗಿ ಪುಸ್ತಕ ರಥ, ಕಸಾಪಗೆ ಸುಸಜ್ಜಿತ ಕಟ್ಟಡ, ಸಾಹಿತಿಗಳು ತಂಗಲು ಅತಿಥಿಗೃಹ, ಬೆಂಗಳೂರಿನಲ್ಲಿ ಕನ್ನಡದ ಅಸ್ತಿತ್ವ ಬಲಗೊಳಿಸುವುದು... ಎಂಬಿತ್ಯಾದಿ ಭರವಸೆಗಳು ಪ್ರಚಲಿತವಾಗಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com