
ಶ್ರೀರಂಗಪಟ್ಟಣ: ಯಾವುದೇ ಬೆದರಿಕೆ ಕರೆಗಳಿಗೂ ನಾನು ಹೆದರುವುದಿಲ್ಲ ಎಂದು ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವೇಶ್ವರ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಶ್ರೀರಂಗಪಟ್ಟಣದ ಬಾಬುರಾಯನ ಕೊಪ್ಪಲಿನ ಗುಂಜ ನರಸಿಂಹ ಸ್ವಾಮಿ ದೇವಾಲಯದಲ್ಲಿ ಲೋಕಕಲ್ಯಾಣಾರ್ಥವಾಗಿ ಹಮ್ಮಿಕೊಂಡಿರುವ ಧನ್ವಂತ್ರಿ ಹೋಮದಲ್ಲಿ ಭಾಗವಹಿಸಿ ಮಾತನಾಡಿದ ಅವರು. ನಾನು ಮುಸ್ಲಿಂ ವಿರೋಧಿಯಲ್ಲ, ಸ್ನೇಹಿತ ಎಂದು ಹೇಳಿದ್ದಾರೆ.
ಅಬ್ದುಲ್ ಸಲಾಂ ಎಂಬ ಹೆಸರಿನ ಖಾತೆ ಹೊಂದಿರುವ ವ್ಯಕ್ತಿಯೊಬ್ಬ ಫೇಸ್ಬುಕ್ನಲ್ಲಿ ಪೇಜಾವರ ಶ್ರೀಗಳಿಗೆ ಬೆದರಿಕೆ ಹಾಕಿದ್ದ ಹಿನ್ನೆಲೆಯಲ್ಲಿ ಶ್ರೀಗಳು ಪ್ರತಿಕ್ರಿಯೆ ನೀಡಿದ್ದಾರೆ.
ಎಲ್ಲಾ ಸವಲತ್ತುಗಳನ್ನು ಅಲ್ಪ ಸಂಖ್ಯಾತರಿಗೆ ಸೀಮಿತಗೊಳಿಸುವುದು ತರವಲ್ಲ. ಎಲ್ಲ ವರ್ಗದ ಜನತೆಯನ್ನು ಸಮಾನವಾಗಿ ಕಾಣಬೇಕೆಂದು ರಾಜ್ಯ ಸರ್ಕಾರಕ್ಕೆ ತಾಕೀತು ಮಾಡಿದರು. ಅಯೋಧ್ಯೆಯಲ್ಲಿ ರಾಮ ಮಂದಿರ ಇತ್ತು ಎನ್ನುವುದಕ್ಕೆ ಎಲ್ಲ ಪುರಾವೆಗಳು ಸಿಕ್ಕಿವೆ. ಆದ್ದರಿಂದ ಕೇಂದ್ರ ಸರ್ಕಾರ ಅಲ್ಲಿ ಮಂದಿರ ನಿರ್ಮಾಣ ಮಾಡಲು ಮುಸ್ಲಿಂ ಬಂಧುಗಳು ಸಹಕರಿಸಬೇಕೆಂದು ಕೋರಿದರು.
Advertisement