ಆಟೋ ಚಾಲಕರಿಗೂ ಬಿಪಿಎಲ್

ರಾಷ್ಟ್ರೀಯ ಜೀವನ್ ಬೀಮಾ ಸುರಕ್ಷಾ ಯೋಜನೆಯಡಿ ಆಟೋ ಚಾಲಕರಿಗೂ ಬಿಪಿಎಲ್ ಕಾರ್ಡ್ ನೀಡುವ ಬಗ್ಗೆ...
ಆಟೋ ಚಾಲಕರು
ಆಟೋ ಚಾಲಕರು
 ಬೆಂಗಳೂರು: ರಾಷ್ಟ್ರೀಯ ಜೀವನ್ ಬೀಮಾ ಸುರಕ್ಷಾ ಯೋಜನೆಯಡಿ ಆಟೋ ಚಾಲಕರಿಗೂ ಬಿಪಿಎಲ್ ಕಾರ್ಡ್ ನೀಡುವ ಬಗ್ಗೆ ಸಂಬಂಧಪಟ್ಟ ಸಚಿವರ ಜತೆ ಚರ್ಚಿಸುವುದಾಗಿ ಹಾಗೂ ಅಗತ್ಯ ಸೌಲಭ್ಯಗಳನ್ನು ಒದಗಿಸುವುದಾಗಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಭರವಸೆ ನೀಡಿದ್ದಾರೆ.
ಆಟೋ ರಿಕ್ಷಾ ಚಾಲಕರ ಸಂಘ ಸಿಐಟಿಯು ಬೆಂಗಳೂರು ವತಿಯಿಂದ ಶಂಕರಪುರದಲ್ಲಿ ಭಾನುವಾರ ಏರ್ಪಡಿಸಿದ್ದ 34ನೇ ಸರ್ವಸದಸ್ಯರ ಸಭೆ ಹಾಗೂ 3ನೇ ತ್ರೈ ಮಾಸಿಕ
ಸಮ್ಮೇಳನದಲ್ಲಿ ಮಾತನಾಡಿದ ಅವರು, ಬಿಪಿಎಲ್ ಕಾರ್ಡ್, ನಿವೇಶನ ಸೇರಿದಂತೆ ಆಟೋ ಚಾಲಕರದ್ದು ಹಲವು ಬೇಡಿಕೆಗಳಿವೆ.
ಈ ಹಿಂದೆ ಸಚಿವ ದಿನೇಶ್ ಗುಂಡೂರಾವ್ ಅವರು ಬಿಪಿಎಲ್ ಕಾರ್ಡ್ ಬಗ್ಗೆ ಪ್ರಸ್ತಾಪ ಮಾಡಿದ್ದರು. ಹಾಗಾಗಿ ಅವರು ಸೇರಿದಂತೆ ಸಂಬಂಧಪಟ್ಟ ಅ„ಕಾರಿಗಳ ಜತೆ ಚರ್ಚಿಸಲಾಗುವುದು. ಆಟೋ ಚಾಲಕರ ವಿರುದ್ಧ ವಿವಿಧ ರೀತಿಯ ಸಾಕಷ್ಟು ದೂರುಗಳು ದಾಖಲಾಗುತ್ತಿವೆ. ಹಾಗಾಗಿ ಚಾಲಕರೂ ಕಾನೂನು ಮೀರಬಾರದು. ತಪ್ಪು ಮಾಡಿದವರ ವಿರುದ್ಧ ಅಧಿಕಾರಿಗಳು ಕ್ರಮಕೈಗೊಳ್ಳಲಿದ್ದಾರೆ. ಹಾಗಾಗಿ ನೀವು ಎಚ್ಚರದಿಂದ ವಾಹನ ಚಾಲನೆ ಮಾಡಬೇಕುಎಂದು ಸೂಚಿಸಿದರು.
ಪೊಲೀಸರು ಅಥವಾ ಸಾರಿಗೆ ಇಲಾಖೆ ಅಧಿಕಾರಿಗಳು ಅನಗತ್ಯವಾಗಿ ದಂಡ ವಿಧಿಸುವುದಿಲ್ಲ. ಚಾಲಕರು ತಪ್ಪು ಮಾಡಿದಲ್ಲಿ  ದಂಡ ವಿಧಿಸುತ್ತಾರೆ. ಹಾಗಾಗಿ ತಪ್ಪು ಮಾಡಬೇಡಿ .ಆಕಸ್ಮಿ  ಕವಾಗಿ ಆದರೆ ಅದನ್ನು  ಮತ್ತೆ ಸರಿಪಡಿಸಿಕೊಳ್ಳಿ ಎಂದ ಅವರು, ಸಭೆಗೆ ಸಂಬಂಧಪಟ್ಟ ಎಲ್ಲ ಅಧಿಕಾರಿಗಳನ್ನು ಕರೆದು ಚರ್ಚಿಸಲಾಗುವುದು ಆಗ ಆಟೋ ಚಾಲಕ
ರನ್ನೂ ಆಹ್ವಾನಿಸಲಾಗುವುದು ಎಂದರು. ಸಂಘದ ಅಧ್ಯಕ್ಷ ಎಂ.ಎಸ್. ಮೀನಾಕ್ಷಿ ಸುಂದರಂ ಮಾತನಾಡಿ, ಅಸಂಘಟಿತ ಕಾರ್ಮಿಕ ವಲಯಕ್ಕೆ ಸರ್ಕಾರ ಹಣ ಘೋಷಿಸಿದ್ದು, ಅದನ್ನು ಬಿಡುಗಡೆ ಮಾಡಬೇಕು. ಸಾರಿಗೆ ಇಲಾಖೆ ಹಾಗೂ ಪೊಲೀಸರು ಅನಗತ್ಯವಾಗಿ ದೂರು ದಾಖಲಿಸುತ್ತಿದ್ದು, ಅದನ್ನು ನಿಲ್ಲಿಸಬೇಕು. ಪ್ರಮುಖವಾಗಿ ಸಿಂಪ್ಯೂಟರ್ ದೂರುಗಳನ್ನು ಸ್ಥಗಿತಗೊಳಿಸಬೇಕು. ಆಟೋ ಚಾಲಕರಿಗೆ
ಇರುವಂತೆ ಕ್ಯಾಬ್‍ಗಳಿಗೂ ಕಾನೂನು ಜಾರಿಗೆ ತರಬೇಕು ಎಂದು ಆಗ್ರಹಿಸಿದರು. ಸಿಐಟಿಯು ಮುಖಂಡರಾದ ಎಚ್. ಎನ್. ಗೋಪಾಲಗೌಡ, ಕೆ. ಪ್ರಕಾಶ್, ಕೆ.ಎನ್  ಉಮೇಶ್, ಪ್ರತಾಪ್ ಸಿಂಹ, ರುದ್ರಮೂರಿತಿ, ಬಿ.ವಿ ರಾಘವೇಂದ್ರ  ಸೇರಿದಂತೆ ಸಂಘದ  ಸದಸ್ಯರು ಇದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com