ತಪ್ಪಿಗೆ ಬೆಪ್ಪಾಗಿ ತಲೆತಗ್ಗಿಸಿ ಕುಳಿತ ವ್ಯವಸ್ಥೆ

ಈ ಹಿಂದೆ ಮಹಿಳೆಯರ ಮೇಲಿನ ದೌರ್ಜನ್ಯ, ಅತ್ಯಾಚಾರ, ಅವಘಡಗಳು ನಡೆದಾಗ ದಿಗ್ಗನೆ ಎಚ್ಚೆತ್ತು ಬಡಬಡಿಸಿದ್ದ ಸರ್ಕಾರಿ ವ್ಯವಸ್ಥೆಗಳು ಮತ್ತೊಮ್ಮೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದ ಮತ್ತೊಂದು ಅತ್ಯಾಚಾರ ಪ್ರಕರಣದಿಂದ ಕಾನೂನು ಸುವ್ಯವಸ್ಥೆ ನಿಭಾಯಿಸುವ ಸರ್ಕಾರಿ ವ್ಯವಸ್ಥೆ ಬೆಪ್ಪಾಗಿ ಕುಳಿತಿದೆ.
ಈ ಹಿಂದೆ ಮಹಿಳೆಯರ ಮೇಲಿನ ದೌರ್ಜನ್ಯ, ಅತ್ಯಾಚಾರ, ಅವಘಡಗಳು  ನಡೆದಾಗ ದಿಗ್ಗನೆ ಎಚ್ಚೆತ್ತು ಬಡಬಡಿಸಿದ್ದ ಸರ್ಕಾರಿ ವ್ಯವಸ್ಥೆಗಳು ಮತ್ತೊಮ್ಮೆ ಅದೇ ರೀತಿ ವರ್ತಿಸಿವೆ. ಪರಿಸ್ಥಿತಿ ನಿಯಂತ್ರಿಸಲು  ಹಿಂದಿನ ಘಟನೆಗಳನ್ನು   ಪಾಠವಾಗಿಸಿಕೊಳ್ಳುವಲ್ಲಿ ವಿಫಲವಾಗಿರುವುದಕ್ಕೆ ನಮ್ಮ ಮುಂದೆ ಪರಿಹಾರ ಇಲ್ಲ ಎಂಬಂತೆ ತಲೆ ತಗ್ಗಿಸಿ ನಿಂತಿವೆ.
ಈ ಹಿಂದಿ ಐಟಿ ಉದ್ಯೋಗಿ ಪ್ರತಿಭಾ ಪ್ರಕರಣ, ನಂತರ ವಿಮಾನ ನಿಲ್ದಾಣ ರಸ್ತೆಯಲ್ಲಿ ನಡೆದಿದ್ದ ಪ್ರಕರಣಗಳ ಬಳಿಕವೂ ಸರ್ಕಾರವು ಒಂದಷ್ಟು ಪರಿಣಾಮಕಾರಿ ಬದಲಾವಣೆ ತರಬೇಕೆಂದು ಹೊರಟಿದ್ದೇನೋ ನಿಜ. ಆ ನಿಟ್ಟಿನಲ್ಲಿ ಕೆಲವು ಕ್ರಮ ಅನುಷ್ಠಾನ ಆಗಿದ್ದೂ ಇದೆ. ಆದರೆ, ಈಗ ನಡೆದಿರುವ ಘಟನೆ ಕೈಗೊಂಡ ಕ್ರಮಗಳನ್ನೆಲ್ಲ ಹುಸಿ ಗೊಳಿಸಿದೆ.
