ವಾಯುಮಾಲಿನ್ಯ ತಡೆಗಟ್ಟುವುದು ಹಾಗೂ ಪರಿಸರ ಸ್ನೇಹಿ ವಾಹನದ ಬಗ್ಗೆ ಜಾಗೃತಿ ಮೂಡಿಸಲು ಐ ಸೈಕಲ್ ಸಂಸ್ಥೆ ಜಯನಗರದಲ್ಲಿ ಭಾನುವಾರ `ಸೈಕಲ್ ದಿನ' ಆಚರಿಸಿತು
ಜಿಲ್ಲಾ ಸುದ್ದಿ
ಪರಿಸರ ಜಾಗತಿಗೆ ಸೈಕಲ್ ಸವಾರಿ
ವಾಯುಮಾಲಿನ್ಯ ತಡೆಗಟ್ಟುವುದು ಹಾಗೂ ಪರಿಸರ ಸ್ನೇಹಿ ವಾಹನದ ಬಗ್ಗೆ ಜಾಗೃತಿ ಮೂಡಿಸಲು ಐ ಸೈಕಲ್ ಸಂಸ್ಥೆ ಜಯನಗರದಲ್ಲಿ...
ಬೆಂಗಳೂರು: ವಾಯುಮಾಲಿನ್ಯ ತಡೆಗಟ್ಟುವುದು ಹಾಗೂ ಪರಿಸರ ಸ್ನೇಹಿ ವಾಹನದ ಬಗ್ಗೆ ಜಾಗೃತಿ ಮೂಡಿಸಲು ಐ ಸೈಕಲ್ ಸಂಸ್ಥೆ ಜಯನಗರದಲ್ಲಿ ಭಾನುವಾರ `ಸೈಕಲ್ ದಿನ' ಆಚರಿಸಿತು. ನಗರದ ಜಯನಗರದಲ್ಲಿರುವ ಚಾಮುಂಡೇಶ್ವರಿ ಕಬಡ್ಡಿ ಮೈದಾನ ದಿಂದ ಆರಂಭವಾದ ಸೈಕಲ್ ರ್ಯಾಲಿ, 5 ಕಿ.ಮೀ. ದೂರ ಕ್ರಮಿಸಿ ಮತ್ತೆ ಅದೇ ಸ್ಥಳದಲ್ಲಿ ಮುಕ್ತಾಯಗೊಂಡಿತು.
ಜಯನಗರದ ಶಾಸಕ ವಿಜಯಕುಮಾರ್ ರ್ಯಾಲಿಗೆ ಚಾಲನೆ ನೀಡಿದರು. ನಗರದ 200 ಸೈಕ್ಲಿಸ್ಟ್ ಗಳು ಸೈಕಲ್ ದಿನದಲ್ಲಿ ಭಾಗವಹಿಸಿ ಪರಿಸರ ಸ್ನೇಹದ ಸಂದೇಶ ಹರಡಿದರು. ಇದು ಸೈಕಲ್ ಮಾರಾಟಗಾರರು ಮತ್ತು ಬೈಸಿಕಲ್ ಆಸಕ್ತರ ಒಂದು ವಾರ್ಷಿಕ ಸಭೆಯಾಗಿಯೂ ಮಾರ್ಪಟ್ಟಿತ್ತು. ತಮ್ಮ ದೈನಂದಿನ ಚಟುವಟಿಕೆಯಾಗಿ ಸೈಕ್ಲಿಂಗ್ ಅಭ್ಯಾಸ ಮಾಡುವ ಹೊಸ ಸವಾರರಿಗೆ ಲಭ್ಯವಿರುವ ವಿವಿಧ ಅವಕಾಶಗಳ ಬಗ್ಗೆ ಮಾಹಿತಿ ನೀಡಲಾಯಿತು.
ಸೈಕಲ್ ಮಾರಾಟಗಾರರು ಕಾರ್ಯಕ್ರಮ ದಲ್ಲಿ ಹೊಸ ಉತ್ಪನ್ನಗಳನ್ನು ಮತ್ತು ಸೇವೆಗಳನ್ನು ಪ್ರದರ್ಶಿಸಿದರು. ಸಂಸ್ಥೆ ಸಂಸ್ಥಾಪಕ ಮಂಜೇಶ್ ಚಂದ್ರಶೇಖರ್ ಮಾತನಾಡಿ, ನಗರದ ಸೈಕಲ್ ಉತ್ಸಾಹಿಗಳಲ್ಲಿ ಸೈಕ್ಲಿಂಗ್ ಹವ್ಯಾಸ ಜನಪ್ರಿಯಗೊಳಿಸುವುದು ಇಂದಿನ ಈ ಆಚರಣೆಯ ಉದ್ದೇಶವಾಗಿದೆ. ಪ್ರತಿ ವರ್ಷ ಆಚರಣೆಯಲ್ಲಿ ಹೊಸತನ ತರಲು ಪ್ರಯತ್ನಿಸುತ್ತಿದ್ದೇವೆ ಎಂದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