ಇದು ಗ್ಯಾಂಗ್‍ರೇಪ್ ಅಲ್ಲ ಎಂದ ಗೃಹ ಸಚಿವ

ಸಾಮೂಹಿಕ ಅತ್ಯಾಚಾರಕ್ಕೆ ಹೊಸ ವ್ಯಾಖ್ಯಾನ ಬರೆದಿರುವ ಅವರು, ಗ್ಯಾಂಗ್‍ರೇಪ್ ಎಂದು ಕರೆಯಬೇಕಾದರೆ 3 ಅಥವಾ 4ಕ್ಕಿಂತ ಹೆಚ್ಚು ಮಂದಿ ಇರಬೇಕು...
ಕೆ.ಜೆ. ಜಾರ್ಜ್
ಕೆ.ಜೆ. ಜಾರ್ಜ್
Updated on
ಬೆಂಗಳೂರು: ಮಧ್ಯಪ್ರದೇಶದ ಯುವತಿ ಮೇಲಿನ ಸಾಮೂಹಿಕ ಅತ್ಯಾಚಾರ ಸಂಬಂಧ ಇಡೀ ನಗರದ ಜನತೆ ಆತಂಕದಿಂದ ಕುಳಿತಿದ್ದರೆ, ರಾಜ್ಯದ ಗೃಹ ಸಚಿವ ಕೆ.ಜೆ. ಜಾರ್ಜ್
ಸಂಖ್ಯಾಧಾರಿತವಾಗಿ ಗ್ಯಾಂಗ್‍ರೇಪ್ ಅನ್ನು ವ್ಯಾಖ್ಯಾನಿಸಿದ್ದಾರೆ. ಇಬ್ಬರು ರೇಪ್ ಮಾಡಿದ್ರೆ ಅದು ಗ್ಯಾಂಗ್‍ರೇಪ್ ಹೇಗೆ ಆಗುತ್ತೆ, ಕಡೇ ಪಕ್ಷ 3 ರಿಂದ 4 ಮಂದಿ ರೇಪ್ ಮಾಡಿ ರಬೇಕಲ್ಲವೇ ಎಂದು ಪ್ರಶ್ನಿಸಿದ್ದಾರೆ. ಘಟನೆ ಸಂಬಂಧ ಮಾಧ್ಯಮಗಳು ಜಾರ್ಜ್ ಅವರಲ್ಲಿ ಪ್ರತಿಕ್ರಿಯೆ ಕೇಳಿದಾಗ ಈ ಉತ್ತರ ಬಂದಿದೆ. ಅವರ ಪ್ರಕಾರ ಮಡಿವಾಳದ ಪ್ರಕರಣ ಗ್ಯಾಂಗ್‍ರೇಪ್ ಅಲ್ಲವೇ ಅಲ್ಲ. ಸಾಮೂಹಿಕ ಅತ್ಯಾಚಾರಕ್ಕೆ ಹೊಸ ವ್ಯಾಖ್ಯಾನ ಬರೆದಿರುವ ಅವರು, ಗ್ಯಾಂಗ್‍ರೇಪ್ ಎಂದು ಕರೆಯಬೇಕಾದರೆ 3 ಅಥವಾ 4ಕ್ಕಿಂತ ಹೆಚ್ಚು ಮಂದಿ ಇರಬೇಕು ಎಂದಿದ್ದಾರೆ. ಹೀಗಾಗಿ ಈ ಪ್ರಕರಣವನ್ನು ಹೇಗೆ ಗ್ಯಾಂಗ್‍ರೇಪ್ ಎಂದು ಕರೆಯುತ್ತೀರಿ ಎಂದು ಮಾಧ್ಯಮಗಳಿಗೆ ಪ್ರಶ್ನೆ ಮಾಡಿದ್ದಾರೆ.
ಸಿಎಂ ಎಚ್ಚರಿಕೆ: ಬಿಪಿಒ ಉದ್ಯೋಗಿ ಮೇಲಿನ ಅತ್ಯಾಚಾರ ಹಾಗೂ ನಗರದಲ್ಲಿ ಹೆಚ್ಚುತ್ತಿರುವ ಸರಗಳ್ಳತನ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಸಿಎಂ ಸಿದ್ದರಾಮಯ್ಯ
ಬುಧವಾರ ಅಧಿಕಾರಿಗಳ ಜತೆಗೆ ಸಭೆನಡೆಸಿದ್ದಾರೆ.ಕಾನೂನು ಸುವ್ಯವಸ್ಥೆಗೆ ಭಂಗವಾ ದರೆ ಎಲ್ಲಿ ಘಟನೆ ಸಂಭವಿಸುತ್ತದೆಯೋ ಆಯಾ ಭಾಗದ ಡಿಸಿಪಿಗಳನ್ನೇ ಹೊಣೆ
ಮಾಡಲಾಗುವುದು. ಇವರ ಸಸ್ಪೆಂಡ್ ಮಾಡಲೂ ಹಿಂಜರಿಯುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. 
