ಸಾಂದರ್ಭಿಕ ಚಿತ್ರ
ಜಿಲ್ಲಾ ಸುದ್ದಿ
ನಾಳೆ ಧಾರವಾಡದಲ್ಲಿ ಪ್ರಶಸ್ತಿ ವಾಪ್ಸಿ ಲೇಖಕರ ಸಮಾಗಮ
ಡಾ. ಎಂ.ಎಂ. ಕಲಬುರ್ಗಿ ಹತ್ಯೆ ನಂತರ ರಾಜ್ಯ ಹಾಗೂ ದೇಶಾದ್ಯಂತ ಪ್ರಶಸ್ತಿ ವಾಪ್ಸಿ ಚಳವಳಿಯಾಗಿ ರೂಪುಗೊಂಡಿದ್ದು, ಪ್ರಶಸ್ತಿಗಳನ್ನು ಮರಳಿಸಿದ ಲೇಖಕರ..
ಧಾರವಾಡ: ಡಾ. ಎಂ.ಎಂ. ಕಲಬುರ್ಗಿ ಹತ್ಯೆ ನಂತರ ರಾಜ್ಯ ಹಾಗೂ ದೇಶಾದ್ಯಂತ ಪ್ರಶಸ್ತಿ ವಾಪ್ಸಿ ಚಳವಳಿಯಾಗಿ ರೂಪುಗೊಂಡಿದ್ದು, ಪ್ರಶಸ್ತಿಗಳನ್ನು ಮರಳಿಸಿದ ಲೇಖಕರ ಸಮಾಗಮ ಇದೇ ಮೊದಲ ಬಾರಿಗೆ ನ. 27ರಂದು ಧಾರವಾಡದಲ್ಲಿ ಆಗುತ್ತಿದೆ. ಡಾ. ಎಂ.ಎಂ. ಕಲಬುರ್ಗಿ ಹತ್ಯಾ ವಿರೋಧಿ ಹೋರಾಟ ವೇದಿಕೆ ನ. 27ರಂದು ಸಂಜೆ 5.30ಕ್ಕೆ ವಿದ್ಯಾವರ್ಧಕ ಸಂಘದಲ್ಲಿ ಹಮ್ಮಿಕೊಂಡಿರುವ `ಅಸಹಿಷ್ಣುತೆ ಮುಕ್ತ ಸಮಾಜದೆಡೆಗೆ ಸಂವಾದದಲ್ಲಿ ಪ್ರಶಸ್ತಿ ವಾಪಸ್ ಮಾಡಿದ ಮಹಾರಾಷ್ಟ್ರ, ಗುಜರಾತ್, ಗೋವಾ ಹಾಗೂ ಕರ್ನಾಟಕದ ಸಾಹಿತಿಗಳು ಆಸಕ್ತ ಲೇಖಕರೊಂದಿಗೆ ಸಂವಾದ ನಡೆಸಲಿದ್ದಾರೆ. ಸಾಹಿತಿ ಬಾಳಣ್ಣ ಸೀಗಿಹಳ್ಳಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ , ಅಸಹಿಷ್ಣುತೆ ಹಿನ್ನೆಲೆ ಯಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹಿಂದಿರುಗಿಸಿದ ಗುಜರಾತ್ ನ ಜಿಎನ್ ದೇವಿ, ಅನಿಲ್ ಜೋಶಿ ಹಾಗೂ ಕನ್ನಡದ ಲೇಖಕರಾದ ರಹಮತ್ ತರೀಕೆರೆ, ಕೆ. ನೀಲಾ, ಸಂಗಮೇಶ ಮೆಣಸಿನಕಾಯಿ ಅವರು `ನಾನೇಕೆ ಪ್ರಶಸ್ತಿ ಹಿಂತಿರುಗಿಸಿದೆ?' ಎಂಬ ಕುರಿತು ಮಾತನಾಡಲಿದ್ದಾರೆ ಎಂದರು.
ಸಂವಾದದಲ್ಲಿ ಯಾರ್ಯಾರು?: ಹಿರಿಯ ಸಾಹಿತಿ ಡಾ. ರಾಜೇಂದ್ರ ಚೆನ್ನಿ ಅವರ ಸಂಯೋ ನೆಯಲ್ಲಿ ನಡೆಯುವ ಸಂವಾದದಲ್ಲಿ ಗುಜರಾತ್ ನ ರಮೇಶ್ ಓಜಾ, ಉತ್ತಮ ಪರ್ಮಾರ,
ಕಣಾಜಿ ಪಟೇಲ್, ಮನಿಷಿ ಜನಿ, ಪರೇಶ ನಾಯ್ಕ್ , ಪ್ರೊ.ಸುರೇಖಾ ದೇವಿ, ಮಹಾರಾಷ್ಟ್ರದ ಸಜೀವ ಖಾಂಡೇಕರ, ವೈಶಾಲಿ ನಾರ್ಕರ, ಸಂದೇಶ ಭಂಡಾರ, ಅನೀಶ್ ಮಾಲೇಕರ, ಗಣೇಶ ವಿಸ್ಪುತೇಯ , ಗೋವಾದ ದಾಮೋದರ ಮಾಂಜೋ, ದತ್ತ ನಾಯ್ಕ್ ಎನ್. ಶಿವದಾಸ, ದಿಲೀಪ್ ಬೋರ್ಕರ, ಅರುಣ ಸಖಾರದಂಡೆ, ಅರವಿಂದ ಮಾಲಗಿತ್ತಿ, ಹುಡಗಿ, ಕಾಶೀ ನಾಥ ಅಂಬಲಗಿ, ಅರುಣ, ಮುದ್ದು ತೀರ್ಥಹಳ್ಳಿ, ಚಿಕ್ಕಪ್ಪನಹಳ್ಳಿ ಷಣ್ಮುಖ, ಉಗಮ ಶ್ರೀನಿವಾಸ, ಕೆ. ಅಕ್ಷತಾ, ಸತೀಶ ಜವರೇಗೌಡ ಭಾಗವಹಿಸಲಿದ್ದಾರೆ ಎಂದು ಬಾಳಣ್ಣ ಸೀಗಿಹಳ್ಳಿ ತಿಳಿಸಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