ಇಡ್ಲಿ, ವಡೆ, ದೋಸೆ ಮತ್ತಷ್ಟು ದುಬಾರಿ

ಹೋಟೆಲ್ ತಿಂಡಿ ಪ್ರಿಯರಿಗೊಂದು ಕಹಿ ಸುದ್ದಿ. ಇಡ್ಲಿ, ವಡೆ ಹಾಗೂ ದೋಸೆ ಮತ್ತಷ್ಟು ದುಬಾರಿಯಾಗಲಿದ್ದು, ಹೋಟೆಲ್‌ಗೆ ಹೋಗುವ ಮುನ್ನು ಒಮ್ಮೆ ಜೇಬು ಮುಟ್ಟಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಹೋಟೆಲ್ ತಿಂಡಿ ಪ್ರಿಯರಿಗೊಂದು ಕಹಿ ಸುದ್ದಿ. ಇಡ್ಲಿ, ವಡೆ ಹಾಗೂ ದೋಸೆ ಮತ್ತಷ್ಟು ದುಬಾರಿಯಾಗಲಿದ್ದು, ಹೋಟೆಲ್‌ಗೆ ಹೋಗುವ ಮುನ್ನು ಒಮ್ಮೆ ಜೇಬು ಮುಟ್ಟಿ ನೋಡಿಕೊಳ್ಳಬೇಕಾಗಿದೆ.

ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಈ ಬಾರಿ ಉದ್ದಿನ ಬೇಳೆ, ತೊಗರಿ ಬೇಳೆ ಉತ್ಪಾದನೆ ಕುಸಿತಗೊಂಡಿದೆ. ಇದರ ಪರಿಣಾಮ ಬೆಲೆ ಏರಿಕೆಯಾಗಿದೆ. ಆದ್ದರಿಂದ ಇಡ್ಲಿ, ವಡೆ, ದೋಸೆಗಳ ಬೆಲೆಯನ್ನು ಸುಮಾರು 5 ರುಪಾಯಿವರೆಗೆ ಹೆಚ್ಚಿಸಲು ಹೋಟೆಲ್ ಮಾಲೀಕರು ಮುಂದಾಗಿದ್ದಾರೆ.

ಬೆಂಗಳೂರಿನ ಸಾಮಾನ್ಯ ಹೋಟೆಲ್‌ಗಳಲ್ಲಿ 2 ಇಡ್ಲಿ ಬೆಲೆ 20, ವಡೆ ಒಂದಕ್ಕೆ 15 ರಿಂದ 20 ರುಪಾಯಿ ಇದೆ. 30 ರಿಂದ 35 ರುಪಾಯಿಗೆ ದೋಸೆ ದೊರೆಯುತ್ತದೆ. ಬೇರೆ-ಬೇರೆ ನಗರಗಳಲ್ಲಿ ದರದಲ್ಲಿ ಕೆಲವು ವ್ಯತ್ಯಾಸಗಳಿಗೆ. ಸದ್ಯ, ದರ ಏರಿಕೆಯಾದರೆ ಇಡ್ಲಿ, ವಡೆ, ದೋಸೆ ಬೆಲೆ ಸುಮಾರು 5 ರುಪಾಯಿ ಹೆಚ್ಚಾಗಲಿದೆ.

ಹೋಟೆಲ್ ಮಾಲೀಕರ ಸಂಘ ದರ ಏರಿಕೆ ಬಗ್ಗೆ ನಿರ್ಧಾರ ಕೈಗೊಳ್ಳಲು ಹೋಟೆಲ್ ಮಾಲೀಕರಿಗೆ ಅವಕಾಶ ನೀಡಿದೆ. ಉತ್ತಮ ಗುಣಮಟ್ಟದ ಉದ್ದಿನ ಬೇಳೆ ಮತ್ತು ತೊಗರಿ ಬೇಳೆ ಬೆಲೆ ಕೆಜಿಗೆ 190 ರುಪಾಯಿ ಗಡಿದಾಟಿದೆ. ಆದ್ದರಿಂದ ದರ ಏರಿಕೆ ಮಾಡುತ್ತೇವೆ ಎಂಬುದು ಹೋಟೆಲ್ ಮಾಲೀಕರ ವಾದ.

ಈ ಕುರಿತು ಮಾಹಿತಿ ನೀಡಿದ ಬೆಂಗಳೂರಿನ ಕತ್ರಿಗುಪ್ಪೆಯಲ್ಲಿನ ಅನ್ನ ಕುಟೀರ ಹೋಟೆಲ್ ಮಾಲೀಕ ಹಾಗೂ ಬೃಹತ್ ಬೆಂಗಳೂರು ಹೋಟೆಲುಗಳ ಸಂಘದ ಅಧ್ಯಕ್ಷ ಚಂದ್ರಶೇಖರ ಹೆಬ್ಬಾರ್ ಅವರು,  'ಇಡ್ಲಿ, ದೋಸೆ, ವಡೆಗಳ ಬೆಲೆಗಳು ಮಾತ್ರ ಹೆಚ್ಚಾಗಲಿವೆ' ಎಂದು ಹೇಳಿದ್ದಾರೆ.

'ದಕ್ಷಿಣ ಭಾರತದ ಉಪಹಾರಗಳಾದ ಇಡ್ಲಿ, ವಡೆ, ದೋಸೆಯನ್ನು ಹೆಚ್ಚಾಗಿ ಮಾಡುವ ಹೋಟೆಲ್‌ಗಳಿಗೆ ಉದ್ದಿನ ಬೇಳೆ ಮತ್ತು ತೊಗರಿ ಬೇಳೆ ಬೆಲೆಗಳ ಹೆಚ್ಚಳದಿಂದ ನಷ್ಟ ಉಂಟಾಗುತ್ತಿದೆ. ಆದ್ದರಿಂದ, ಬೆಲೆ ಹೆಚ್ಚಳ ಅನಿವಾರ್ಯವಾಗಿದೆ' ಎಂದು ಹೆಬ್ಬಾರ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com