ಮಂಗಳೂರು: ಸಂಶೋಧಕ ಡಾ.ಎಂ.ಎಂ. ಕಲಬುರ್ಗಿ ಹತ್ಯೆ, ಸುಧೀಂದ್ರ ಕುಲಕರ್ಣಿ ಮೇಲೆ ನಡೆದ ಅಮಾನವೀಯ ಕೃತ್ಯ ಹಾಗೂ ಇತರ ಬುದ್ಧಿಜೀವಿಗಳ ಹತ್ಯೆ ಖಂಡಿಸಿ 2002ರಲ್ಲಿ ರಾಜ್ಯದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನೀಡಿದ್ದ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಹಾಗೂ ರು.10 ಸಾವಿರ ಗೌರವಧನವನ್ನು ಸರ್ಕಾರಕ್ಕೆ ವಾಪಸ್ ಮಾಡಲು ಮಂಗಳೂರಿನ ಅನುಪಮಾ ಮಹಿಳಾ ಮಾಸಿಕ ಸಂಪಾದಕಿ ಶಹನಾಝ್ ಎಂ. ನಿರ್ಧರಿಸಿದ್ದಾರೆ. ಬುಧವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ದಾದ್ರಿಯಲ್ಲಿ ಅಮಾಯಕ ಅಖ್ಲಾಕ್ ಎಂಬ ವೃದ್ಧರನ್ನು ಕೊಂದಿರುವುದು ಹಾಗೂ ದಲಿತ ದಂಪತಿಗಳನ್ನು ಪೊಲೀಸರೇ ನಗ್ನಗೊಳಿಸಿರುವ ಹೇಯ ಕೃತ್ಯ ದಿಗ್ಭ್ರಮೆ ಮೂಡಿಸಿದೆ. ದೇಶದಲ್ಲಿ ಹೆಚ್ಚುತ್ತಿ ರುವ ಕೋಮು ದ್ವೇಷ, ಹತ್ಯೆಗಳನ್ನುನಿಗ್ರಹಿಸುವಲ್ಲಿ ಸರ್ಕಾರಗಳು ಸಂಪೂರ್ಣ ವಿಫಲವಾಗಿರುವುದು ಬೇಸರ ತರಿಸಿದೆ. ಹಾಗಾಗಿ ನಗದು ಮತ್ತು ಪ್ರಶಸ್ತಿ ವಾಪಸ್ಕೊ ಡುತ್ತಿದ್ದು, ಶೀಘ್ರವೇ ಕಲಬುರ್ಗಿ ಹಂತ ಕರನ್ನು ಬಂಧಿಸುವಂತೆ ಒತ್ತಾಯಿಸುತ್ತೇನೆ ಎಂದಿದ್ದಾರೆ.