ರೊಚ್ಚಿಗೆದ್ದ ಜನರಿಂದ ಪ್ರತಿಭಟನೆ; ದೊಡ್ಡಬಳ್ಳಾಪುರ ಉದ್ವಿಗ್ನ

ದೊಡ್ಡಬಳ್ಳಾಪುರ ನಗರ ಠಾಣೆ ಪಿಎಸೈ ಜಗದೀಶ್ ಹತ್ಯೆ ಹಿನ್ನೆಲೆಯಲ್ಲಿ ನಗರ ಮತ್ತು ಗ್ರಾಮಾಂತರ ಪ್ರದೇಶ ಉದ್ವಿಗ್ನಗೊಂಡಿದೆ. ಎಲ್ಲೆಡೆ ಪ್ರತಿಭಟನೆಗಳು...
ಪಿಎಸೈ ಜಗದೀಶ್ (ಕೃಪೆ ಕೆಪಿಎನ್)
ಪಿಎಸೈ ಜಗದೀಶ್ (ಕೃಪೆ ಕೆಪಿಎನ್)
ದೊಡ್ಡಬಳ್ಳಾಪುರ : ದೊಡ್ಡಬಳ್ಳಾಪುರ ನಗರ ಠಾಣೆ ಪಿಎಸೈ ಜಗದೀಶ್ ಹತ್ಯೆ ಹಿನ್ನೆಲೆಯಲ್ಲಿ ನಗರ ಮತ್ತು ಗ್ರಾಮಾಂತರ ಪ್ರದೇಶ ಉದ್ವಿಗ್ನಗೊಂಡಿದೆ. ಎಲ್ಲೆಡೆ ಪ್ರತಿಭಟನೆಗಳು ನಡೆಯುತ್ತಿದ್ದು ಹತ್ತಾರು ವೃತ್ತಗಳಲ್ಲಿ ಟೈರ್‍ಗಳಿಗೆ ಬೆಂಕಿ ಹಚ್ಚಿ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಸಾರಿಗೆ ಸಂಚಾರ ಸಂಪೂರ್ಣ ಸ್ಥಬ್ದಗೊಂಡಿದ್ದು, ಜನಜೀವನ ಅಸ್ತವ್ಯಸ್ಥವಾಗಿದೆ. ಶುಕ್ರವಾರ ಮಧ್ಯಾಹ್ನ ಪಿಎಸೈ ಹತ್ಯೆ ವಿಷಯ ತಿಳಿಯುತ್ತಿದ್ದಂತೆ ಎಲ್ಲೆಡೆ ನೀರವ ಮೌನ ಆವರಿಸಿತು. ಪೊಲೀಸ್ ಅಧಿಕಾರಿ ಹತ್ಯೆ ವಿಚಾರ ಕೇಳಿ ಆಘಾತಗೊಂಡ ಜನ ಸ್ವಯಂಪ್ರೇರಿತರಾಗಿ ಅಂಗಡಿ ಮುಂಗಟ್ಟು ಮುಚ್ಚಿ ಸ್ವಯಂಘೋಷಿತ ಬಂದ್ ಆಚರಿಸಿದರು.
ರಾಷ್ಟ್ರೀಯ ಹೆದ್ದಾರಿ ತಡೆ: ಘಟನೆ ಖಂಡಿಸಿ, ಪೊಲೀಸರಿಗೆ ರಕ್ಷಣೆ ಒದಗಿಸಲು ಆಗ್ರಹಿಸಿ ಇಲ್ಲಿನ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ನೇತೃತ್ವದಲ್ಲಿ ಡಿಕ್ರಾಸ್ ವೃತ್ತದಲ್ಲಿ ಹೆದ್ದಾರಿ ತಡೆ ಮಾಡಿದೆ.
ಮಾನವ ಸರಪಳಿ: ಇಲ್ಲಿನ ಪ್ರವಾಸಿ ಮಂದಿರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಜಯಕರ್ನಾಟಕ ಸಂಘಟನೆ ನೇತೃತ್ವದಲ್ಲಿ ಮಾನವ ಸರಪಳಿ ನಿರ್ಮಿಸಿ ವಾಹನ ತಡೆಯಲಾಯಿತು. ಕೆಲಕಾಲ ವಾಹನ ಚಾಲಕರೊಂದಿಗೆ ವಾಗ್ವಾದ ನಡೆದ ಹಿನ್ನೆ ಲೆಯಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಸದಾ ಗಿಜಿಗುಡುತ್ತಿದ್ದ ಬಸ್‍ನಿಲ್ದಾಣದಲ್ಲಿ ಪಿಎಸೈ ಜಗದೀಶ್ ಅವರ ಭಾವಚಿತ್ರವನ್ನು ರಸ್ತೆಯಲ್ಲಿಟ್ಟು ಶ್ರದಾಟಛಿಂಜಲಿ ಸಲ್ಲಿಸಲಾಯಿತು. ಇಲ್ಲಿನ ಕೊಂಗಾಡಿಯಪ್ಪ ಮುಖ್ಯ ರಸ್ತೆಯಲ್ಲಿರುವ ನಗರ ಪೊಲೀಸ್ ಹಳೆಯ ಠಾಣೆ ಮುಂದೆ ಸಾರ್ವಜನಿಕರು ಟೈರ್‍ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ ರೈಲು ನಿಲ್ದಾಣ ಬಳಿಯ ವಿ.ಕೃ.ಗೋಕಾಕ ವೃತ್ತ, ಶಾಂತಿ ನಗರ, ತಾಲೂಕು ಕಚೇರಿ ವೃತ್ತ, ಕಾಲೇಜು ರಸ್ತೆ, ಸಂಜಯ ನಗರ, ರಂಗಪ್ಪವೃತ್ತ, ಪಾಲನಜೋಗಳ್ಳಿ ಮತ್ತಿತರಪ್ರದೇಶಗಳಲ್ಲಿ ಧರಣಿ, ಪ್ರತಿಭಟನೆಗಳು ನಡೆದವು. ಪೊಲೀಸ್ ಠಾಣೆಯಲ್ಲಿ ಮಾತ್ರ ಸ್ಮಶಾನ ಮೌನ ಆವರಿಸಿತ್ತು.
