ಮೆಟ್ರೊ ರೀಚ್-2ಗೆ ಸಿಎಂ ಸಿದ್ದರಾಮಯ್ಯ ಚಾಲನೆ

ಬಹುನಿರೀಕ್ಷಿತ ಮೆಟ್ರೊ ಟರ್ಮಿನಲ್ ರೀಚ್-2 (ಕಡುನೇರಳೆ ಮಾರ್ಗ) ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೇಂದ್ರ ನಗರಾಭಿವೃದ್ಧಿ ಸಚಿವ ಎಂ. ವೆಂಕಯ್ಯ...
ಮೆಟ್ರೊ ರೀಚ್-3ಗೆ ಚಾಲನೆ ನೀಡುತ್ತಿರುವ ಸಿಎಂ ಸಿದ್ದರಾಮಯ್ಯ ಹಾಗೂ ವೆಂಕಯ್ಯ ನಾಯ್ಡು (ಸಂಗ್ರಹ ಚಿತ್ರ )
ಮೆಟ್ರೊ ರೀಚ್-3ಗೆ ಚಾಲನೆ ನೀಡುತ್ತಿರುವ ಸಿಎಂ ಸಿದ್ದರಾಮಯ್ಯ ಹಾಗೂ ವೆಂಕಯ್ಯ ನಾಯ್ಡು (ಸಂಗ್ರಹ ಚಿತ್ರ )

ಬೆಂಗಳೂರು: ಬಹುನಿರೀಕ್ಷಿತ ಮೆಟ್ರೊ ಟರ್ಮಿನಲ್ ರೀಚ್-2 (ಕಡುನೇರಳೆ ಮಾರ್ಗ) ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೇಂದ್ರ ನಗರಾಭಿವೃದ್ಧಿ ಸಚಿವ ಎಂ. ವೆಂಕಯ್ಯ ನಾಯ್ಡು ಅವರು  ಸೋಮವಾರ ಲೋಕಾರ್ಪಣೆಗೊಳಿಸಿದರು.

ಮಾಗಡಿ ರಸ್ತೆಯಿಂದ ಮೈಸೂರು ರಸ್ತೆಗೆ ಸಂಪರ್ಕ ಕಲ್ಪಿಸುವ ಈ ಮೆಟ್ರೋ ಮಾರ್ಗಕ್ಕೆ ಇಂದು ಮಧ್ಯಾಹ್ನ ಸಿಎಂ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು. ಇದರೊಂದಿಗೆ ಬಿಎಂಆರ್ ಸಿಎಲ್ ಬೆಂಗಳೂರಿಗೆ `ಮೂರು ಮೆಟ್ರೋ ಮಾರ್ಗಗಳ'ನ್ನು ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸಿದಂತಾಗಿದೆ.

ಮಾಗಡಿ ರಸ್ತೆ, ಮೈಸೂರು ರಸ್ತೆ ಸುರಂಗ ಮಾರ್ಗ ಕಾಮಗಾರಿ ಆರಂಭವಾಗಿದ್ದು 2010ರಲ್ಲಿ. 2013-14ರಲ್ಲಿ ಕಾಮಗಾರಿ ಪೂರ್ಣಗೊಳಿಸುವ ಗುರಿ ಇತ್ತು. ಆದರೆ, ಈ ಮಾರ್ಗದಲ್ಲಿ ಸುರಂಗ ನಿರ್ಮಾಣ ಕಾರ್ಯ ಇದ್ದುದ್ದರಿಂದ ಕಾಮಗಾರಿ 1 ವರ್ಷ ವಿಳಂಬವಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com