ಬೆಂಗಳೂರು: ಒತ್ತುವರಿ ತೆರವು ಮುಂದುವರಿಸಿರುವ ಜಿಲ್ಲಾಡಳಿತ ಶುಕ್ರವಾರ ಅಂದಾಜು ರು.104.90 ಕೋಟಿ ಮೌಲ್ಯದ 78.33 ಎಕರೆ ಭೂಮಿ ವಶಪಡಿಸಿಕೊಂಡಿದೆ. ದಕ್ಷಿಣ ತಾಲೂಕು, ಉತ್ತರಹಳ್ಳಿ ಹೋಬಳಿ,ಯಲಚೇನಹಳ್ಳಿಯ ಸ.ನಂ.45 ರಲ್ಲಿ ರು. 15 ಕೋಟಿ ಮೌಲ್ಯದ 1.7 ಎಕರೆಯನ್ನು ತಹಸೀಲ್ದಾರ್ ಡಾ.ಬಿ.ಆರ್.ದಯಾನಂದ್ ತಂಡ ತೆರವುಗೊಳಿಸಿತು. ಉತ್ತರ (ಅಪರ) ತಾಲೂಕು, ಜಾಲ ಹೋಬಳಿ, ಎಂ.ಹೊಸಹಳ್ಳಿಯ ಸ.ನಂ.116ರ 4.5 ಎಕರೆ, ಮಹದೇವ ಕೊಡಿಗೇಹಳ್ಳಿಯ ಸ.ನಂ.194 ರ 6.24 ಎಕರೆ, ಬೇಗೂರು ಗ್ರಾಮದ ಸ.ನಂ.30 ರಲ್ಲಿ 9.5 ಎಕರೆ, ಹೊಸಹಳ್ಳಿಯ ಸ.ನಂ.54 ರಲ್ಲಿ 8.1 ಎಕರೆ ಜಾಗದ ಒತ್ತುವರಿಯನ್ನು ತಹಸೀಲ್ದಾರ್ ಬಾಳಪ್ಪ ಹಂದಿಗುಂದ ನೇತೃತ್ವದಲ್ಲಿ ತೆರವುಗೊಳಿಸಲಾಯಿತು. ಈ ಜಾಗ ಅಂದಾಜು ರು.27.90 ಕೋಟಿ ಮೌಲ್ಯ ಹೊಂದಿದೆ. ಪೂರ್ವ ತಾಲೂಕು, ಬಿದರಹಳ್ಳಿ ಹೋಬಳಿ, ಹಂಚರಹಳ್ಳಿಯ ಸ.ನಂ.20 ರಲ್ಲಿ 2.5 ಎಕರೆ, ರಘುಮೇನಹಳ್ಳಿಯ ಸ.ನಂ.13 ರಲ್ಲಿ 1.11 ಎಕರೆ, ಬೊಮ್ಮೇನಹಳ್ಳಿಯ ಸ.ನಂ.55 ರಲ್ಲಿ 9.25 ಎಕರೆ, ಬಿದರಹಳ್ಳಿ ಹೋಬಳಿ ತಿರುಮೇನಹಳ್ಳಿಯ ಸ.ನಂ.22 ರಲ್ಲಿ 14.5 ಎಕರೆ, ಸ.ನಂ.8ರಲ್ಲಿ 1 ಎಕರೆ, ಚಿಕ್ಕಬನಹಳ್ಳಿಯ ಸ.ನಂ.11 ರಲ್ಲಿ 12 ಎಕರೆ, ದೊಡ್ಡನೆಕ್ಕುಂದಿಯ ಸ.ನಂ.15