ಹಿರಿಯ ಅಧಿಕಾರಿಗಳೇ ಹೊಣೆ: ಅತ್ಯಾಚಾರ ಪ್ರಕರಣ ಸಂಬಂಧ ಹಿರಿಯ ಅಧಿಕಾರಿಗಳಿಂದ ಮಾಹಿತಿ ಪಡೆದರು. ಸರಗಳ್ಳತನ ಪ್ರಕರಣ ಹೆಚ್ಚುತ್ತಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದರು.ಇಂಥ ಪ್ರಕರಣಗಳ ನ್ನು ನಿಯಂತ್ರಿಸದಿದ್ದರೆ ಕೆಳ ಹಂತದ ಅಧಿಕಾರಿಗಳ ಬದಲಿಗೆ ಡಿಸಿಪಿ ದರ್ಜೆ ಅಧಿಕಾರಿಗಳನ್ನು ಸೇವೆಯಿಂದ ಸಸ್ಪೆಂಡ್ ಮಾಡಲಾಗು ವುದು ಎಂದರು. ಮಹಿಳಾ ಉದ್ಯೋಗಿಗಳಿಗೆ ರಕ್ಷಣೆ ಒದಗಿಸುವ ವಿಚಾರದಲ್ಲಿ ಆಯಾ ಕಂಪನಿ ಮಾಲೀಕರು ನಿಗಾ ವಹಿಸಬೇಕು. ಈ ಸಂಬಂಧ ಕಾರ್ಮಿಕ ಇಲಾಖೆ ಹೊರಡಿಸಿರುವ ಮಾರ್ಗದರ್ಶಿ ಸೂತ್ರ ಪಾಲನೆಯಾಗುತ್ತಿ ದೆಯೇ ಎಂಬ ಬಗ್ಗೆ ಪರಿಶೀಲನೆ 
ನಡೆಸಬೇಕು. ಬಿಪಿಓ ಉದ್ಯೋಗಿ ಅತ್ಯಾಚಾರ ಪ್ರಕರಣದಲ್ಲಿ ಸಂಸ್ಥೆ ಮಾಲೀಕರು ನಿರ್ಲಕ್ಷ್ಯ ತೋರಿದ್ದರೆ ಅವರ ವಿರುದ್ಧ ಕ್ರಮ ತೆಗೆದು ಕೊಳ್ಳಬೇಕು. ತಡರಾತ್ರಿ ನಗರದಲ್ಲಿ ಸಂಚರಿಸುವ ವಾಹನಗಳ ಮೇಲೆ ವಿಶೇಷ ನಿಗಾ ಇಡಬೇಕು. ಆಗಾಗ ವಿಶೇಷ ಕಾರ್ಯಾಚರಣೆ ನಡೆಸಬೇಕು. ಹೊಯ್ಸಳ ಪೊಲೀಸರ ಗಸ್ತು ಇನ್ನಷ್ಟು ಪರಿಣಾಮಕಾರಿಯಾಗಿ ಇರಬೇಕು ಎಂದು ನಿರ್ದೇಶನ ನೀಡಿದ್ದಾರೆ. ಅಲ್ಲದೆ ಪೊಲೀಸರ ಅನುಕೂಲಕ್ಕಾಗಿ 1000 ಬೈಕ್‍ಗಳನ್ನು ನೀಡಲಾಗುವು ದು. ಇವುಗಳಿಗೆ ನೀಡುವ ಇಂಧನಪ್ರಮಾಣವನ್ನು ಹೆಚ್ಚಿಸಲಾಗುತ್ತದೆ
ಎಂದು ತಿಳಿಸಿದ್ದಾರೆ.
1,000 ಬೈಕ್
ನಗರದಲ್ಲಿ ಅಪರಾಧನ ಪ್ರಕರಣಗಳನ್ನು ತಡೆಯಲು ಪೊಲೀಸರಿಗೆ ಈ ಪ್ರಮಾಣದ ಬೈಕ್ ಗಳನ್ನು ಒದಗಿಸಲು ತೀರ್ಮಾನಿಸಲಾಗಿದೆ ಗಸ್ತು ವ್ಯವಸ್ಥೆ ಬಲಪಡಿಸಲು ಈ ಕ್ರಮ. 
ಮಹಿಳೆ ರಕ್ಷಣೆಗೆ ಆ್ಯಪ್ 
ಮಹಿಳೆಯರ ರಕ್ಷಣೆಗಾಗಿ ವಿಶೇಷ ಆ್ಯಪ್ ಸಿದ್ಧಪಡಿಸಲಾಗಿದೆ. ಅಪಾಯದ ಮುನ್ಸೂಚನೆ ದೊರೆತ ಕೂಡಲೇ ಮಹಿಳೆಯರು ಆ ಆ್ಯಪ್  ನಲ್ಲಿರುವ ಬಟನ್ ಒತ್ತಿದರೆ ಹೊಯ್ಸಳ ವಾಹನ ಅಥವಾ ಕಂಟ್ರೋಲ್ ರೂಂಗೆ ಸಂಪರ್ಕಿ ಸಲು ಸಾಧ್ಯವಾಗುತ್ತದೆ ಎಂದು ಅಧಿಕಾರಿಗಳು ವಿವರಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com