ಸಿಎಂ ವಿರುದ್ಧ ಕುಟ್ಟಪ್ಪ ಪುತ್ರನ ಆಕ್ರೋಶ

ಗಲಭೆ ಸಂದರ್ಭದಲ್ಲಿ ಮೃತಪಟ್ಟ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಸಂಘಟನಾ ಕಾರ್ಯದರ್ಶಿ ದೇವಪ್ಪಂಡ ಕುಟ್ಟಪ್ಪ ಮನೆಗೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಗುರುವಾರ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು.
ಸಿದ್ದರಾಮಯ್ಯ
ಸಿದ್ದರಾಮಯ್ಯ

ಮಡಿಕೇರಿ: ಗಲಭೆ ಸಂದರ್ಭದಲ್ಲಿ ಮೃತಪಟ್ಟ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಸಂಘಟನಾ ಕಾರ್ಯದರ್ಶಿ ದೇವಪ್ಪಂಡ ಕುಟ್ಟಪ್ಪ ಮನೆಗೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಗುರುವಾರ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು. ಈ ಸಂದರ್ಭ ಕುಟ್ಟಪ್ಪ ಪುತ್ರ ಡಾಲಿ, ತನ್ನ ತಂದೆಯ ಸಾವಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳು ಬಾಯಿಗೆ ಬಂದಂತೆ ಹೇಳಿಕೆ ನೀಡುತ್ತಿರುವುದನ್ನು ನಿಲ್ಲಿಸಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾದಾಪುರ ಬಳಿಯ ಇಗ್ಗೋಡ್ಲು ಗ್ರಾಮದಲ್ಲಿನ ದೇವಪ್ಪಂಡ ಕುಟ್ಟಪ್ಪ ಸ್ವಗೃಹಕ್ಕೆ ಭೇಟಿ ನೀಡಿದ ಸಚಿವ ದಿನೇಶ್ ಗುಂಡೂರಾವ್, ಕುಟುಂಬಕ್ಕೆ ಸಾಂತ್ವನ ಹೇಳಿದರು. ಸಚಿವರು, `ಧೈರ್ಯ ತಂದುಕೊಳ್ಳಿ' ಎಂದು ಸಾಂತ್ವನದ ಮಾತನ್ನಾಡಿದರು. ಈ ಸಂದರ್ಭ ಕುಟ್ಟಪ್ಪ ಪತ್ನಿ ಚಿಣ್ಣವ್ವ ದುಃಖದ ಕಟ್ಟೆಯೊಡೆಯಿತು. ಮನೆ ಮಂದಿ ಕಣ್ಣೀರುಗರೆದರು. ಆಕ್ರೋಶ ತೋಡಿಕೊಂಡ ಕುಟ್ಟಪ್ಪ ಪುತ್ರ ಡಾಲಿ, ತನ್ನ ತಂದೆ ಕುಟ್ಟಪ್ಪ ದೇಶಪ್ರೇಮಿ. ದೇಶಕ್ಕಾಗಿಯೇ
ಪ್ರಾಣತೆತ್ತಿದ್ದಾರೆ. ತನ್ನ ತಂದೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಲಾಗಿದೆ. ಹಿಂದೂ ಸಮಾವೇಶಕ್ಕೆ ತೆರಳುವಾಗ ಪೊಲೀಸರು ಎಲ್ಲಾ  ವಾಹನಗಳ ತಪಾಸಣೆ ಕೈಗೊಳ್ಳುತ್ತಾರೆ. ಆದರೆ ಟಿಪ್ಪು ಜಯಂತಿ ಸಂದರ್ಭ ಮಡಿಕೇರಿಗೆ ಮಾರಕಾಸ್ತ್ರಗಳೊಂದಿಗೆ ತೆರಳುತ್ತಿದ್ದ ಯಾವುದೇ ವಾಹನಗಳನ್ನು ತಪಾಸಣೆ ಮಾಡಿಲ್ಲ ಎಂದೂ ಡಾಲಿ ಆರೋಪಿಸಿದರು. ತನ್ನ ತಂದೆ ಕುಟ್ಟಪ್ಪ ಕಾಂಪೌಂಡ್‍ನಿಂದ ಜಾರಿ ಸತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಾಯಿಗೆ ಬಂದಂತೆ ಹೇಳಿಕೆ ನೀಡುತ್ತಿರುವುದನ್ನು ನಿಲ್ಲಿಸಲಿ. ಜೊತೆಗೆ, ತಂದೆ ಸಾವಿಗೆ ಕಾರಣರಾದ ವರಿಗೆ ಕಠಿಣ ಶಿಕ್ಷೆಯಾಗಬೇಕೆಂದೂ ಡಾಲಿ ಒತ್ತಾಯಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com