ಮಂತ್ರಿಗೆ ಹಸಿರು ಪೀಠ ಸಮನ್ಸ್

ಮಂತ್ರಿ ಡೆವಲಪರ್ಸ್ ನ ವ್ಯವಸ್ಥಾಪಕ ನಿರ್ದೇಶಕ ಸುಶೀಲ್ ಮಂತ್ರಿಗೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಸಮನ್ಸ್ ಜಾರಿ ಮಾಡಿದೆ.
ಮಂತ್ರಿ ಡೆವಲಪರ್ಸ್
ಮಂತ್ರಿ ಡೆವಲಪರ್ಸ್

ನವದೆಹಲಿ: ಬೆಳ್ಳಂದೂರು ಮತ್ತು ಅಗರ ಕೆರೆಗಳನ್ನು ಒತ್ತುವರಿ ಮಾಡಿ ಕಟ್ಟಡ ನಿರ್ಮಿಸಿದ ಪ್ರಕರಣಕ್ಕೆ ಸಂಬಂಧಿಸಿ ಮಂತ್ರಿ ಡೆವಲಪರ್ಸ್ ನ ವ್ಯವಸ್ಥಾಪಕ ನಿರ್ದೇಶಕ ಸುಶೀಲ್ ಮಂತ್ರಿಗೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಸಮನ್ಸ್ ಜಾರಿ ಮಾಡಿದೆ.
ಮಂಗಳವಾರ ನಡೆಯಲಿರುವ ಖುದ್ದು ವಿಚಾರಣೆ ವೇಳೆ ಹಾಜರಿರುವಂತೆ ನ್ಯಾಯಾಧಿಕರಣ ಸೋಮವಾರ ಆದೇಶ ನೀಡಿದೆ. ಕೆರೆ ಒತ್ತುವರಿ ಕುರಿತಂತೆ ಸ್ಥಳ ಪರಿಶೀಲನೆಗೆ ನ್ಯಾಯಾಧಿಕರಣ ರಚಿಸಿದ್ದ ತಜ್ಞರ ಸಮಿತಿ ಸೆ.11 ರಂದು ಭೇಟಿ ನೀಡಿದ್ದ ವೇಳೆ ಅಗತ್ಯ ಮಾಹಿತಿ ನೀಡುವ ಬದಲಿಗೆ ಸಮೀಕ್ಷಾ ಕಾರ್ಯಕ್ಕೆ ಅಡ್ಡಿ ಪಡಿಸಿದ್ದ ಆರೋಪ ಸುಶೀಲ್ ಮಂತ್ರಿ ಮೇಲಿದೆ.
ಹಸಿರು ನ್ಯಾಯಾಧಿಕರಣದ ಆದೇಶದಂತೆ ಒತ್ತುವರಿ ಪ್ರದೇಶ ಮತ್ತು ಒತ್ತುವರಿಯಿಂದಾಗಿ ಪರಿಸರದ ಮೇಲಾಗಿರುವ ಹಾನಿ ಪ್ರಮಾಣ ಅಂದಾಜು ಮಾಡಲು ಡಾ.ಡಿ.ಕೆ ಅಗರ್ ವಾಲ್ ಮತ್ತು ಒತ್ತುವರಿಯಿಂಡಾಗಿ ಪರಿಸರದ ಮೇಲಾಗಿರುವ ಹಾನಿ ಪ್ರಮಾಣ ಅಂದಾಜು ಮಾಡಲು ಡಾ.ಡಿ.ಕೆ ಅಗರ್ ವಾಲ್ ಮತ್ತು ಪ್ರೊ. ಎ.ಆರ್ ಯೂಸೂಫ್ ಅವರು ಇತರೆ ಅಧಿಕಾರಿಗಳ ಜತೆ ಒತ್ತುವರಿ ಪ್ರದೇಶಕ್ಕೆ ತೆರಳಿದ್ದರು. ಆ ಸಮಯದಲ್ಲಿ ಮಾಹಿತಿ ನಿಡುವ ಬದಲು ಕೆಲಸಕ್ಕೆ ಅಡ್ಡಿ ಪಡಿಸಿ ಪರಿಕರಗಳನ್ನು ಕಸಿದುಕೊಂದಿದ್ದರು. ವಿಚಾರಣೆ ವೇಳೆ ಈ ವಿಷಯ ಪ್ರಸ್ತಾಪಿಸಿದಾಗ, ತೀವ್ರ ಆಕ್ಷೇಪ ವ್ಯಕ್ತಪಡಿಸಿದ ನ್ಯಾಯಮೂರ್ತಿ ಸ್ವತಂತ್ರ ಕುಮಾರ್, ಮಂಗಳವಾರ ಖುದ್ದು ಹಾಜರಾಗುವಂತೆ ಆದೇಶಿಸಿದರು.
ಬೆಳ್ಳಂದೂರು ಮತ್ತು ಆಗರ ಕೆರೆಗಳ ನಡುವೆ ಅಕ್ರಮ ಮತ್ತು ನಿಯಮ ಮೀರಿ ಕಟ್ಟಡ ನಿರ್ಮಿಸಿ, ರಾಜಕಾಲುವೆ ಸೇರಿದಂತೆ ಕೆರೆಗಳ ಜಲಮೂಲಗಳಿಗೆ ಹಾನಿ ಮಾಡಿದ್ದ ಆರೋಪದ ಮೇಲೆ ನ್ಯಾಯಾಧಿಕರಣ ಈಗಾಗಲೇ ಮಂತ್ರಿ ಟೆಕ್ ಝೋನ್ ಪ್ರೈವೆಟ್ ಲಿಮಿಟೆಡ್ ಗೆ ರೂ.17 .35 ಕೋಟಿ ಕೋರ್ ಮೈಂಡ್ ಸಾಫ್ಟ್ ವೇರ್ ಆಂಡ್ ಸರ್ವಿಸಸ್ ಸಂಸ್ಥೆಗೆ ರೂ.22 .5 ಕೋಟಿ ದಂಡ ವಿಧಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com