ಟ್ಯಾಕ್ಸಿ ಸೇರಿದಂತೆ, ಕಾರ್ಪೊರೇಟ್ ಕಂಪನಿಯ ಸಿಬ್ಬಂದಿ ಕರೆದೊಯ್ಯುವ ವಾಹನಗಳ ಮೇವೆ ವಿಶೇಷ ನಿಗಾಕ್ಕೆ ಹತ್ತಾರು ವ್ಯವಸ್ಥೆಗಳುಂಟು. ಇವೆಲ್ಲಾ ಹಿಂದೆ ನಡೆದ ಘಟನೆಗಳಿಂದಾದ ಬದಲಾವಣೆಗಳು. ಉದಾಹರಣೆಗೆ ಜೆಪಿಎಸ್ ಮೂಲಕ  ವೆಹಿಕಲ್ ಟ್ರ್ಯಾಕಿಂಗ್, ಮಹಿಳಾ ಸಿಬ್ಬಂದಿ ಕೊನೆ ಸ್ಥಳದಲ್ಲಿ  ಇಳಿಯುವುದಾದರೆ ಸೆಕ್ಯುರಿಟಿ ಸಿಬ್ಬಂದಿ, ವಾಹನಗಳಲ್ಲಿ ತುರ್ತು ಅಲರಾಂ, ವಾಹನ  ಚಾಲಕರ ತಪಾಸಣೆ, ಪೊಲೀಸರಿಂದ ಚಾಲಕರ ವೈಯಕ್ತಿಕ ಮಾಹಿತಿ ಪರಿಶೀಲನೆ ಇತ್ಯಾದಿ, ಇತ್ಯಾದಿ . ಆದರೆ ಇವಷ್ಟೇ ನಿಯಮಗಳು ಸಾಲದು ಎಂಬುದಕ್ಕೆ ಎರಡು ದಿನಗಳ ಹಿಂದೆ ನಡೆದ ಘಟನೆಯೇ ಸಾಕ್ಷಿ 
ಕೈಚೆಲ್ಲಿದ ಅಧಿಕಾರಿಗಳು: ಇನ್ನು ಈ ವಿಚಾರವಾಗಿ ಪೊಲೀಸ್ ಅಥವಾ ಸಾರಿಗೆ ಇಲಾಖೆಯ ಹಿರಿಯಅಧಿಕಾರಿಗಳನ್ನು ಪ್ರಶ್ನಿಸಿದರೆ, ನಮ್ಮಿಂದ ಇನ್ನೇನು  ಮಾಡಲು ಸಾಧ್ಯವಿದೆ ನೀವೇ ಹೇಳಿ ಎಂದು ಮರು ಪ್ರಶ್ನಿಸುತ್ತಾರೆ. ಇಂಥ ಘಟನೆಗಳು ಮರುಕಳಿಸದಂತೆ ಮಾಡಲು ಅವರಲ್ಲೂ ಉತ್ತರವಿಲ್ಲ. ಸಾರಿಗೆ ಇಲಾಖೆ ಏನು ಮಾಡಿತ್ತು?
ಪ್ರತಿಭಾ ಸಾವಿನ ಪ್ರಕರಣ ಆದ ಬಳಿಕ ಎಚ್ಚೆತ್ತಿದ್ದ ಸಾರಿಗೆ ಇಲಾಖೆಯು ಕಠಿಣ ನಿಯಮಗಳನ್ನು ರೂಪಿಸಿತ್ತು. ಅದರಂತೆ ಖಾಸಗಿ ವಾಹನಗಳು, ಬಿಪಿಒ, ಐಟಿ ಕಂಪನಿಗಳಲ್ಲಿ ಕಾರ್ಯನಿರ್ವಹಿಸುವ ಕ್ಯಾಬ್‍ಗಳ ಮೇಲೆ ಹೆಚ್ಚು ನಿಗಾ ವಹಿಸಿದ್ದ ಇಲಾಖೆಯು ಹೊಸ ಆದೇಶ ಹೊರಡಿಸಿ ಒಂದಷ್ಟು ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ತಿಳಿಸಿತ್ತು. ಹೊಸದಾಗಿ ಖರೀದಿಸಿದ ವಾಹನದ ಮಾಡಲ್, ಆ ವಾಹನಕ್ಕಿರಬೇಕಾದ ಸೌಕರ್ಯಗಳ ಬಗ್ಗೆ ಇಲಾಖೆಗೆ ಪ್ರಮಾಣ ಪತ್ರ ಒದಗಿಸುವುದು ಸೇರಿದಂತೆ ಅನೇಕ ನಿರ್ದೇಶನಗಳನ್ನು ನೀಡಿತ್ತು.
