ದಾದಿಯರ ಸಮಸ್ಯೆ ಕೇಳುತ್ತಿಲ್ಲ ಅಧಿಕಾರಿಗಳು

ಕಟ್ಟಡದ ಮೇಲಿಂದ ಬಿದ್ದು ಸಾವಿಗೀಡಾದ ಬಾಲಕಿ ಗಗನಾ ಪ್ರಕರಣ ಮತ್ತು ಕಿಮ್ಸ್ ನ ಶುಶ್ರೂಷಕರ ಸಮಸ್ಯೆ ಪರಿಹರಿಸಲು ಅಧಿಕಾರಿಗಳು ಪ್ರಯತ್ನಿಸಿಲ್ಲ ಎಂದು ಮಹಿಳೆ-ಮಕ್ಕಳ ಮೇಲಿನ ದೌರ್ಜನ್ಯ ತಡೆ ಸಲಹಾ ಸಮಿತಿ ಅಧ್ಯಕ್ಷ ವಿ.ಎಸ್. ಉಗ್ರಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ...
ಮಹಿಳೆ-ಮಕ್ಕಳ ಮೇಲಿನ ದೌರ್ಜನ್ಯ ತಡೆ ಸಲಹಾ ಸಮಿತಿ ಅಧ್ಯಕ್ಷ ವಿ.ಎಸ್. ಉಗ್ರಪ್ಪ (ಸಂಗ್ರಹ ಚಿತ್ರ)
ಮಹಿಳೆ-ಮಕ್ಕಳ ಮೇಲಿನ ದೌರ್ಜನ್ಯ ತಡೆ ಸಲಹಾ ಸಮಿತಿ ಅಧ್ಯಕ್ಷ ವಿ.ಎಸ್. ಉಗ್ರಪ್ಪ (ಸಂಗ್ರಹ ಚಿತ್ರ)

ಬೆಂಗಳೂರು: ಕಟ್ಟಡದ ಮೇಲಿಂದ ಬಿದ್ದು ಸಾವಿಗೀಡಾದ ಬಾಲಕಿ ಗಗನಾ ಪ್ರಕರಣ ಮತ್ತು ಕಿಮ್ಸ್ ನ ಶುಶ್ರೂಷಕರ ಸಮಸ್ಯೆ ಪರಿಹರಿಸಲು ಅಧಿಕಾರಿಗಳು ಪ್ರಯತ್ನಿಸಿಲ್ಲ ಎಂದು ಮಹಿಳೆ-ಮಕ್ಕಳ ಮೇಲಿನ ದೌರ್ಜನ್ಯ ತಡೆ ಸಲಹಾ ಸಮಿತಿ ಅಧ್ಯಕ್ಷ ವಿ.ಎಸ್. ಉಗ್ರಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ``ಕಿಮ್ಸ್ ಶುಶ್ರೂಷಕಿಯರು ಆಡಳಿತ ಮಂಡಳಿ ವಿರುದ್ಧ ನಡೆಸುತ್ತಿರುವ ಪ್ರತಿಭಟನೆ ಸ್ಥಳಕ್ಕೆ ಸಮಿತಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿತು. ಈ ವೇಳೆ ಶುಶ್ರೂಷಕಿಯರ ದಯನೀಯ ಸ್ಥಿತಿ ಮನವರಿಕೆಯಾಗಿದೆ. ಪ್ರತಿಭಟನೆ ನಡೆಸುತ್ತಿರುವ ಇಬ್ಬರು ಶುಶ್ರೂಷಕರಿಗೆ ಗರ್ಭಪಾತವಾಗಿದೆ. ಇನ್ನೊಬ್ಬರಿಗೆ ನಿಶ್ಚಿತಾರ್ಥದ ದಿನಕ್ಕೆ ವೇತನ ಕಡಿತ ರಜೆ ಮಾಡಲಾಗಿದೆ,'' ಎಂದರು.

ಕಿಮ್ಸ್ ನೇಮಕಾತಿ ವಿಚಾರದಲ್ಲಿ ಸರ್ಕಾರವೇ ಸದನದಲ್ಲಿ ನೀಡಿದ ಮಾಹಿತಿಯಂತೆ ಎಲ್ಲಾ ಶುಶ್ರೂಷಕರು ಕಾಯಂ ಸೇವೆಯಲ್ಲಿದ್ದಾರೆ. ಆದರೆ, ಪೂರ್ಣ ಪ್ರಮಾಣದಲ್ಲಿ ಎಲ್ಲರೂ ಕಾಯಂ ಅಲ್ಲ ಎಂಬ ಆದೇಶ ಲಭ್ಯವಾಗಿದೆ. ವೈದ್ಯಕೀಯ ಶಿಕ್ಷಣ ಇಲಾಖೆ, ಸಹಕಾರ ಇಲಾಖೆ ಅಧಿಕಾರಿಗಳು ಇದ್ಯಾವುದನ್ನೂ ಪರಿಶೀಲಿಸಿಲ್ಲ ಎಂದರು.

ಗಗನಾ ಸಾವು ಪ್ರಕರಣದಲ್ಲಿ ವೈದ್ಯರ ನಡುವಿನ ಸಂವಹನ ಕೊರತೆ ಕಂಡುಬಂದಿದೆ. ಈ ಸಂದರ್ಭದಲ್ಲಾದರೂ ಸರ್ಕಾರ ಎಚ್ಚೆತ್ತು ಮುಂದೆ ಇಂತಹ ಪ್ರಕರಣ ನಡೆಯದಂತೆ ಎಚ್ಚರಿಕೆ ವಹಿಸಬೇಕಾಗಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com