5ನೇ ದಿನಕ್ಕೆ ಲಾರಿ ಮುಷ್ಕರ

ಹೆದ್ದಾರಿಗಳಲ್ಲಿ ಟೋಲ್ ವ್ಯವಸ್ಥೆ ರದ್ದುಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಲಾರಿ...
ಲಾರಿ ಮುಷ್ಕರದಿಂದಾಗಿ ಸಂಚಾರವಿಲ್ಲದೆ, ಸಾಗಾಟವಿಲ್ಲದೆ ನಿಲ್ದಾಣಗಳಲ್ಲಿ ನಿಂತಿರುವ ಲಾರಿಗಳು
ಲಾರಿ ಮುಷ್ಕರದಿಂದಾಗಿ ಸಂಚಾರವಿಲ್ಲದೆ, ಸಾಗಾಟವಿಲ್ಲದೆ ನಿಲ್ದಾಣಗಳಲ್ಲಿ ನಿಂತಿರುವ ಲಾರಿಗಳು

ಬೆಂಗಳೂರು: ಹೆದ್ದಾರಿಗಳಲ್ಲಿ ಟೋಲ್ ವ್ಯವಸ್ಥೆ ರದ್ದುಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಲಾರಿ ಚಾಲಕರ ಕೆಲ ಸಂಘಟನೆಗಳು ನಡೆಸುತ್ತಿರುವ ಮುಷ್ಕರ ಐದನೇ ದಿನಕ್ಕೆ ಕಾಲಿರಿಸಿದೆ.

ಈ ನಡುವೆ ಕೇಂದ್ರ ಸಾರಿಗೆ ಸಚಿವ ಲಾರಿ ಮಾಲೀಕರ ಸಂಘಟನೆಗಳ ಮುಖಂಡರೊಂದಿಗೆ ಸೋಮವಾರ ಸಂಜೆ ದೆಹಲಿಯಲ್ಲಿ ಸಭೆ ಕರೆದಿದ್ದಾರೆ. ಸಭೆ ಬಳಿಕ ಮುಷ್ಕರ ಮುಂದುವರೆಸಬೇಕೋ ಬೇಡವೋ ಎನ್ನುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ರಾಜ್ಯ ಲಾರಿ ಮಾಲೀಕರು ಹಾಗೂ ಏಜೆಂಟರ ಸಂಘದ ಅಧ್ಯಕ್ಷ ಷಣ್ಮುಗಪ್ಪ ಹೇಳಿದ್ದಾರೆ.

ರಾಜ್ಯದಲ್ಲಿ ಲಾರಿಗಳ ಸಂಚಾರ ಸ್ಥಗಿತಗೊಂಡಿರುವ ಕಾರಣ ಸರ್ಕಾರ ಹಾಗೂ ಲಾರಿ ಮಾಲೀಕರಿಗೆ ಲಕ್ಷಾಂತರ ರುಪಾಯಿ ನಷ್ಟ ಉಂಟಾಗುತ್ತಿದೆ. ಒಂದು ವೇಳೆ ಮುಷ್ಕರ ಇನ್ನಷ್ಟು ದಿನ ಮುಂದುವರೆದರೆ ಕಟ್ಟಡ ನಿರ್ಮಾಣ ವಸ್ತುಗಳು ಸೇರಿದಂತೆ ಎಲ್ಲಾ ವಸ್ತುಗಳ ಸರಬರಾಜಿನಲ್ಲಿ ವ್ಯತ್ಯಾಯ ಉಂಟಾಗಲಿದೆ. ಅಗತ್ಯ ವಸ್ತುಗಳ ಬೆಲೆಯಲ್ಲಿ ಏರಿಕೆ ಉಂಟಾಗಿದೆ.ಇದು ಸಾಮಾನ್ಯ ಜನ ಜೀವನದ ಮೇಲೆ ಋಣಾತ್ಮಕ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದರು. ಪ್ರತಿಭಟನೆ ಆರಂಭವಾಗಿ 5 ದಿನಗಳ ಕಳೆದರೂ ಮುಷ್ಕರ ಅಂತಹ ಪರಿಣಾಮ ಬೀರಿಲ್ಲ.

ಲಾರಿ ಸಂಘಟನೆಗಳಲ್ಲಿ ಮುಷ್ಕರ ವಿಚಾರವಾಗಿ ಭಿನ್ನಾಭಿಪ್ರಾಯ ಇರುವುದರಿಂದ ಕೆಲ ಲಾರಿ ಮಾಲೀಕರು ಪ್ರತಿಭಟನೆಯಲ್ಲಿ ಭಾಗವಹಿಸಿದೆ ಎಂದಿನಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ.
ಹೀಗಾಗಿ, ಐದನೇ ದಿನಕ್ಕೆ ಮುಷ್ಕರ ಕಾಲಿಟ್ಟಿದ್ದರೂ ಪ್ರತಿಭಟನೆಯ ಬಿಸಿ ಯಾರಿಗೂ ಅಷ್ಟಾಗಿ ತಟ್ಟಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com