ಕ್ಯಾಬ್‍ನಲ್ಲಿ ಕಡ್ಡಾಯವಾಗಿ ಮಾಲೀಕರ ಸ್ವವಿವರ,ವಾಹನಕ್ಕೆ ಸಂಬಂಧಿಸಿದ ದಾಖಲೆಗಳು, ಚಾಲಕರ ಬಗೆಗಿನ ಮಾಹಿತಿ ಎಲ್ಲವನ್ನೂ ಇರಬೇಕೆಂದು ತಿಳಿಸಲಾಗಿತ್ತು ಎಂದು ಸಾರಿಗೆ ಪ್ರಾದೇಶಿಕ ಸಾರಿಗೆ ಇಲಾಖೆಯ ಜಂಟಿ ಆಯುಕ್ತ ನರೇಂದ್ರ ಹೊಳ್ಕರ್ `ಕನ್ನಡಪ್ರಭ'ಕ್ಕೆ ಸ್ಪಷ್ಟಪಡಿಸಿದರು.
ಇನ್ನು ಬೆಂಗಳೂರು ಖಾಸಗಿ ಟ್ಯಾಕ್ಸಿ ಅಸೋಸಿಯೇಷನ್ ಅಧ್ಯಕ್ಷ ರಾಧಾಕೃಷ್ಣ ಹೊಳ್ಳ ಪ್ರತಿಕ್ರಿಯಿಸಿ, ಟ್ಯಾಕ್ಸಿಗಳಿಗೆ ಸರ್ಕಾರ- ಪೊಲೀಸ್ ಇಲಾಖೆರೂಪಿಸಿರುವ ನಿಯಮ ಕಡ್ಡಾಯವಾಗಿ ಜಾರಿಯಾಗುತ್ತಿದೆ, ಇದರಲ್ಲಿ ಅನುಮಾನವೇ ಇಲ್ಲ. ಆದರೆ, ಇಂತಹ ಘಟನೆಗಳು ನಡೆಯಬಾರದಿತ್ತು, ಇದು ಇಡೀ ವ್ಯವಸ್ಥೆಗೆ ಕಪ್ಪು ಚುಕ್ಕಿಯಾಗಿದೆ. ಇಂತಹ ಸಮಸ್ಯೆ ಮುಂದೆ ಮರುಕಳಿಸದಂತೆ ಎಲ್ಲರೂ ಕುಳಿತು ಒಂದು ರೂಪುರೇಷೆ ಸಿದ್ದಪಡಿಸುವ ಅಗತ್ಯವಿದೆ ಎಂದರು.
ಆರೋಪಿಗಳ ಹಿನ್ನೆಲೆ: ಆರೋಪಿಗಳಾಗ ಸುನೀಲ ಹಾಗೂ ಯೋಗೇಶ ಇಬ್ಬರು ಕತ್ರಿಗುಪ್ಪೆಯಲ್ಲಿ ವಾಸವಿದ್ದರು. ಚಿಕ್ಕಮಗಳೂರು ಜಿಲ್ಲೆಯ ಎಸ್.ಬಿದರೆ ಗ್ರಾಮದ ನಿವಾಸಿ ಓಂಕಾರಪ್ಪನವರ ಪುತ್ರ ಸುನೀಲ(23), 10ನೇ ತರಗತಿ ಅನುತ್ತೀರ್ಣನಾಗಿದ್ದ. ನಾಲ್ಕು ವರ್ಷಗಳ ಹಿಂದೆ ಊರು ತೊರೆದಿದ್ದ ಆರೋಪಿ, ಬೆಂಗಳೂರಿಗೆ ಬರುವುದಕ್ಕೂ ಮೊದಲು ಲಾರಿ ಚಾಲಕ ನಾಗಿ ಕೆಲಸ ಮಾಡುತ್ತಿದ್ದ. ಕತ್ರಿಗುಪ್ಪೆಯಲ್ಲಿ ವಾಸವಿರುವಚಿಕ್ಕಪ್ಪ ಶಿವಾನಂದ ಅವರು 2 ಟಿಟಿ ವಾಹನಗಳನ್ನು ಹೊಂದಿದ್ದು ಈ ಪೈಕಿ ಒಂದು ವಾಹನವನ್ನು ಸುನೀಲ ಓಡಿಸುತ್ತಿದ್ದ. ಈತನೊಂದಿಗೆ ಸಂಬಂಧಿ ಯೋಗೇಶ(27) ಕೂಡಾ ಟಿಟಿ ಚಾಲಕನಾಗಿ ದ್ದ. ಈ ಇಬ್ಬರು ಮತ್ತಷ್ಟು ಪ್ರಕರಣದಲ್ಲಿ ಭಾಗಿಯಾಗಿದ್ದರೇ ಎಂಬುದರ ಬಗ್ಗೆ ವಿಚಾರಣೆ ನಡೆಯುತ್ತಿದೆ.
