ನಿವೃತ್ತ ಅಧಿಕಾರಿಯ ಎಟಿಎಂ ಪಿನ್ ನಂಬರ್ ಕೇಳಿದ ಭೂಪ

ನಿವೃತ್ತ ಐಪಿಎಸ್ ಅಧಿಕಾರಿ ಡಿ.ವಿ ಗುರುಪ್ರಸಾದ್ ಅವರಿಗೆ ಕರೆ ಮಾಡಿದ ದುಷ್ಕರ್ಮಿಯೊಬ್ಬ ಎಟಿಎಂ ಕಾರ್ಡ್‍ನ ಗುಪ್ತ ಮಾಹಿತಿ ಪಡೆದು ಹಣ ಲಪಟಾಯಿಸುವ ವಿಫಲ ಯತ್ನ ನಡೆಸಿದ್ದಾನೆ.
ನಿವೃತ್ತ ಅಧಿಕಾರಿಯ ಎಟಿಎಂ ಪಿನ್ ನಂಬರ್ ಕೇಳಿದ ಭೂಪ
ನಿವೃತ್ತ ಅಧಿಕಾರಿಯ ಎಟಿಎಂ ಪಿನ್ ನಂಬರ್ ಕೇಳಿದ ಭೂಪ

ಬೆಂಗಳೂರು: ನಿವೃತ್ತ ಐಪಿಎಸ್ ಅಧಿಕಾರಿ ಡಿ.ವಿ ಗುರುಪ್ರಸಾದ್ ಅವರ ಮೊಬೈಲ್ ಫೋನ್‍ಗೆ ಕರೆ ಮಾಡಿದ ದುಷ್ಕರ್ಮಿಯೊಬ್ಬ ಎಟಿಎಂ ಕಾರ್ಡ್‍ನ ಗುಪ್ತ ಮಾಹಿತಿ ಪಡೆದು ಹಣ ಲಪಟಾಯಿಸುವ ವಿಫಲ ಯತ್ನ ನಡೆಸಿದ್ದಾನೆ.
ಈ ಬಗ್ಗೆ ಗುರುಪ್ರಸಾದ್ ಅವರು ನೀಡಿದ ದೂರು ಆಧಾರಿಸಿ ತನಿಖೆ ಕೈಗೊಂಡಿರುವ ಸಿಸಿಬಿ ಪೊಲೀಸರು ಫೋನ್ ಕರೆ ಪರಿಶೀಲನೆ ನಡೆಸುತ್ತಿದ್ದಾರೆ. ಭಾನುವಾರ ಮಧ್ಯಾಗ್ನ 3 ಗಂಟೆ
ಸುಮಾರಿಗೆ ಫೋನ್‍ವೊಂದರಲ್ಲಿ ಮಾತನಾಡುತ್ತಿದ್ದಾಗ ಮತ್ತೊಂದು ಫೋನ್ ರಿಂಗ್ ಆಯಿತು. ಆ ಕರೆಯನ್ನು ನನ್ನ ಪುತ್ರ ಸ್ವೀಕರಿಸಿದರು. ಈ ವೇಳೆ ಹಿಂದಿಯಲ್ಲಿ ಮಾತನಾಡಿದ
ವ್ಯಕ್ತಿಯೊಬ್ಬ, ತಾನು ಬ್ಯಾಂಕ್ ಮಾ್ಯನೇಜರ್ ಆಗಿದ್ದು ಎಟಿಎಂನ ಮಾಹಿತಿ ನೀಡುವಂತೆ ಕೋರಿದ್ದಾನೆ.
ಇದು ವಂಚಕರ ಕರೆ ಎಂದು ಖಚಿತವಾಗುತ್ತಿದ್ದಂತೆ ನನ್ನ ಪುತ್ರ ಕರೆಯನ್ನು ಕಟ್ ಮಾಡಿದ್ದಾರೆ. ಅದಾದ ಹತ್ತು ನಿಮಿಷಗಳಲ್ಲಿ ಗುರುಪ್ರಸಾದ್ ಅವರ ಮತ್ತೊಂದು ಫೋನ್‍ಗೆ ಕರೆ ಬಂದಿತ್ತು. ಅದೇ ವ್ಯಕ್ತಿ ಎಟಿಎಂ ಪಿನ್ ಸಂಖ್ಯೆ ಕೇಳಿಕೊಂಡು ಕರೆ ಮಾಡಿದ್ದ. ಎಟಿಎಂ ಕಾರ್ಡ್‍ನ ಸಂಖ್ಯೆ ಹಾಗೂ ಪಿನ್ ಸಂಖ್ಯೆ ಕೇಳಿದ್ದ. ಆಗ ಅವರು ಎಟಿಎಂ ಕಾರ್ಡ್ ಬಳಕೆ ಮಾಡುವುದಿಲ್ಲ ಎಂದು ಹೇಳಿದ್ದಾರೆ.
ತಾನು ಐಪಿಎಸ್ ಅಧಿಕಾರಿಯಾಗಿದ್ದು ಫೋನ್ ಕರೆ ರೆಕಾರ್ಡ್ ಮಾಡಿಕೊಳ್ಳುತ್ತಿರುವೆ. ಈಗಲೇ ಕರೆ ಬಂದಿರುವ ಸ್ಥಳವನ್ನು ಪತ್ತೆ ಮಾಡಿ ಬಂಧಿಸಲು ಕ್ರಮ ಕೈಗೊಳ್ಳುವೆ ಎಂದಿದ್ದಾರೆ.
ಕೂಡಲೇ ದುಷ್ಕರ್ಮಿ ಪೊೀನ್ ಕಟ್ ಮಾಡಿದ್ದಾನೆಂದು ಗುರುಪ್ರಸಾದ್ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ ಕರೆ ಬಿಹಾರದಿಂದ ಬಂದಿರುವುದು ಸಾಬೀತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com