
ಮಂಗಳೂರು: ಕೊಲೆಗೆ ಸಂಚು ಹಾಗೂ ಕೊಲೆ ಯತ್ನ ಆರೋಪದಡಿ ಬಂಧನಕ್ಕೊಳಗಾಗಿರುವ ಬಹುಭಾಷಾ ನಟ ವಿನೋದ್ ಆಳ್ವ ಅವರ ಜಾಮೀನು ಅರ್ಜಿಯನ್ನು ಕೋರ್ಟ್ ವಜಾಗೊಳಿಸಿದ್ದು, ಆರೋಪಿಯನ್ನು ನವೆಂಬರ್ 21ರವರೆಗೆ ನ್ಯಾಯಾಂಗ ಬಂಧನಕ್ಕ ಆದೇಶಿಸಿದೆ.
ಆಳ್ವ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ವಜಾಗೊಳಿಸಿದ ಪುತ್ತೂರು ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ನಾಗರಾಜ್ ಅವರು, ಆಳ್ವಗೆ ನ..21ರವರೆಗೆ ನ್ಯಾಯಾಂಗ ಬಂಧನ ವಿಧಿಸಿದರು.
ಆಳ್ವ ಅವರ ಮ್ಯಾನೇಜರ್ ಆಗಿದ್ದ ಸಚ್ಚಿದಾನಂದ್ ಅವರು ವಿನೋದ್ ಆಳ್ವ ಅವರು ತಮ್ಮ ಕೊಲೆಗೆ ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿ ಸಂಪ್ಯಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ವಿನೋದ್ ಅವರನ್ನು ನಿನ್ನೆ ಪೊಲೀಸರು ಬಂಧಿಸಿದ್ದರು.
ಪುತ್ತೂರು ತಾಲೂಕಿನ ಪಡುವನ್ನೂರು ಗ್ರಾಮದ ಸಚ್ಚಿದಾನಂದ್ ಅವರು, ವಿನೋದ್ ಆಳ್ವರ ತೋಟದ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದರು. ಆದರೆ ಇತ್ತೀಚಿಗೆ ಇಬ್ಬರ ಮಧ್ಯೆ ವೈಮನಸ್ಸು ಉಂಟಾದ ಕಾರಣ ಸಚ್ಚಿದಾನಂದ್ ಅವರು ಕಳೆದ ಮಾರ್ಚ್ 7ರಂದು ತೋಟದ ವ್ಯವಹಾರವನ್ನು ಕೈಬಿಟ್ಟಿದ್ದರು. ಬಳಿಕ ನ್ಯಾಯಾಲಯಕ್ಕೆ ದೂರು ನೀಡಿ ಅಧಿಕಾರ ಪತ್ರ ಇರುವ ಕಾರಣ ನ್ಯಾಯೋಚಿತ ಸವಲತ್ತು ನೀಡುವಂತೆ ಮನವಿ ಮಾಡಿದ್ದರು ಎನ್ನಲಾಗಿದೆ.
ಈ ನಡುವೆ ಭಾನುವಾರ ಸಚ್ಚಿದಾನಂದ್ ಅವರು ಈಶ್ವರಮಂಗಲ ಡೈರಿಗೆ ಬೈಕ್‌ನಲ್ಲಿ ಹಾಲು ಕೊಂಡೊಯ್ಯುತ್ತಿದ್ದ ವೇಳೆ ಎದುರಿನಿಂದ ಜೀಪು ಚಲಾಯಿಸಿಕೊಂಡು ಬಂದ ಆಳ್ವರ ಚಾಲಕ ಉದಯ್ ಚೆಕ್ಕಿತ್ತಾಯ ಬೈಕ್‌ಗೆ ಹಿಂಭಾಗದಿಂದ ಡಿಕ್ಕಿ ಹೊಡೆಸಿದ್ದರು. ಈ ವೇಳೆ ಸಚ್ಚಿದಾನಂದ್ ಬೈಕ್ ಸಹಿತ ರಸ್ತೆ ಪಕ್ಕದ ಚರಂಡಿಗೆ ಬಿದ್ದಿದ್ದರು. ಬಳಿಕ ವಿನೋದ್ ಆಳ್ವ ಮತ್ತು ಅವರ ಚಾಲಕ ಉದಯ ಚೆತ್ತಿತ್ತಾರಿಂದ ಜೀವಭಯವಿದ್ದು, ರಕ್ಷಣೆ ನೀಡುವಂತೆ ದೂರು ಸಚ್ಚಿದಾನಂದ್ ದೂರು ನೀಡಿದ್ದರು.
Advertisement