ಭಜರಂಗ ದಳ ಕಾರ್ಯಕರ್ತನ ಕೊಲೆ ಆರೋಪಿಗಳ ಸೆರೆ

ಮೂಡುಬಿದಿರೆ ಹೂವಿನ ವ್ಯಾಪಾರಿ, ಭಜರಂಗ ದಳ ಕಾರ್ಯಕರ್ತ ಪ್ರಶಾಂತ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪ್ರಮುಖ ಆರೋಪಿ ಮಹಮ್ಮದ್ ಹನೀಫ್ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಮಂಗಳೂರು: ಮೂಡುಬಿದಿರೆ ಹೂವಿನ ವ್ಯಾಪಾರಿ, ಭಜರಂಗ ದಳ ಕಾರ್ಯಕರ್ತ ಪ್ರಶಾಂತ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪ್ರಮುಖ ಆರೋಪಿ ಮಹಮ್ಮದ್ ಹನೀಫ್  ಸೇರಿದಂತೆ ನಾಲ್ವ
ರನ್ನು ಮಂಗಳೂರಿನ ವಿಶೇಷ ಪೊಲೀಸ್ ತಂಡ ಬಂಧಿಸಿದೆ.  ಪ್ರಮುಖ ಆರೋಪಿ ಆದ್ಯಪಾಡಿಯ ಮಹ ಮ್ಮದ್  ಹನೀಫ್ (36), ಮೂಡುಬಿದಿರೆ ಮಹಮ್ಮದ್ ಇಲ್ಯಾಸ್ 
(27), ನರಿಂಗಾನ ಇಬ್ರಾಹಿಂ ಲಿಯಾತ್(26), ಕಿಲ್ಪಾಡಿ ಅಬ್ದುಲ್ ರಶೀದ್(39) ಬಂಧಿತರು. ಬಂಧಿತರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದ್ದು, ಪ್ರಮುಖ ಆರೋಪಿಯನ್ನು 10 ದಿನ ಕಾಲ  ಪೊಲೀಸ್ ಕಸ್ಟಡಿ ಕೋರಲಾಗುವುದು ಎಂದು ನಗರ  ಪೊಲೀಸ್ ಆಯುಕ್ತ  ಮುರುಗನ್ ಪತ್ರಿಕಾಗೋಷ್ಠಿಯಲ್ಲಿ  ವಿವರ ನೀಡಿದರು. ಪ್ರಮುಖ ಆರೋಪಿ ಹನೀಫ್ ನೀಡಿದ ಮಾಹಿತಿಯಂತೆ ಈ ಪ್ರಕರಣದಲ್ಲಿ 6 ಮಂದಿ ಆರೋಪಿಗಳಿದ್ದು, ಇನ್ನುಳಿದ ಆರೋ ಪಿಗಳನ್ನು ಶೀಗ್ಱ ಬಂಧಿಸಲಾಗುವುದು. ಹನೀಫ್ ಕೊಲೆ  ನಡೆಸಿ ದ್ದರೆ, ಉಳಿದವರು ಸಹಕರಿಸಿದ್ದರು ಎಂಬುದು ತನಿಖೆಯಿಂದ ಗೊತ್ತಾಗಿದೆ. ಈ ಆರೋಪಿಗಳು ದ್ವೇಷದಿಂದ ಈ ಕೃತ್ಯವೆಸಗಿರುವುದನ್ನು ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದರು. ಅ.8ರಂದು ಆರೋಪಿಗಳು ಬೈಕ್‍ನಲ್ಲಿ ಬಂದು ಮಾರಕಾಯುಧದಿಂದ ಹೂವಿನ ವ್ಯಾಪಾರ ನಡೆಸುತ್ತಿದ್ದ ಪ್ರಶಾಂತ್‍ನ್ನು ಇರಿದು ಕೊಲೆ ಮಾಡಿ ಪರಾರಿಯಾಗಿದ್ದರು. ಇದೇ ಆರೋಪಿಗಳು ಸೆ. 20ರಂದು  ಹಂಡೇಲಿನಲ್ಲಿ ಅಶೋಕ್ ಹಾಗೂ ಹಾಗೂ ವಾಸು ಎಂಬವರಿಗೆ ಹಲ್ಲೆ ನಡೆಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com