108ಕ್ಕೆ 150 ಹೊಸ ಆ್ಯಂಬುಲೆನ್ಸ್ ಸೇರ್ಪಡೆ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ 108 ಆರೋಗ್ಯ ಕವಚ ಯೋಜನೆಗೆ 150 ಹೊಸ ಆ್ಯಂಬುಲೆನ್ಸ್ ಗಳು ಸೇರ್ಪಡೆಯಾಗುತ್ತಿವೆ. ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೂತನ ವಾಹನಗಳ ಸೇವೆಗೆ ಚಾಲನೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ 108 ಆರೋಗ್ಯ ಕವಚ ಯೋಜನೆಗೆ 150 ಹೊಸ ಆ್ಯಂಬುಲೆನ್ಸ್ ಗಳು ಸೇರ್ಪಡೆಯಾಗುತ್ತಿವೆ.

ಬುಧವಾರ ವಿಧಾನಸೌಧದ ಮುಂದೆ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನೂತನ ವಾಹನಗಳ ಸೇವೆಗೆ ಚಾಲನೆ ನೀಡುವರು. ಯೋಜನೆ ಕುರಿತು ವಿವರಿಸಿರುವ ಆರೋಗ್ಯ ಸಚಿವ ಯು.ಟಿ.ಖಾದರ್, ಸದ್ಯ ರಾಜ್ಯದಲ್ಲಿ 711 ಆಂಬ್ಯುಲೆನ್ಸ್ ಗಳು ತುರ್ತು ಸೇವೆಗಾಗಿ ಮೀಸಲಾಗಿತ್ತು, ಇದೀಗ ಹೊಸ ವಾಹನಗಳು
ಸೇರ್ಪಡೆಯಾಗುತ್ತಿವೆ. ಈ ಯೋಜನೆ ಮೂಲಕ ಎಲ್ಲಾ ರೀತಿಯ ತುರ್ತು ಸಂದರ್ಭಗಳಲ್ಲಿ ಸಿಗುವಂತಹ ಸೇವೆ, ಹೆರಿಗೆ ಅಥವಾ ಪ್ರಸೂತಿ ಸಂದರ್ಭದಲ್ಲಿ, ರಸ್ತೆ ಅಥವಾ ಇನ್ನಿತರ ಅಪಘಾತಗಳಾದಾಗ ತುರ್ತು ಚಿಕಿತ್ಸೆಗೆ ಬಳಸಿಕೊಳ್ಳಲಾಗುತ್ತಿದೆ ಎಂದರು.

ಸುಮಾರು 85 ಸಾವಿರ ಜನಸಂಖ್ಯೆಗೆ ಒಂದರಂತೆ ಆಂಬ್ಯುಲೆನ್ಸ್ ಒದಗಿಸಲಾಗಿದೆ. ಇವುಗಳನ್ನು ಭೌಗೋಳಿಕವಾಗಿ ನಿರ್ದಿಷ್ಟ ಸ್ಥಳಗಳಲ್ಲಿ ಇರಿಸಲಾಗಿದೆ. ಎಂದರು. ಈವರೆಗೆ ಆರೋಗ್ಯ ಕವಚ ಸೇವೆ ಯನ್ನು 3803024 ಫಲಾನುಭವಿಗಳು ಸೌಲಭ್ಯ ಬಳಸಿಕೊಂಡಿದ್ದಾರೆ. ಇದರಲ್ಲಿ 1556593(ಶೇ.41) ಗರ್ಭಿಣಿಯರೇ ಸೇರಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com