ಬದಲಾಗಿದೆ ಪತ್ರಿಕೋದ್ಯಮ:ಎಸ್.ನಿಹಾಲ್ ಸಿಂಗ್

ದೇಶದಲ್ಲಿ ಈ ಹಿಂದೆ ತುರ್ತು ಪರಿಸ್ಥಿತಿ ಸಂದರ್ಭದಲ್ಲಿದ್ದ ಪತ್ರಿಕೋದ್ಯಮ ಇಂದು ಇಲ್ಲ. ಪತ್ರಿಕೋದ್ಯಮದ ಆಯಾಮವೇ ಬದಲಾಗಿದೆ...
ಹಿರಿಯ ಪತ್ರಕರ್ತ ಎಸ್.ನಿಹಾಲ್ ಸಿಂಗ್
ಹಿರಿಯ ಪತ್ರಕರ್ತ ಎಸ್.ನಿಹಾಲ್ ಸಿಂಗ್

ಬೆಂಗಳೂರು:ದೇಶದಲ್ಲಿ ಈ ಹಿಂದೆ ತುರ್ತು ಪರಿಸ್ಥಿತಿ ಸಂದರ್ಭದಲ್ಲಿದ್ದ ಪತ್ರಿಕೋದ್ಯಮ ಇಂದು ಇಲ್ಲ. ಪತ್ರಿಕೋದ್ಯಮದ ಆಯಾಮವೇ ಬದಲಾಗಿದೆ. ಎಲ್ಲವೂ ಹಣದ ಮೇಲೆ  ನಿಂತಿದೆ ಎಂದು ಹಿರಿಯ ಪತ್ರಕರ್ತ ಎಸ್.ನಿಹಾಲ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.

ಐಐಜೆಎಂ ಸಂಸ್ಥೆಯು ಶನಿವಾರ ರೋಟರಿ ಸಂಸ್ಥೆಯಲ್ಲಿ ಏರ್ಪಡಿಸಿದ್ದ `ಇಂಡಿಯನ್  ಮೀಡಿಯಾ: ಶೀಪ್ ಇನ್ ವೋಲ್ವ್‍ಸ್' ಕುರಿತು ವಿಚಾರಸಂಕಿರಣದಲ್ಲಿ ಅವರು  ಮಾತನಾಡಿದರು. ಪತ್ರಿಕೋದ್ಯಮ ಸಮಾಜದ ಸಾಮಾನ್ಯ ವರ್ಗದ ಪ್ರತಿ ವ್ಯಕ್ತಿಯನ್ನು  ತಲುಪುವ ಹಾಗೂ ಆತನ ದುಃಖ ಆಲಿಸುವಂತಿರಬೇಕು. ತುರ್ತು ಪರಿಸ್ಥಿತಿ ವೇಳೆ ಪ್ರತಿ ಯೊಬ್ಬ ಪತ್ರಕರ್ತ ಜನರ ಬಳಿ ಹೋಗಿ ಅವರ ಕಷ್ಟ-ಸುಖ ಆಲಿಸಿ, ಅಲ್ಲಿನ ಪರಿಸ್ಥಿತಿ, ಸ್ಥಿತಿಗತಿ  ಅರಿಯುತ್ತಿದ್ದರು. ಅವರಿಗೆ ಹಣಕ್ಕಿಂತ ತಮ್ಮ ಕರ್ತವ್ಯವೇ ದೇವರೆಂದು  ಭಾವಿಸುತ್ತಿದ್ದರು. ಆದರೆ, ಇಂದು ಪರಿಸ್ಥಿತಿ ಬದಲಾಗಿದೆ ಎಂದರು.

ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲವೂ ಬಂದುಹೋಗುತ್ತದೆ. ಅಲ್ಲಿ ಎಲ್ಲರೂ  ಪತ್ರಕರ್ತರಾಗುತ್ತಾರೆ. ಅವರದ್ದೇ ಆದ ಅಭಿಪ್ರಾಯವನ್ನು ಬೇರೆಯವರಿಗೆ ತಿಳಿಸುವಲ್ಲಿ  ಹಾಗೂ ಬೇರೆಯವರ ಅಭಿಪ್ರಾಯ ಸಂಗ್ರಹಿಸುವಲ್ಲಿ  ನಿರತರಾಗಿರುತ್ತಾರೆ. ಕೆಲವು  ಪತ್ರಿಕೆಗಳಲ್ಲಿ ಸುದ್ದಿಗಿಂತ ಜಾಹೀರಾತಿಗೆ ಹೆಚ್ಚು ಒತ್ತು ನೀಡುತ್ತಾರೆ. ಆದರೆ, ಅದು ಪತ್ರಿಕೋ ದ್ಯಮವಲ್ಲ. ಇನ್ನೊಂದೆಡೆ ದೇಶದ ಪತ್ರಿಕೋದ್ಯಮದಲ್ಲಿ ವಿದೇಶಿ ಸುದ್ದಿಗಳಿಗೆ ಹೆಚ್ಚು ಒತ್ತು  ನೀಡುವುದಿಲ್ಲ. ನಮ್ಮ ಪ್ರತಿನಿಧಿಗಳನ್ನು ಅಲ್ಲಿಗೆ ಕಳುಹಿಸಿ ವರದಿ ಮಾಡುವಷ್ಟು  ಪತ್ರಿಕೋದ್ಯಮ ಬೆಳೆಯ ಬೇಕು. ಆದರೆ, ದೇಶ-ವಿದೇಶ ಸುದ್ದಿಗಳ ನ್ನು ಏಜೆನ್ಸಿ ಮುಖಾಂತರ  ತರಿಸಿಕೊಳ್ಳಲಾಗುತ್ತ ದೆ ಎಂದು ಹೇಳಿದರು. ನಮಗೆ ನಮ್ಮ ಸ್ಥಳೀಯ ಸುದ್ದಿಗಳು  ಎಷ್ಟು  ಪ್ರಾಮುಖ್ಯವೋ ಅಷ್ಟೇ ಪ್ರಾಮುಖ್ಯತೆಯನ್ನು ವಿದೇಶಿ ಸುದ್ದಿಗಳಿಗೂ ಕೊಡಬೇಕು. ಅದೇ ರೀತಿ ಗ್ರಾಮೀಣ ಪತ್ರಿಕೋದ್ಯಮಕ್ಕೂ ಹೆಚ್ಚು ಒತ್ತು  ನೀಡಬೇಕು. ಇಂದಿನ ಪತ್ರಕರ್ತರ ಕರ್ತವ್ಯದ  ರೀತಿಯೇ ಬದಲಾಗಿದೆ. ಹಿಂದಿನ ಪತ್ರಕರ್ತರಿಗೆ ಸಂಜೆ ವೇಳೆಗೆ ದಿನದ ದುಡಿಮೆಯೇ ಅವರ  ಸುದ್ದಿ. ಅದೇ ಅವರಿಗೆ ಎಲ್ಲ ಆಗಿತ್ತು. ಆದರೆ ಇಂದು ಅದು ಬದಲಾಗಿದೆ ಎಂದರು.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com