ಅಡಿ ಪದಚ್ಯುತಿ ಸರ್ಕಾರಕ್ಕೆ ಬಿಟ್ಟದ್ದು: ಮಜಗೆ

ಉಪ ಲೋಕಾಯುಕ್ತರ ಪದಚ್ಯುತಿ ನಿರ್ಧಾರ ಸರ್ಕಾರಕ್ಕೆ ಬಿಟ್ಟದ್ದು ಎಂದು ನಿವೃತ್ತ ಉಪ ಲೋಕಾಯುಕ್ತ...
ನ್ಯಾ.ಎಸ್ ಬಿ ಮಜಗೆ
ನ್ಯಾ.ಎಸ್ ಬಿ ಮಜಗೆ
ಬೆಂಗಳೂರು: ಉಪ ಲೋಕಾಯುಕ್ತರ ಪದಚ್ಯುತಿ ನಿರ್ಧಾರ ಸರ್ಕಾರಕ್ಕೆ ಬಿಟ್ಟದ್ದು ಎಂದು ನಿವೃತ್ತ ಉಪ ಲೋಕಾಯುಕ್ತ ಹಾಗೂ ಕಾಂಗ್ರೆಸ್ ಮುಖಂಡ ಭೀಮಣ್ಣ ಖಂಡ್ರೆ ಅವರ ಅಳಿಯ ನ್ಯಾ. ಎಸ್.ಬಿ.ಮಜಗೆ ಹೇಳಿದ್ದಾರೆ. 
``ಸುಭಾಷ್ ಅಡಿ ಕೆಲಬಾರಿ ಅಧಿಕಾರ ಹಸ್ತಕ್ಷೇಪ ಮಾಡಿದ್ದರು. ಡಾ.ಶೈಲಜಾ ಪಾಟೀಲ್ ಪ್ರಕರಣ ನನ್ನ ಬಳಿ ತನಿಖೆಗೆ ಬಂದಿತ್ತು. ಪ್ರಾಥಮಿಕ ವರದಿಯಲ್ಲಿ ಆರೋಪ ಸಾಬೀತಾಗಿತ್ತು. ಈ ಬಗ್ಗೆ ಸರ್ಕಾರಕ್ಕೆ ವರದಿ ನೀಡಿದ್ದೆ. 
ಪ್ರಕರಣ ಅಡಿ ಬಳಿ ಹೇಗೆ ಹೋಯಿತು? ಶೈಲಜಾ ಅವರಿಗೆ ಕ್ಲೀನ್‍ಚಿಟ್ ಸಿಕ್ಕಿದ್ದು ಹೇಗೆ? ಎಂಬುದು ಗೊತ್ತಿಲ್ಲ . ನನ್ನ ತಂದೆ ಹಾಕಿಕೊಟ್ಟ ಮಾರ್ಗದಲ್ಲೇ ನಾನು ನಡೆಯುತ್ತಿದ್ದೇನೆ. ನನ್ನ ಮೇಲಿನ ಆರೋಪಗಳಿಗೆ ತಲೆ ಬಾಗುವೆ'' ಎಂದು ಸುವರ್ಣ ನ್ಯೂಸ್‍ಸಂದರ್ಶನದಲ್ಲಿ ಅವರು ಕಣ್ಣೀರುಗರೆದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com