ಕಂಪನಿ ವಿರುದ್ಧ ಕ್ರಮಕ್ಕೆ ಶಿಫಾರಸು: ಮಹಿಳೆಯ ಸುರಕ್ಷತೆಗೆ ಕ್ರಮ ಕೈಗೊಳ್ಳದಿರುವುದು, ಕಾರ್ಮಿಕ ಕಾಯ್ದೆ ಉಲ್ಲಂಘನೆ ಹಿನ್ನೆಲೆಯಲ್ಲಿ ಸಂತ್ರಸ್ತ ಯುವತಿ ನಕೆಲಸ ಮಾಡುತ್ತಿದ್ದ ಸಂಸ್ಥೆಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಇಲಾಖೆಗೆ ಶಿಫಾರಸು ಮಾಡುವುದಾಗಿ ನಗರ ಪೊಲೀಸ್ ಆಯುಕ್ತ ಎನ್. ಎಸ್.ಮೇಘರಿಖ್ ಹೇಳಿದರು. ರಾತ್ರಿ ಪಾಳಿ ಕರ್ತವ್ಯ ನಿರ್ವಹಿಸುವ ಮಹಿಳೆಯರ ಸಂಬಂಧ ಕಾರ್ಮಿಕ ಕಾಯ್ದೆಯಲ್ಲಿ ನಿಯಮಾವಳಿಗಳಿವೆ. ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಮಹಿಳಾ ಉದ್ಯೋಗಿಗಳಿಗೆ ಕಡ್ಡಾಯವಾಗಿ ಸಂಸ್ಥೆ ವಾಹನ ಸೌಕರ್ಯ ಕಲ್ಪಿಸಿಕೊಡಬೇಕು. ಈ ವಿಚಾರದಲ್ಲಿ ಸಂಸ್ಥೆಯ ಲೋಪ ಕಂಡು ಬಂದಿರುವುದರಿಂದ ಸಂಸ್ಥೆಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಇಲಾಖೆಗೆ ಪತ್ರ ಬರೆಯುವುದಾಗಿ ಮೇಘರಿಖ್ ತಿಳಿಸಿದರು.
ಸ್ನೇಹಿತೆಯಿಂದ ನಾಪತ್ತೆ ದೂರು: ಸಾಮಾನ್ಯವಾಗಿ ಕಚೇರಿ ಕೆಲಸ ಮುಗಿಸಿದ ನಂತರ ಅರ್ಧ ಗಂಟೆಯೊಳಗೆ ಯುವತಿ ಪಿಜಿಗೆ ತಲುಪಿ ಊಟ ಮಾಡುತ್ತಿದ್ದಳು. ಅಲ್ಲದೇ ಪಿಜಿ ತಲುಪಿದ ನಂತರ ಫೋನ್ ಅಥವಾ ಮೆಸೇಜ್ ಮಾಡಿ ಪಿಜಿ ತಲುಪಿರುವ ಬಗ್ಗೆ ಮಾಹಿತಿ ನೀಡುತ್ತಿದ್ದಳು. ಆದರೆ, ಶನಿವಾರ ಟಿಟಿ ವಾಹನದಲ್ಲಿ ತೆರಳಿದ ನಂತರ ಆಕೆಯಿಂದ ಯಾವುದೇ ಕರೆ ಅಥವಾ
ಸಂದೇಶ ಬಂದಿರಲಿಲ್ಲ. ಹೀಗಾಗಿ, ಅನುಮಾನಗೊಂಡ ಸ್ನೇಹಿತೆ ಫೋನ್ ಮಾಡಿದಾಗ ಸ್ವಿಚ್ ಆಫ್ ಆಗಿತ್ತು. ಹೋಗಬೇಡ ಎಂದು ಹೇಳಿದ್ದರೂ ಹೋಗಿದ್ದಲ್ಲದೇ ಮೊಬೈಲ್ ಫೋನ್ ಕೂಡಾ ಸ್ವಿಚ್ ಆಫ್  ಆಗಿದ್ದರಿಂದಆತಂಕಿತಳಾದ ಸ್ನೇಹಿತೆ ಮಡಿವಾಳ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಳು.
