ಭೂ ಒತ್ತುವರಿಯಲ್ಲೂ ಭಾಸ್ಕರರಾವ್: ಹಿರೇಮಠ್ ಆರೋಪ

ಲೋಕಾಯುಕ್ತ ನ್ಯಾ.ವೈ. ಭಾಸ್ಕರರಾವ್ ಕೇವಲ ಸಂಸ್ಥೆಯ ಭ್ರಷ್ಟಾಚಾರ ದಲ್ಲಿ ಮಾತ್ರ ಭಾಗಿಯಲ್ಲ... ಅಕ್ರಮ ಭೂ ಒತ್ತುವರಿ...
ನ್ಯಾ. ವೈ ಭಾಸ್ಕರ್ ರಾವ್-ಎಸ್ ಆರ್ ಹಿರೇಮಠ್
ನ್ಯಾ. ವೈ ಭಾಸ್ಕರ್ ರಾವ್-ಎಸ್ ಆರ್ ಹಿರೇಮಠ್
ಹುಬ್ಬಳ್ಳಿ: ``ಲೋಕಾಯುಕ್ತ ನ್ಯಾ.ವೈ. ಭಾಸ್ಕರರಾವ್ ಕೇವಲ ಸಂಸ್ಥೆಯ ಭ್ರಷ್ಟಾಚಾರ ದಲ್ಲಿ ಮಾತ್ರ ಭಾಗಿಯಲ್ಲ... ಅಕ್ರಮ ಭೂ ಒತ್ತುವರಿಯಲ್ಲಿಯೂ ತಮ್ಮ ಕಬಂದಬಾಹು ಚಾಚಿದ್ದಾರೆ,' 'ಎಂದು ಸಮಾಜ ಪರಿವರ್ತನಾ ಸಮುದಾಯದ(ಸಪಸ) ಮುಖ್ಯಸ್ಥ ಎಸ್.ಆರ್. ಹಿರೇಮಠ ಆರೋಪಿಸಿದ್ದಾರೆ. 
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ``ಭಾಸ್ಕರರಾವ್ ಲೋಕಾಯುಕ್ತರಾಗಲು ಮದ್ಯದ ದೊರೆ ಆದಿಕೇಶವಲು ಎಂಬುವವರ ನೆರವು ಪಡೆದಿದ್ದಾರೆ. ಭಾಸ್ಕರ್ ರಾವ್ ಅವರ ಅಕ್ರಮ ಆಸ್ತಿ ಗಳಿಕೆ ಕುರಿತು ಬೆಂಗಳೂರಿನ ವಕೀಲರ ಸಂಘ ಈಗಾಗಲೇ ರಾಜ್ಯಪಾಲರಿಗೆ ಮಾಹಿತಿ ಒದಗಿಸಿದೆ ಎಂದು ಅವರು ಹೇಳಿದರು. 
``ಕೆ.ಎಲ್. ಮಂಜುನಾಥ ಅವರ ಕಾನೂನು ನೋಟಿಸ್‍ಗೆ ಸಪಸ ಉತ್ತರ ನೀಡಿದೆ. ಸುಪ್ರೀಂ ಕೋರ್ಟ್‍ಗೆ ಸಲ್ಲಿಸಿದ 192 ಪುಟಗಳ ಪ್ರಶ್ನೆಗೆ ನೇರ ಉತ್ತರ ನೀಡುವಂತೆ ಕೆ.ಎಲ್. ಮಂಜುನಾಥ್ ಅವರನ್ನು ಕೋರಲಾಗಿದೆ ಹಾಗೂ ಅಕ್ರಮ ಸಂಪಾದನೆ ಮಾಡಿರುವ ಆಸ್ತಿಯನ್ನು ಸ್ವಯಂ ಪ್ರೇರಿತರಾಗಿ ಮರಳಿಸುವಂತೆ ತಿಳಿಸಲಾಗಿದೆ. ಅವರ ವಿರುದ್ಧ ಸೂಕ್ತ ತನಿಖೆ ಮಾಡುವಂತೆ ಎಸ್ಐಟಿಗೆ ಮನವಿ ಮಾಡಲಾಗಿದೆ,'' ಎಂದು ತಿಳಿಸಿದರು.
ಬೆಂಗಳೂರಿನ ಪೀಣ್ಯ ಪ್ಲಾಂಟೇಶನ್ ಗ್ರಾಮದ ಸರ್ವೆ ನಂ.1ರಲ್ಲಿ ಹಾಗೂ ಜರಕಬಂದ ಕವಲ್ ನಲ್ಲಿ 500 ಎಕರೆಗೂ ಹೆಚ್ಚು ಅರಣ್ಯ ಭೂಮಿಯನ್ನು ಪ್ರೆಸ್ಟೀಜ್ ಕಂಪನಿ ಎಚ್ ಎಂಟಿ ಕಂಪನಿಗೆ ನೀಡಿದ್ದು, ಈ ಭೂಮಿಯನ್ನು ಸದ್ಯ ಭೂ ಮಾಫಿಯಾ ಒತ್ತುವರಿ ಮಾಡಿದೆ. ಜಾಯ್ ಐಸ್ ಕ್ರೀಮ್ ಗಾಗಿ ನೀಡಿರುವ ಭೂಮಿಯನ್ನು ಪ್ರೆಸ್ಟೀಜ್ ಕಂಪನಿ ಕೂಡ ಕಾನೂನು ಬಾಹಿರವಾಗಿ ತೆಗೆದುಕೊಂಡಿದೆ. ಈ ಕುರಿತು ಸದ್ಯ ಉಚ್ಚ ನ್ಯಾಯಾಲಯದಲ್ಲಿ ವಿಚಾರಣೆ ನಡೆ ಯುತ್ತಿದೆ. ಜಾಯ್ ಐಸ್‍ಕ್ರೀಮ್ ಕಂಪನಿ ಅಲ್ಲಿ ತನ್ನ ಕಂಪನಿ ಸ್ಥಾಪಿಸುವ ಬದಲು ಜಾಗವನ್ನು ಪ್ರೆಸ್ಟೀಜ್ ಕಂಪನಿಗೆ ಮಾರಾಟ ಮಾಡಿದೆ ಎಂದು ಹಿರೇಮಠ ವಿವರಿಸಿದರು. 
ಜುಲೈ 27ರಂದು ನ್ಯಾಯಾಲಯ ನೀಡಿದ ಆದೇಶದಂತೆ, ಪ್ರೆಸ್ಟೀಜ್ ಕಂಪನಿಗೆ ಉಚ್ಛನ್ಯಾಯಾಲಯದಲ್ಲಿ ಆದೇಶವನ್ನು ಪ್ರಶ್ನಿಸುವ ಅಧಿಕಾರವಿಲ್ಲ. ಆದರೆ, ಆದೇಶ ಎತ್ತಿ ಹಿಡಿಯುವ ಬದಲಿಗೆ ಪ್ರಶ್ನೆ ಮಾಡಲು ಹೈಕೋರ್ಟ್ ಅವಕಾಶ ನೀಡಿರುವು ದು ಸರಿಯಲ್ಲ ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com