ಬಂದೂಕನ್ನೇ ಬಾಯಿ ಮಾಡಿಕೊಂಡವರ ಕೃತ್ಯ: ಬರಗೂರು

ಬಾಯಿಯಲ್ಲಿ ಬಂದೂಕು ಇಟ್ಟುಕೊಂಡವರು ಕವಿಗಳ ಭಾವನೆಗಳನ್ನು ಸುಡಲು ಪ್ರಯತ್ನಿಸಿದರೆ, ಬಂದೂಕವನ್ನೇ ಬಾಯಿಯಾಗಿ ಮಾಡಿಕೊಂಡವರು...
ಬರಗೂರು ರಾಮಚಂದ್ರಪ್ಪ
ಬರಗೂರು ರಾಮಚಂದ್ರಪ್ಪ

ಬೆಂಗಳೂರು: ಬಾಯಿಯಲ್ಲಿ ಬಂದೂಕು ಇಟ್ಟುಕೊಂಡವರು ಕವಿಗಳ ಭಾವನೆಗಳನ್ನು ಸುಡಲು ಪ್ರಯತ್ನಿಸಿದರೆ, ಬಂದೂಕವನ್ನೇ ಬಾಯಿಯಾಗಿ ಮಾಡಿಕೊಂಡವರು ಕೆಲ ವದಂತಿಗಳನ್ನು ಕೇಳಿ ಸಾಹಿತಿಗಳ ಹತ್ಯೆ ಮಾಡುತ್ತಿರುವುದು ದುರಂತ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಆತಂಕ ವ್ಯಕ್ತಪಡಿಸಿದರು.

ಎಂ.ಎಂ. ಕಲಬುರ್ಗಿ ಅವರನ್ನು ಹತ್ಯೆ ಮಾಡಿದವರು ಇಂತಹ ಮನಸ್ಥಿತಿಯನ್ನು ಹೊಂದಿದವರಾಗಿದ್ದಾರೆ. ಕೆಲ ರಾಜಕೀಯ ಮುಖಂಡರು ಹಿತಿಗಳ ಹತ್ಯೆಯನ್ನು ಸಮರ್ಥಿಸಿಕೊಳ್ಳುತ್ತಿರುವುದು ನೋಡಿದರೆ ಬಹಳ ಬೇಸರವಾಗುತ್ತದೆ ಎಂದು ಹೇಳಿದರು.

ಕನ್ನಡ ಜನಶಕ್ತಿ ಕೇಂದ್ರ, ಐಸಿರಿ ಪ್ರಕಾಶನ ಹೊರತಂದಿರುವ ಪಿ. ಮಲ್ಲಿಕಾರ್ಜುನಪ್ಪ ಅವರು ರಚಿಸಿರುವ `ಕುಸುಮಮಾಲೆ' ಕವನ ಸಂಕಲನವನ್ನು ಬುಧವಾರ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು. ಕಸಾಪ ಮಾಜಿ ಅಧ್ಯಕ್ಷ ಡಾ. ಆರ್. ಕೆ. ನಲ್ಲೂರು ಪ್ರಸಾದ್, ಸಾಹಿತಿ ಡಾ. ಬಸವರಾಜ ಕಲ್ಗುಡಿ, ಭಾಗವಹಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com