ಮಹಿಳಾ ಆಯೋಗದಿಂದ ಸ್ವಯಂ ಪ್ರೇರಿತ ದೂರು: ಬಿಪಿಒ ಉದ್ಯೋಗಿ ಮೇಲೆ ನಡೆದಿರುವ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ದಂತೆ ಕರ್ನಾಟಕ ರಾಜ್ಯ ಮಹಿಳಾ ಆಯೋಗವು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿರುವ ಆಯೋಗದ ಅಧ್ಯಕ್ಷೆ ಮಂಜುಳಾ ಮಾನಸ, ಈ ಪ್ರಕರಣದ ಬಗ್ಗೆ ಸೂಕ್ತಪರಿಶೀಲನೆ ನಡೆಸಿ, ಇದಕ್ಕೆ ಕಾರಣಕರ್ತರಾದವರನ್ನು ಕೂಡಲೇ ಪತ್ತೆ ಹಚ್ಚಿ, ಸಂಬಂಧಿಸಿದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಬಲವಾದ
ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿ, ತಾವು ಕೈಗೊಂಡ ಕ್ರಮದ ವರದಿಯನ್ನು ಆಯೋಗಕ್ಕೂ ಕಳುಹಿಸಿಕೊಡುವಂತೆ ತಿಳಿಸಿದ್ದಾರೆ. ಯುವತಿಯ ಮೇಲೆ ನಡೆದಿರುವ ಈ ಅಮಾನುಷ ಕೃತ್ಯವ
ನ್ನು ಮಹಿಳಾ ಆಯೋಗವು ತೀವ್ರವಾಗಿ ಖಂಡಿಸುತ್ತದೆ. ಅಲ್ಲದೆ, ಇದನ್ನು ಗಂಭೀರವೆಂದು ಪರಿಗಣಿಸಿದೆ ಎಂದೂಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಬಿಇ ಓದಿ ಬಿಪಿಒ ಸೇರಿದ್ದ ಯುವತಿ
ಮಧ್ಯಪ್ರದೇಶ ಮೂಲದ ಯುವತಿ ಬ್ಯಾಚುಲರ್ ಆಫ್ ಎಂಜಿನಿಯರಿಂಗ್ ವ್ಯಾಸಾಂಗ ಮಾಡಿದ್ದಳು. ಕಳೆದ ಮೂರು ತಿಂಗಳಿಂದ ಕೆಲಸಕ್ಕಾಗಿ ಅಲೆಯುತ್ತಿದ್ದಳು. ಓದಿಗೆ ತಕ್ಕ ಕೆಲಸ ಸಿಗದಿದ್ದಾಗ ಪಿಜಿ ಶುಲ್ಕ ಹಾಗೂ ನಗರದಲ್ಲಿ ಜೀವನ ನಡೆಸಲು ಕಷ್ಟವಾಗುಿತ್ತದೆ ಎಂದು ಕೆಲ ದಿನಗಳಿಂದ ಬೊಮ್ಮನ ಹಳ್ಳಿಯಲ್ಲಿರುವ ಬಿಪಿಒ ಸಂಸ್ಥೆಗೆ ಕೆಲಸಕ್ಕೆ ಸೇರಿದ್ದಳು. ಆದರೆ ಸಿಲಿಕಾನ್ ಸಿಟಿಯಲ್ಲಿ ಕೆಲಸ ಮಾಡಬೇಕು ಎಂಬ ಕನಸು ಕೆಲವೇ ದಿನಗಳಲ್ಲಿ ನುಚ್ಚು ನೂರಾಗಿದೆ. ಅತ್ಯಾಚಾರ ಘಟನೆಯಿಂದ ಮಾನಸಿಕವಾಗಿ ಘಾಸಿಗೊಳಗಾಗಿಪುವ  ಯುವತಿ ಪಾಲಕರೊಂದಗೆ ವಾಪಸ್ ತನ್ನ ಊರು ಮಧ್ಯಪ್ರವೇಶಕ್ಕೆಹೊರಟು ಹೋಗಿದ್ದಾಳೆ.
