ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ಡಾ.ಹೋ.ಶ್ರೀನಿವಾಸಯ್ಯ ಮಾತನಾಡಿ, ಇಂದಿನ ಮಕ್ಕಳು ಶಿಕ್ಷಿತರಾ ಗುತ್ತಿದ್ದಾರೆ. ಆದರೆ ಗುಣವಂತರಾಗು ತ್ತಿಲ್ಲ. ಹೆಚ್ಚು ಅಂಕಗಳನ್ನು ಪಡೆದು ಸಾಕ್ಷರರಾಗುತ್ತಿದ್ದಾರೆಯೇ ಹೊರತು ಶಿಕ್ಷಿತರಾಗುತ್ತಿಲ್ಲ. ಜಾಗತೀಕರಣದ ಕಾಲದಲ್ಲಿ ಯುವಕರು ಸಮಾಜದಿಂದ ದೂರವಾಗುತ್ತಿದ್ದಾರೆ ಎಂಬುದು ಆತಂಕ ಕಾರಿ ವಿಚಾರ. ಇದರಿಂದ ಸಣ್ಣ ವಿಚಾರ ಗಳಿಗೂ ಆತ್ಮಹತ್ಯೆ ಪ್ರಕರಣಗಳು ಹೆಚ್ಚು ತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು. ಪ್ರಾಧ್ಯಾಪಕಿ ಡಾ.ಲೀಲಾ ಅಪ್ಪಾಜಿ ಮಾತನಾಡಿ, ನೋಬಲ್ ವ್ಯಕ್ತಿತ್ವ ಗಾಂಧೀಜಿಯವರೊಳಗೆ ಅಂತರ್ಗತವಾಗಿದ್ದು, ಅವರಿಗೆ ಯಾವುದೇ ನೋಬಲ್ ಪ್ರಶಸ್ತಿಯ ಅವಶ್ಯಕತೆಯಿಲ್ಲ. ನೋಬಲ್ ಪ್ರಶಸ್ತಿಗಾಗಿ ಗಾಂಧೀಜಿ ಯವರ ಹೆಸರನ್ನು ಹಲವು ಬಾರಿ ಶಿಫಾರಸು ಮಾಡಿದರೂ, ಗಾಂಧೀ ಯವರಿಗೆ ನೋಬಲ್ ಪ್ರಶಸ್ತಿ ನಿರಾ ಕರಿಸಲಾಗಿದೆ. ವಿಪರ್ಯಾಸವೆಂದರೆ ಪ್ರತಿ ವರ್ಷ ಶಾಂತಿ ಕ್ಷೇತ್ರದಲ್ಲಿ ಪ್ರಶಸ್ತಿ ಪಡೆದವರು ಗಾಂಧೀಜಿಯವರನ್ನು ಸ್ಮರಿಸುತ್ತಾರೆ. ಗಾಂಧಿಯಂಥ ಸಾಧಕರಿಗೆ ನೋಬಲ್ ನೀಡುವುದರಿಂದ ಆ ಪ್ರಶಸ್ತಿಯ ಗರಿ ಹೆಚ್ಚುತ್ತದೆ ಎಂದರು. ಕಾರ್ಯಕ್ರಮದಲ್ಲಿ ಮಹಾದೇವಪ್ಪ ಮೈಲಾರ ಜೀವನ ಚರಿತ್ರೆ ಲೋಕಾರ್ಪಣೆಗೊಳಿಸಲಾಯಿತು. ಮಹಾದೇವಪ್ಪ ಮೈಲಾರ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ಅಧ್ಯಕ್ಷ ಎಚ್.ಎಸ್.ಮಹಾದೇವ್, ವೈದ್ಯೆ, ಮಹಾದೇವಪ್ಪ ಮೈಲಾರ ಅವರ ಪುತ್ರಿ ಕಸ್ತೂರಿ ದೇವಿ ಉಪಸ್ಥಿತರಿದ್ದರು.