ಜಗದೀಶ್ ಅಂತಿಮ ದರ್ಶನಕ್ಕೆ ನೂಕುನುಗ್ಗಲು
ದೊಡ್ಡಬಳ್ಳಾಪುರ: ನೆಲಮಂಗಲದಲ್ಲಿ ಸಾವನ್ನಪ್ಪಿದ ಎಸೈ ಜಗದೀಶ್ ಅವರ ಮೃತ ಶರೀರವನ್ನು ಶವಪರೀಕ್ಷೆ ನಂತರ ಶುಕ್ರವಾರ ರಾತ್ರಿ7.30 ರ ವೇಳೆಯಲ್ಲಿ ದೊಡ್ಡಬಳ್ಳಾಪುರಕ್ಕೆ ತರಲಾಯಿತು. ನಂತರ ಇಲ್ಲಿನ ನಗರ ಠಾಣೆ ಆವರಣದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕಿಡಲಾಗಿತ್ತು. ಅಂತಿಮ ದರ್ಶನಕ್ಕೆ ಸಾವಿರಾರು ಜನ ನೆರೆದಿದ್ದರಿಂದ ನೂಕು ನುಗ್ಗಲು ಉಂಟಾಗಿತ್ತು. ದೊಡ್ಡಬಳ್ಳಾಪುರದ ವಿವಿಧ ಸಂಘಟನೆಗಳು, ಸಾರ್ವಜನಿಕರು, ವಿದ್ಯಾರ್ಥಿಗಳು ಸಾವಿರಾರು ಸಂಖ್ಯೆಯಲ್ಲಿ ನೆರೆದು ಅಂತಿಮ ನಮನ ಸಲ್ಲಿಸಿದರು. ಠಾಣೆಯ ಡಿವೈಎಸ್ಪಿ ಕೋನಪ್ಪ ರೆಡ್ಡಿ ಸೇರಿದಂತೆ ಎಲ್ಲ ಸಿಬ್ಬಂದಿ ಪುಷ್ಪನಮನ ಸಲ್ಲಿಸಿದರು. ನಂತರ ಸಂಘಟನೆಗಳ ಮುಖಂಡರು, ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಸೇರಿದಂತೆ ಅನೇಕ ಗಣ್ಯರು ನಮನ ಸಲ್ಲಿಸಿದರು. ಪೊಲೀಸ್ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳು ಹಾಜರಿದ್ದರು. ನಂತರ ಮೃತ ದೇಹವನ್ನು ಜಗದೀಶ್ ಹುಟ್ಟೂರಾದ ಮಲ್ಲಾಪುರಕ್ಕೆ ಕಳುಹಿಸಲಾಯಿತು. ಈ ವೇಳೆ ಜಗದೀಶ್ ತಾಯಿ, ಪತ್ನಿ ಸೇರಿದಂತೆ ಕುಟುಂಬ ಸದಸ್ಯರ ರೋದನ ಮುಗಿಲು ಮುಟ್ಟಿತ್ತು. ಅದೇ ರೀತಿ ಸಹೋದ್ಯೋಗಿಗಳು ಸೇರಿದಂತೆ ಠಾಣೆಯ ಸಿಬ್ಬಂದಿ ಕೂಡ ಕಣ್ಣೀರಿಟ್ಟ ದೃಶ್ಯ ಮನ ಕಲಕುವಂತಿತ್ತು.
