ಬೆಂಗಳೂರು: ಮೋದಿ ಒಬ್ಬ ಭಾಷಣಕಾರನೇ ಹೊರತು ಕೆಲಸಗಾರನಲ್ಲ. ವೇದಿಕೆ ಮೇಲೆ ಮಾತ್ರ ಅಂಬೇಡ್ಕರ್ ವಿಚಾರ ಹೇಳುತ್ತಾರೆ. ಕೃತಿಯಲ್ಲಿ ಮೇಲ್ಜಾತಿಯ ತುಷ್ಟೀಕರಣ ಮಾಡುತ್ತಾರೆ. ಗೋಮಾಂಸದ ರಾಜಕಾರಣ ಮಾಡಿದ ಕೋಮುವಾದಿ ಮತಾಂಧ ಶಕ್ತಿಗಳಿಗೆ ಬಿಹಾರದ ಜನರು ತಕ್ಕ ಉತ್ತರ ನೀಡಿದ್ದಾರೆ ಎಂದು ರಿಪಬ್ಲಿಕ್ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಹಾಗೂ ಡಾ. ಬಿ.ಆರ್.ಅಂಬೇಡ್ಕರ್ ಅವರ ಮೊಮ್ಮಗ ಆನಂದರಾಜ್ ಅಂಬೇಡ್ಕರ್ ಹೇಳಿದರು.
ಕರ್ನಾಟಕ ಸರ್ಕಾರ ಸಚಿವಾಲಯ ಕ್ಲಬ್‍ನಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಪಜಾ, ಪಪಂ ನೌಕರರ ಸಂಘ ಹಮ್ಮಿಕೊಂಡಿದ್ದ ಡಾ.ಬಿ.ಆರ್. ಅಂಬೇಡ್ಕರ್ ಅವರ 125ನೇ ಜಯಂತ್ಯುತ್ಸವದ ವರ್ಷಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಹಿಂದುಳಿದ ಜನಾಂಗದಲ್ಲಿ ಹುಟ್ಟಿದ ಮೋದಿ ಪ್ರಧಾನಿಯಾಗಲು ಅಂಬೇಡ್ಕರ್ ರಚಿಸಿದ ಸಂವಿ ಧಾನ ಕಾರಣವಾಗಿದೆ. ಆದರೆ, ಮೋದಿ ಮಾತು ಬೇರೆ, ಕೃತಿ ಬೇರೆಯಾಗಿದೆ. ಮೇಲ್ಜಾತಿಯ ಮುಖಂಡರನ್ನು ಈ ದೇಶದ ನಾಯಕರನ್ನಾಗಿ ಮಾಡುತ್ತದೆ. ಆದರೆ ವಿಶ್ವವೇ ಜನನಾಯಕನೆಂದು ಒಪ್ಪಿಕೊಂಡ ಅಂಬೇಡ್ಕರ್ ಗೆ ಸೂಕ್ತ ಸ್ಥಾನಮಾನ ಸಿಗದಿಲ್ಲದಿರುವುದು ದುರಂತ ಎಂದು ವಿಷಾದಿಸಿದರು.
Advertisement