ಯಾಂಗೂನ್: ಮಾಯನ್ಮಾರ್ ಚುನಾವಣೆಯ ಸಂಪೂರ್ಣ ಫಲಿತಾಂಶದ ಬಳಿಕ, ಆಂಗ್ ಸಾನ್ ಸೂಕಿ ಅವರಿಗೆ ಅಧಿಕಾರ ಹಸ್ತಾಂತರಿಸುವುದಾಗಿ ಅಧ್ಯಕ್ಷ ತೇನ್ ಸೇನ್ ಹೇಳಿದ್ದಾರೆ.
ಸೂಕಿ ಅವರ ಈ ವಿಜಯ, ತನ್ನ ಆಡಳಿತದ ಸುಧಾರಣಾ ಕ್ರಮಗಳ ಫಲಿತಾಂಶ ಎಂದು ಅವರು ಹೇಳಿಕೊಂಡಿದ್ದಾರೆ. ಫಲಿತಾಂಶದ ಬಳಿಕ ನಡೆದ ಮೊದಲ ಸಾರ್ವಜನಿಕ ಭಾಷಣದಲ್ಲಿ ಅವರು ಪಕ್ಷಗಳನ್ನು ಉದ್ದೇಶಿಸಿ ಮಾತನಾಡಿದ್ದಾರೆ.
``ನಮ್ಮ ಸರ್ಕಾರದ ಸುಧಾರಣಾ ಕ್ರಮಗಳಿಂದಾಗಿ ಈ ಚುನಾವಣೆ ಯಶಸ್ವಿಯಾಗಿ ನಡೆಯಲು ಸಾಧ್ಯವಾಯಿತು. ಅಧಿಕಾರ ಹಸ್ತಾಂತರದ ಬಗ್ಗೆ ಯಾರಿಗೂ ಚಿಂತೆ ಬೇಡ. ಅದನ್ನು ಸಹಜವಾಗಿ ನೆರವೇರಿಸಿಕೊಡಲಾಗುವುದು. ಗೆದ್ದ ಪಕ್ಷ ತನ್ನ ಕರ್ತವ್ಯ ಮಾಡಬೇಕು, ಪ್ರತಿಪಕ್ಷಗಳು ಅದರ ಬಗ್ಗೆ ನಿಗಾ ಇಟ್ಟಿರಬೇಕು'' ಎಂದಿದ್ದಾರೆ.