ಸಿಎಂ ಭೇಟಿಗೆ ಆಗ್ರಹ
ದೊಡ್ಡಬಳ್ಳಾಪುರ: ಪಿಎಸೈ ಜಗದೀಶ್ ಹತ್ಯೆಪ್ರಕರಣದ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಗಂಭೀರ ಹೊಣೆ ಹೊರಬೇಕು. ಸ್ಥಳಕ್ಕೆ ಸಿಎಂಸಿದ್ದರಾಮಯ್ಯ, ಗೃಹಸಚಿವ ಕೆ.ಜೆ.ಜಾರ್ಜ್ ಬರುವವರೆಗೂ ಜಗದೀಶ್ಮೃ ತದೇಹವನ್ನು ತೆಗೆದುಕೊಂಡು ಹೋಗಲು ಬಿಡಲ್ಲ ಎಂದು ಪಟ್ಟುಹಿಡಿದ ನೂರಾರು ಸಾರ್ವಜನಿಕರು ಕೋಲಾರ ಶಾಸಕ ವರ್ತೂರು ಪ್ರಕಾಶ್ ನೇತೃತ್ವದಲ್ಲಿ ದೊಡ್ಡಬಳ್ಳಾಪುರ ಠಾಣೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಐಜಿಅರುಣ್  ಚಕ್ರವರ್ತಿ ಸ್ಥಳಕ್ಕೆ ಆಗಮಿಸಿ ನಡೆಸಿದ ಓಲೈಕೆ ಯತ್ನ ವಿಫಲವಾಯಿತು. ಪರಿಹಾರ ಮತ್ತು ಸೂಕ್ತ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ ವಿಕೋಪಕ್ಕೆ ತಿರುಗಿತು.
ವ್ಯವಸ್ಥೆಗೆ ಮಗ ಬಲಿ
ಮಗ ವ್ಯವಸ್ಥೆಗೆ ಬಲಿಯಾಗಿದ್ದಾನೆ. ಆತನ ಸಾವಿಗೆ ಯಾರನ್ನು ದೂಷಿಸಲು ಸಾಧ್ಯವಿಲ್ಲ. ದೂಷಿಸಿದರೆ ಕಳೆದುಕೊಂಡಿರುವ ಮಗ ಎದ್ದು ಬರುತ್ತಾನೆಯೇ ಎಂದು ಮೃತ ಜಗದೀಶ್ ತಂದೆ ನಿವೃತ್ತ ಎಎಸ್ಸೈ ಶ್ರಿನಿವಾಸಯ್ಯ ಪ್ರಶ್ನಿಸಿದರು.
2 ವರ್ಷ ಪೇದೆಯಾಗಿ ಸೇವೆ ಸಲ್ಲಿಸಿದ ಜಗದೀಶ್
ಸೂಲಿಬೆಲೆ: ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಬಳಿ ಬೈಕ್ ಕಳ್ಳರಿಂದ ಹತ್ಯೆಗೀಡಾದ ದೊಡ್ಡ ಬಳ್ಳಾಪುರ ಟೌನ್ ಪಿಸೈ ಆಗಿದ್ದ ಜಗದೀಶ್, ಹೊಸಕೋಟೆ ತಾಲೂಕಿನ ಸೂಲಿಬೆಲೆಯಲ್ಲಿ ಎರಡು ವರ್ಷ ಪೇದೆಯಾಗಿ ಸೇವೆ ಸಲ್ಲಿಸಿ ಸ್ಥಳೀಯರ ಜನಮನ ಗೆದ್ದಿದ್ದರು. ಹೊಸಕೋಟೆ ತಾಲೂಕು ಸೂಲಿಬೆಲೆ ಹೋಬಳಿ ಕೇಂದ್ರದಲ್ಲಿ ಮೊದಲು ಪೊಲೀಸ್ ಠಾಣೆ ಹೊರ ಠಾಣೆಯಾಗಿ ಕಾರ್ಯ ನಿರ್ವಹಿಸುತ್ತಿತ್ತು. 2007 ರಲ್ಲಿ ಮುಖ್ಯ ಠಾಣೆಯಾಗಿ ಮೇಲ್ದರ್ಜೇಗೇರಿದ ಮೇಲೆ ಬೆಂಗಳೂರಿನ ವರ್ತೂರು ಪೊಲೀಸ್ ಠಾಣೆಯನ್ನು ನಗರ ವ್ಯಾಪ್ತಿಗೆ ತಂದ ಕಾರಣ ಅಲ್ಲಿದ್ದ ಸಿಬ್ಬಂದಿ ಸಹಿತ ಎಲ್ಲವನ್ನು ಸೂಲಿಬೆಲೆ ಹೊಸ ಠಾಣೆಗೆ ವರ್ಗಾವಣೆ ಮಾಡಲಾಗಿತ್ತು. 2007 ರಲ್ಲಿ ಸೂಲಿಬೆಲೆಗೆ ಸಾಮಾನ್ಯ ಪೇದೆಯಾಗಿ ಬಂದ ಜಗದೀಶ್ ಆನಂತರ ಪಿಎಸ್‍ಐ ಪರೀಕ್ಷೆ ಬರೆಯಲು ಶುರು ಮಾಡಿ ದ್ದರು.ಕೆಲಸದ ವಿಷಯದಲ್ಲಿ ಪ್ರಾಮಾಣಿಕರಾಗಿದ್ದರುಎಂದು ಸ್ಥಳೀಯರು ನೆನಪಿಸಿಕೊಳ್ಳುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com