ಪಾಗಲ್ ಸ್ಟಿಕ್ಕಪ್ ನೀಡಿತು ದುಷ್ಕರ್ಮಿಗಳ ಸುಳಿವು
ಯುವತಿ ಹೇಳಿದ ವಾಹನ ನೋಂದಣಿ ಸಂಖ್ಯೆ ಆಧಾರದ ಮೇಲೆ ಪೊಲೀಸರು ಆರೋಪಿಗಳನ್ನು ಪತ್ತೆ ಮಾಡಿದ್ದರು. ವಾಹನದ ಮೇಲೆ ಪಾಗಲ್ ಎಂದು ಬರೆಯಲಾಗಿದೆ. ಅಲ್ಲೊಂದು ಕಾರ್ಟೂನ್ ಇದೆ ಎಂದು ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದಳು. ಅದೇ ರೀತಿ ವಾಹನ ಒಂದು ಭಾಗದ ಗಾಜಿನ ಮೇಲೆ  ಹುಚ್ಚ ಎಂದು ಬರೆಯಲಾಗಿದ್ದು ಅಲ್ಲೂ ಕಾಡ ಕಾರ್ಟೂನ್  ಇದೆ. ದುಷ್ಕರ್ಮಿಗಳಿಬ್ಬರು ವಾಹನವ್ವು ಚಲಾಯಿಸಿಕೊಂಡು ಹೋಗುತ್ತಿದ್ದ ವೇಳೆ ಹಾಗೂ ಕೆಳಗಿಳಿಸಿದಾಗ ಆ ಗುರುತುಗಳನ್ನು ಆಕೆ ಪತ್ತೆ ಮಾಡಿದ್ದಾಳೆ. ವಾಹನ ವಶಪಡಿಸಿಕೊಂಡ ಪೊಲೀಸರು ಅದನ್ನು ಮಡಿವಾಳದಲ್ಲಿರುವ ವಿಧಿ ವಿಜ್ಞಾನ ಪ್ರಯೋಗಾಲಯ ಆವರಣಕ್ಕೆ ತಂದು ನಿಲ್ಲಿಸಿದ್ದಾರೆ. 
ಇದು ಸದಾ ನೆನಪಿನಲ್ಲಿರಲಿ
ಅತ್ಯಾಚಾರ ಮಾನಭಂಗದಂಥ  ಪ್ರಕರಣಗಳು ನಡೆದಾಗ ಮಹಿಳೆಯರ ಸುರಕ್ಷತೆ ವಿಚಾರ ಆಗಾಗ ಚರ್ಚೆಯಾಗುತ್ತಲೇ ಇರುತ್ತದೆ. ಆದರೆ ಮುನ್ನೆಚ್ಚರಿಕೆ ಇದ್ದರೆ ಇಂಥ ಪ್ರಕರಣಗಳನ್ನು ತಪ್ಪಿಸಲು ಸಾಧ್ಯವಿದೆ. ಅಂಥ ಮಾರ್ಗಗಳೇನು? ಇಲ್ಲಿದೆ ಕೆಲವೊಂದು ಟಿಪ್ಸ್
ಕಚೇರಿಯಲ್ಲಿ ಅಸಭ್ಯ ವರ್ತನೆ ತೋರಿದರೆ ತಕ್ಷಣ ಲಿಖಿತ ರೂಪದಲ್ಲಿ ಸಂಬಂಧಿಸಿದವರ ದೂರು ನೀಡಿ
ನಿಮ್ಮ ಆತ್ಮೀಯರ ಫೋನ್ ನಂಬರುಗಳನ್ನು ಮೊಬೈಲ್ನ ಸ್ಪೀಡ್ ಡಯಲ್ ನಲ್ಲಿಟ್ಟಿರರಿ
ಫೋನ್ ಸದಾ ಜಾರ್ಜ್ ಆಗಿರಲಿ, ಕರೆನ್ಸಿ ಇದ್ದೇ ಇರಲಿ
ಸೇಫ್ಟಿ ಆ್ಯಪ್  ಗಳನ್ನು ಡೌನ್ ಲೋಡ್ ಮಾಡಿಕೊಂಡಿರಿ 
ನೀವು ಯಾವ ಕ್ಯಾ ಬ್  ನಲ್ಲಿ  ಹೊರಡುತ್ತಿದ್ದೀರಿ ಎಂಬುದನ್ನು ನಿಮಗೆ ಗೊತ್ತಿರುವ ಯಾರಿಗಾದರೂ ಮೊದಲೇ ತಿಳಿಸಿಬಿಡಿ
ಸಂಕಷ್ಟ ಸಮಯದಲ್ಲಿ ಏನು ಮಾಡಬೇಕು
ಆಕ್ರಮಣಕಾರವ ಕಣ್ಣಿನ ಮೇವೆ ದಾಳಿ ನಡೆಸುವ  ಮೂಲಕ ಪರಾಗಬಹುದು
ಪೆಪ್ಪರ್ ಸ್ಪ್ರೇ , ವಿದ್ಯುಕ್ ಗನ್ ಪರಿಣಾಮಕಾರಿ
ಒಣಮೆಣಸಿನಕಾಯಿ ಪುಡಿ ಕೂಡಾ ಉಪಯುಕ್ತ
ಆಕ್ರಮಣಾಕಾರನ ಕಣ್ಣಿಗೆ ಪುಡಿ ಎರಚಿ ಪರಾರಿಯಾಗಿ
ಮೊಬೈಲ್ನ ಸ್ಪೀಡ್  ಡಯಲ್ ಒತ್ತಿ
ಜೋರಾಗಿ ಕಿರುಚಿಕೊಳ್ಳುವುದೂ ಅಲರಾಂ ಇದ್ದಂತೆ
ಬಿಜೆಪಿ ಪ್ರತಿಭಟನೆ ಇಂದು
`ಬೆಂಗಳೂರು ನಿರ್ಭಯ' ಪ್ರಕರಣ ಖಂಡಿಸಿ ರಾಜ್ಯ ಬಿಜೆಪಿಯು ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲಿದೆ. ಮಹಿಳೆಯರಿಗೆ ಸುರಕ್ಷತೆ ನೀಡುವಲ್ಲಿ ಸರ್ಕಾರ ವಿಫಲವಾಗಿದೆ ಜತೆಗೆ ಲೈಂಗಿಕ ದೌರ್ಜನ್ಯ ಖಂಡಿಸಿ ಪ್ರತಿಭಟನೆ ನಡೆಸಲಾಗುತ್ತಿದೆ ಎಂದುಬಿಜೆಪಿ ತಿಳಿಸಿದೆ.
ಜನರೇ ಜಾಗೃತಿ ವಹಿಸಿ
-ಬೆಂಗಳೂರು ನಗರದಲ್ಲಿ ಆದಷ್ಟು ಮಟ್ಟಿಗೆ ಬಿಎಂಟಿಸಿ ಅಥವಾ ಸಾರ್ವಜನಿಕ ಸಾರಿಗೆಗಳನ್ನು ನೆಚ್ಚಿಕೊಂಡರೆ ಸೇಫ್ 
-ಅಪರಿಚಿತ ವಾಹನಗಳನ್ನು ಹತ್ತಲೇಬೇಡಿ.
ಹತ್ತುವುದಿದ್ದರೂ ಅದರ ಸಂಖ್ಯೆಯನ್ನು ನೋಟ್ ಮಾಡಿಕೊಂಡು ಜಾಗೃತೆ ವಹಿಸುವುದು ಸೂಕ್ತ.
-ಅಪರಿಚಿತ ವಾಹನ ಏರಿದಾಗ ಆದಷ್ಟು ಪರಿಚಯಸ್ಥರಿಗೆ ದೂರವಾಣಿ ಕರೆ ಮಾಡಿನೀವೆಲ್ಲಿದ್ದೀರಿ ಎಂಬುದರ ಬಗ್ಗೆ ತಿಳಿಸಿ.
ಇದು ಸದಾ ನೆನಪಲ್ಲಿರಲಿ
-ಕ್ಯಾಬ್‍ನ ಚಾಲಕ ಯಾರೆಂಬುದನ್ನು ಕಂಪನಿಯ ಎಚ್ ಆರ್ ವಿಭಾಗ ಮುಂಚೆಯೇ ದೃಢಪಡಿಸಬೇಕು.
-ಒಂದು ವೇಳೆ ಕ್ಯಾಬ್ ಚಾಲಕ ಮುನ್ಸೂಚನೆ ಇಲ್ಲದೇ ಬದಲಾಗಿದ್ದರೆ ಎಚ್‍ಆರ್/ಸೆಕ್ಯುರಿಟಿ ಗಮನಕ್ಕೆ ತನ್ನಿ.
-ಪುರುಷ ಸಹೋದ್ಯೋಗಿ ಜೊತೆಗಿದ್ದರೆ, ಪಾಳಿ ಯಾರದೇ ಇರಲಿ, ಮೊದಲು ನಿಮ್ಮನ್ನೇ ಡ್ರಾಪ್ ಮಾಡುವುದು ಕಡ್ಡಾಯ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com